ಪೊಲೀಸ್ ಸಹಾಯವಾಣಿ ಸಂಪರ್ಕಿಸಿ
Team Udayavani, Nov 24, 2021, 3:42 PM IST
ಶ್ರೀರಂಗಪಟ್ಟಣ: ತಕ್ಷಣದಲ್ಲಿ ನಡೆಯುವ ಅನಾಹುತ, ಅಪಘಾತ ಅವಘಡಗಳಿಗೆ ಸಹಾಯವಾಣಿಯಾಗಿ ತಕ್ಷಣದಲ್ಲಿ ನಮ್ಮ 112 ಪೊಲೀಸರನ್ನು ಸಂಪರ್ಕಿಸಿ ಎಂದು ಮುಖ್ಯ ಪೊಲೀಸ್ ಪೇದೆ ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪೊಲೀಸ್ ಸಹಾಯವಾಣಿ ವಾಹನಗಳ ಕುರಿತ ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದಂತೆ ಜಾಗೃತಿ ಮಾಡಿ ಅರಿವು ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು. ಕಾಲೇಜು, ಶಾಲೆಗಳಲ್ಲಿ ಯಾವುದೇ ಅವಘಡಗಳು ನಡೆದರೂ ರಸ್ತೆ ಅಫಘಾತ, ಕಿರಿಕಿರಿ ಸೇರಿದಂತೆ ಇತರ ಅನಾಹುತಗಳಿಗೆ 112 ಪೊಲೀಸರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ:- ಮಂಗಳೂರು : ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆಗೈದ ನಾಲ್ವರು ಆರೋಪಿಗಳ ಬಂಧನ
ತ್ವರಿತವಾಗಿ ಆ ಸ್ಥಳಕ್ಕೆ ನಾವು ಬರುತ್ತೇವೆ. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಬರುವುದರಲ್ಲಿ ನಾವು ಆ ಸ್ಥಳದಲ್ಲಿರುತ್ತೇವೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು. ಪ್ರತಿ ತಾಲೂಕಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರೂರಾಗಿ ಮುಂಜಾಗ್ರತ ಕ್ರಮಕ್ಕೆ ಸದಾ ಸಿದ್ಧರಿರುವ 112ರ ಸಹಾಯವಾಣಿ ವಾಹನ ಸ್ಥಳಕ್ಕೆ ಬರುತ್ತದೆ ಎಂದರು. ವಿದ್ಯಾರ್ಥಿಗಳು, ಪ್ರಾಂಶುಪಾಲರು, ಶಿಕ್ಷಕರು, ಜಾಗೃತಿ ನಡೆಸಿ ಅರಿವು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.