ಬ್ಯಾಂಕ್‌ ಖಾತೆ ಬದಲಾವಣೆಗೆ ಗ್ರಾಹಕರ ಪರದಾಟ

ಹಣ ಪಡೆಯಲಾಗದ ಪರಿಸ್ಥಿತಿ ನಿರ್ಮಾಣ

Team Udayavani, Aug 31, 2020, 1:27 PM IST

ಬ್ಯಾಂಕ್‌ ಖಾತೆ ಬದಲಾವಣೆಗೆ ಗ್ರಾಹಕರ ಪರದಾಟ

ಭಾರತೀನಗರ: ಬ್ಯಾಂಕುಗಳ ವಿಲೀನದಿಂದ ಗ್ರಾಹಕರು ತಮ್ಮ ಖಾತೆಯ ಬದಲಾವಣೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬ್ಯಾಂಕಿನ ಶಾಖಾ ಕಚೇರಿಯ ಮುಂದೆ ಗ್ರಾಹಕರು ಸಾಲುಗಟ್ಟಿ ನಿಲ್ಲಿವಂತಾಗಿದೆ.

ಇದು ಇಲ್ಲಿನ ವಿಜಯ ಬ್ಯಾಂಕ್‌ (ಬ್ಯಾಂಕ್‌ ಆಫ್ ಬರೋಡಾ) ಶಾಖಾ ಕಚೇರಿಯಲ್ಲಿ ದಿನನಿತ್ಯ ಗ್ರಾಹಕರು, ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಜಯ ಬ್ಯಾಂಕ್‌ 1977ರಲ್ಲಿ ಭಾರತೀನಗರದಲ್ಲಿ ಪ್ರಾರಂಭವಾದಿದ್ದು, ಇಲ್ಲಿಯವರೆಗೆ 48 ಸಾವಿರ ಖಾತೆದಾರರನ್ನು ಹೊಂದಿದೆ. ಸರ್ಕಾರಿ ಸೌಲಭ್ಯ ಪಡೆಯುವ 9 ಸಾವಿರ ಖಾತೆದಾರರಿದ್ದಾರೆ. ಆದರೆ, ಬ್ಯಾಂಕ್‌ ಆಫ್ ಬರೋಡಾ ಆದ ನಂತರ ಸಮಸ್ಯೆಗಳು ಗ್ರಾಹಕರಿಗೆ ಪ್ರಾರಂಭವಾಗಿದೆ.

ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ: ಬ್ಯಾಂಕ್‌ ಬದಲಾದಂತೆ ಸಾಫ್ಟ್ವೇರ್‌ ಬದಲಾಗಬೇಕು. ಆದರೆ, ಅದು ಆಗಲಿಲ್ಲ. ಕೆಲವರು ಎಟಿಎಂನಲ್ಲಿ ಹಣ ಪಡೆಯಲು ಹೋದರೆ ಬ್ಯಾಲೆನ್ಸ್‌ ಇಲ್ಲ ಎಂಬ ಸಂದೇಶ ಬರುತ್ತದೆ. ಮತ್ತೂಂದೆಡೆ ಖಾತೆದಾರರು ಬ್ಯಾಂಕ್‌ ತೆರಳಿದರೆ ಹಣ ತೆಗೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾತೆದಾರರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯ ಬ್ಯಾಂಕ್‌ 2019ರಲ್ಲಿ ಬ್ಯಾಂಕ್‌ ಆಫ್ ಬರೋಡಾ ಜತೆ ವಿಲೀನವಾಯಿತು. ನಂತರ ದಿನಗಳಲ್ಲಿ ಖಾತೆದಾರರು ವ್ಯವಹಾರ ನಡೆಸುತ್ತಿದ್ದರು. ನಂತರ ಆಗಸ್ಟ್‌ 15ರಿಂದ ಖಾತೆಗಳೆಲ್ಲ ಸ್ಥಗಿತವಾಗಿದೆ. ಖಾತೆದಾರರು ವ್ಯವಹರಿಸಲಾಗದ ಪರಿಸ್ಥಿತಿ ನಿರ್ಮಾಣವಾಯಿತು.

