ಐಪಿಎಸ್ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಪೊಲೀಸರು
Team Udayavani, Mar 15, 2018, 6:30 AM IST
ಮಂಡ್ಯ: ರಾಜಕಾರಣಿಗಳ ಹಸ್ತಕ್ಷೇಪದ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ದೂರು ಕೊಟ್ಟಿದ್ದಾಯ್ತು.
ಈಗ ಪೊಲೀಸರ ಸರದಿ.ಐಪಿಎಸ್ ಅಧಿಕಾರಿಗಳ ಅನಿಷ್ಠ ಕಾರ್ಯವೈಖರಿ,ಪ್ರಾಮಾಣಿಕತೆ ಕೊರತೆ,ಜಾತಿ ಪದ್ಧತಿ, ಜೀತ ಪದ್ಧತಿ,ಅಧಿಕಾರ ದುರುಪಯೋಗ,ಇಲಾಖೆಯ ಘನತೆ ಕಾಪಾಡುವಲ್ಲಿ ವಿಫಲ ಸೇರಿ ಹಲವು ಅಂಶಗಳ ಕುರಿತಂತೆ
ಕರ್ನಾಟಕ ರಾಜ್ಯ ಸಶಸOಉ ಮೀಸಲು ಪಡೆಗಳ ಪೊಲೀಸ್ ಸಿಬ್ಬಂದಿ ಜಿಲ್ಲಾ ಸಂಘದ ಅಧ್ಯಕ್ಷರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಐದು ಪುಟಗಳ ಪತ್ರ ಬರೆದಿದ್ದಾರೆ.
ದೂರುಗಳೇನು?
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ.
– ಪೋಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದಟಛಿತಿ ನಿಷೇಧಿಸಿ ಭತ್ಯೆ ಜಾರಿಗೊಳಿಸಲಾಗಿದೆ. ಆದರೆ, ಈ ಬಗ್ಗೆ ಯಾವೊಂದು ಆದೇಶ, ಸುತ್ತೋಲೆ ಹೊರಬಿದ್ದಿಲ್ಲ. ಇದರ ಪರಿಣಾಮ ಐಪಿಎಸ್ ಅಧಿಕಾರಿಗಳು ಸೇವೆಗೆ ಸುಮಾರು 20ಕ್ಕಿಂತ ಹೆಚ್ಚು ಸಿಬ್ಬಂದಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಉಳಿಸಿಕೊಳ್ಳುತ್ತಿದ್ದಾರೆ.
– ಒಬ್ಬ ಪೊಲೀಸ್ ಅಧೀಕ್ಷಕ ಒಂದಕ್ಕಿಂತ ಹೆಚ್ಚು ಸರ್ಕಾರಿ ಕಾರು, ಜೀಪನ್ನು ಸ್ವಂತಕ್ಕೆ ಬಳಸುವಂತಿಲ್ಲ.ಆದರೆ, 2 ರಿಂದ 3 ವಾಹನಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಜಿಲ್ಲೆಯ ಎಲ್ಲಾ ವಿಭಾಗಗಳಲ್ಲಿ ನಡೆಯುತ್ತಿದೆ.
– ಊಟದ ಬಿಲ್, ವಿದ್ಯುತ್ ಬಿಲ್, ಮನೆಗೆ ದವಸ-ಧಾನ್ಯ ತರುವುದಕ್ಕೆಲ್ಲಾ ಸರ್ಕಾರಿ ಕಚೇರಿ,ಸ್ಟೋರ್ ಹಣ ಬಳಕೆ ಮಾಡಲಾಗುತ್ತಿದೆ. ಕಚೇರಿಗೆ ಸ್ಟೇಷನರಿ ಖರೀದಿ ಸೇರಿದಂತೆ ಇನ್ನಿತರ ಸಾಮಾನುಗಳ ಖರೀದಿಗಳಲ್ಲಿ ಲೋಪ ಮಾಡಿ ಆ ಹಣದಿಂದ ಎಸ್ಪಿಮನೆಗೆ ದಿನಸಿ ಸಾಮಾನು ಸರಬರಾಜು ಮಾಡಲಾಗುತ್ತಿದೆ.
– ಪೊಲೀಸ್ ವಸತಿ ಗೃಹ ದುರಸ್ತಿಯಲ್ಲಿ ಕಮಿಷನ್ ಪಡೆದು, ವಸತಿಗೃಹವನ್ನು ಸರಿಯಾಗಿ ದುರಸ್ತಿಪಡಿಸದೆ ಸಿಬ್ಬಂದಿಗೆ ಹಂಚಿಕೆ ಮಾಡಿ, ದುರಸ್ತಿಪಡಿಸಿಕೊಳ್ಳುವಂತೆ ಹೇಳುತ್ತಾರೆ.
– ವಾಹನ ವಿಭಾಗದಲ್ಲಿ ಪೆಟ್ರೋಲ್-ಡೀಸೆಲ್ ದುರ್ಬಳಕೆ, ರಿಪೇರಿಯಿಂದ ಕಮಿಷನ್ ಪಡೆಯುವುದು ಸಾಮಾನ್ಯವಾಗಿದೆ.
– ರಾಜಕಾರಣಿಗಳ ಬಲೆಗೆ ಬಿದ್ದು, ಕೆಟ್ಟದಾರಿಯಿಂದ ಹಣಗಳಿಸುವ ಸಲುವಾಗಿ ಪೊಲೀಸ್ ಸಲಹೆಗಾರರು ಹೇಳಿದಂತೆ ಐಪಿಎಸ್ ಅಧಿಕಾರಿಗಳು ಕೇಳುತ್ತಿದ್ದಾರೆ.
– ಒಂದೇ ವರ್ಗದ, ಜಾತಿಯ ಸಿಬ್ಬಂದಿಯನ್ನು ಪದೇಪದೆ ಶಿಕ್ಷಿಸುವುದು, ತೊಂದರೆ ಕೊಡುವುದು ನಿರಂತರವಾಗಿ ನಡೆಯುತ್ತಿದೆ.
– ತಮಗೆ ಅನುಕೂಲವಾಗುವಂತೆ ಯಾರು ಹಣ ತಂದುಕೊಡುವರೋ ಅವರು ಹೇಳಿದಂತೆ ಕೇಳು ವುದು, ಕರ್ತವ್ಯದಲ್ಲಿ ದಕ್ಷತೆಯಿಂದ ನಡೆದು ಕೊಳ್ಳದೆ ಸಾರ್ವಜನಿಕರಿಗೆ ಸಂದರ್ಶನ ನೀಡದಿರುವುದು, ಸಿಬ್ಬಂದಿ ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಬಂದರೆ ಅನುಮತಿ ಪಡೆದು ಬಂದಿಲ್ಲವೆಂದು ಮೆಮೋ ಜಾರಿ ಮಾಡಿ ಅಮಾನತುಗೊ ಳಿಸುವುದು ನಡೆದುಕೊಂಡು ಬಂದಿದೆ.
– ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಡಿಎಆರ್, ಸಿಎಆರ್, ಕೆಎಸ್‌ಆರ್‌ಪಿ ಸಿವಿಲ್ ಎಂದು ವಿಂಗಡಿಸಿರುವುದು,ಪೊಲೀಸ್ ಮ್ಯಾನ್ಯುವೆಲ್ 83, 84ನ್ನು ಜಾರಿಗೆ ತರದೆ ನೇಮಕಾತಿ ಬಡ್ತಿಯಲ್ಲೂ ನಿಯಮಾನುಸಾರ ನಡೆಯುತ್ತಿಲ್ಲ. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಆತ್ಮಾವಲೋಕನ ಮಾಡಿಕೊಂಡು, ಬದಲಾವಣೆಗೆ
ತಿದ್ದಿಕೊಂಡರೆ ಪೊಲೀಸ್ ಇಲಾಖೆಯ ಘನತೆ ಗೌರವಗಳು ಉಳಿಯುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.