ಬ್ಯಾಂಕ್‌ ಮುಂದೆ ಜನದಟ್ಟಣೆ: ವೃದ್ಧಾಪ್ಯ ವೇತನ ಪಡೆಯಲು ವೃದ್ಧರೆ ಹೆಚ್ಚಾಗಿ ಬರುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಬ್ಯಾಂಕ್‌ ಮುಂದೆ ಜನದಟ್ಟಣೆ ಕಂಡು ಬರುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲುವಂತೆ ಬ್ಯಾಂಕ್‌ ಸಿಬ್ಬಂದಿ ಸಲಹೆ ನೀಡಿದರೂ, ಖಾತೆದಾರರು ಮಾತ್ರ ಇದಕ್ಕೆ ಯಾವುದೇ ಕ್ಯಾರೆ ಎನ್ನುತ್ತಿಲ್ಲ. ಬ್ಯಾಂಕ್‌ ವೀಲಿನವಾದ ನಂತರ ಹೊಸ ತಂತ್ರಾಂಶದ ಬಗ್ಗೆ ಸಿಬ್ಬಂದಿ ಇನ್ನಷ್ಟು ತಿಳಿಯಬೇಕಾಗಿದೆ. ನೆಟ್‌ವರ್ಕ್‌ ಸಮಸ್ಯೆಯಿಂದ ಬ್ಯಾಂಕ್‌ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಸಾರ್ವಜನಿಕರು ಬ್ಯಾಂಕ್‌ ಮುಂದೆ ಸರದಿ ಸಾಲು ನಿಲ್ಲತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಬ್ಯಾಂಕ್‌ ಅಧಿಕಾರಿಗಳು ವಿಫ‌ಲರಾಗಿದ್ದಾರೆ. ಕೋವಿಡ್ ಹೆಚ್ಚಾಗುತ್ತಿದ್ದು, ಒಂದೆಡೆ ಹೆಚ್ಚು ಜನ ಸೇರಲು ನಿಷೇಧಿಸಿದೆ. ಇದನ್ನು ಖಾತೆದಾರರು ಅರಿತುಕೊಳ್ಳಬೇಕಾಗಿದೆ. ಈ ಬಗ್ಗೆ ಬಾಂಕ್‌ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸಾಮಾಜಿಕ ಅಂತರವಿಲ್ಲ :  ಈ ಬಗ್ಗೆ ವಿಚಾರಿಸಲು ಬ್ಯಾಂಕ್‌ ತೆರಳಿದ ಖಾತೆದಾರರಿಗೆ ಮತ್ತೂಮ್ಮೆ ಆಧಾರ್‌, ಪಾನ್‌ ಕಾರ್ಡ್‌ ನೀಡಿ ಖಾತೆಯನ್ನು ಚಾಲನೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದರಿಂದ ದಿನ ನಿತ್ಯ ಬ್ಯಾಂಕ್‌ ಮುಂದೆ ಜನವೋ ಜನ ಯಾವುದೇ ಸಾಮಾಜಿಕ ಅಂತರವಿಲ್ಲದೆ ಮುಗಿ ಬಿಳುತಿದ್ದರು. ವಿವಿಧ ಯೋಜನೆಯ ಹಣ ಪಡೆಯಲು ಖಾತೆದಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಬ್ಯಾಂಕ್‌ ಸಮೀಪದ ಅಂಗಡಿಗಳಿಗೂ ತೊಂದರೆಯಾಗುತಿದ್ದರೂ, ಬ್ಯಾಂಕ್‌ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತಿದೆ.

ವಿಜಯ ಬ್ಯಾಂಕ್‌- ಬ್ಯಾಂಕ್‌ ಆಫ್ ಬರೋಡಾಗೆ ವಿಲೀನವಾದ ಮೇಲೆ ಗ್ರಾಹಕರಿಗೆ ಸಮಸ್ಯೆಯಾಗಿದೆ. ನಮ್ಮ ಸಿಬ್ಬಂದಿ ವೇಗವಾಗಿ ಎಲ್ಲಾ ಗ್ರಾಹಕರಿಗೂ ಖಾತೆ ಬದಲಾವಣೆ ಬಗ್ಗೆ ಮಾಹಿತಿ ನೀಡಿ, ಸಮಸ್ಯೆ ಪರಿಹರಿಸುತ್ತಿದ್ದಾರೆ. ಗ್ರಾಹಕರು ಬ್ಯಾಂಕ್‌ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಸರ್ಕಾರಿ ಯೋಜನೆ ಪಡೆಯುವ ಖಾತೆದಾರರ ಮನೆ ಬಳಿಯೇ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಆದರು ಸಹ ಹಣ ಬಂದಿದೆಯೇ ಎಂದು ಪಾಸ್‌ಬುಕ್‌ ಹಿಡಿದು ಬರುತ್ತಾರೆ. ಡಿ.ಎನ್‌.ಗಿರೀಶ್‌, ಬ್ಯಾಂಕ್‌ ಶಾಖೆಯ ಹಿರಿಯ ಪ್ರಬಂಧಕ, ವಿಜಯ ಬ್ಯಾಂಕ್‌ (ಬ್ಯಾಂಕ್‌ ಆಫ್ ಬರೋಡಾ)

ಕಳೆದ 15 ದಿನದಿಂದ ನೂರಾರು ಮಂದಿ ಗ್ರಾಹಕರು ಬ್ಯಾಂಕ್‌ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹಣ ಅಗತ್ಯವಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಇತರರಿಗೂ ಆತಂಕ ಉಂಟುಮಾಡಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ವಿನಯ್‌, ಮೆಳ್ಳಹಳ್ಳಿ ಗ್ರಾಹಕ

ಅಣ್ಣೂರು ಸತೀಶ್‌

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.