ಮಂಡ್ಯದಲ್ಲಿ ಕಮಲ ಹೀನಾಯ ಸೋಲಿಗೆ ಒಳ ಮೈತ್ರಿಯೇ ಕಾರಣ..!

Team Udayavani, Dec 16, 2021, 12:31 PM IST

mandya politics

ಮಂಡ್ಯ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕೇಸರಿ ಪಡೆಯ ಹೀನಾಯ ಸೋಲಿಗೆ ಒಳ ಮೈತ್ರಿ ರಾಜಕಾರಣವೇ ಕಾರಣವಾಗಿದೆ. ಪ್ರತೀ ಚುನಾವಣೆಯಲ್ಲೂ ಬೇರೆ ಪಕ್ಷಗಳೊಂದಿಗೆ ನಾಯಕರು ಮಾಡಿಕೊಳ್ಳುವ ಒಳ ಒಪ್ಪಂದದಿಂದಕಮಲ ಕಮರುತ್ತಿದೆ.

ಕೆ.ಆರ್‌.ಪೇಟೆ ಉಪಚುನಾವಣೆ ಗೆದ್ದು ಜಿಲ್ಲೆಯಲ್ಲಿ ಖಾತೆ ತೆರೆದಕಮಲ, ಪಕ್ಷ ಸಂಘಟನೆಗೆ ಒತ್ತು ನೀಡಿತ್ತು. ಅದರಂತೆ ಪಕ್ಷವನ್ನು ಜಿಲ್ಲಾದ್ಯಂತ ವಿಸ್ತರಿಸಲು ಕಸರತ್ತು ನಡೆಸುತ್ತಿದೆ. ಆದರೆ ಪ್ರಸ್ತುತ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಳ ಒಪ್ಪಂದದ ಪರಿಣಾಮ ಕೇಸರಿ ಪಡೆ ಮುಗ್ಗರಿಸುವಂತಾಗಿದೆ. ಇದು ಪಕ್ಷ ಸಂಘಟನೆ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಮೇಲ್ಮಟ್ಟಲ್ಲೇ ಒಳ ಮೈತ್ರಿ: ವಿಧಾನಸಭೆ, ಲೋಕಸಭೆ ಹಾಗೂ ವಿಧಾನ ಪರಿಷತ್‌ ಸೇರಿದಂತೆ ಪ್ರತೀ ಚುನಾವಣೆಯಲ್ಲೂ ಕೇಸರಿ ಪಡೆಯ ಒಳ ಒಪ್ಪಂದಗಳು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನೊಂದಿಗೆ ಒಳ ಮೈತ್ರಿಗಳು ಕಾರ್ಯಕರ್ತರಿಗೆ ಗೊತ್ತಾಗದಂತೆ ಮೇಲ್ಮಟ್ಟದ ನಾಯಕರೊಂದಿಗೆ ನಡೆಯುತ್ತವೆ. ಇದು ಇಲ್ಲಿನ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಕೆಂಗೆಣ್ಣಿಗೂ ಗುರಿಯಾಗುವಂತೆ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಲೇ ಇದೆ.

ಸುಮಲತಾ ಬೆಂಬಲಿಸಿದ್ದ ಬಿಜೆಪಿ: ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಹಾಕದ ಕೇಸರಿ ಪಡೆ ಪ್ರತ್ಯಕ್ಷವಾಗಿ ಸುಮಲತಾ ಅಂಬರೀಷ್‌ ಬೆಂಬಲಕ್ಕೆ ನಿಂತಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹ ಬೆಂಬಲ ಸೂಚಿಸಿದ್ದರು. ಮೈಸೂರಿನ ಸಮಾವೇಶಕ್ಕೆ ಬಂದಾಗ ಸುಮಲತಾ ಬೆಂಬಲಿಸುವಂತೆ ಕರೆ ನೀಡಿದ್ದರು. ಆಗ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಒಂದಾಗಿ ಸುಮಲತಾ ಗೆಲ್ಲಿಸಿದ್ದರು.

ಠೇವಣಿ ಕಳೆದುಕೊಂಡ ಕಮಲ: ಜಿಲ್ಲೆಯಲ್ಲಿ ಪಕ್ಷವನ್ನು ವಿಸ್ತರಿಸುವ ಹಾಗೂ ಬಲಪಡಿಸುವ ದೃಷ್ಟಿಯಿಂದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಾವೇಶ ನಡೆಸಲಾ ಗಿತ್ತು. ನಂತರ ಬೂತ್‌, ಮಹಾಶಕ್ತಿ ಕೇಂದ್ರ, ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದಲ್ಲೂ ಸಮಾವೇಶ,ಕಾರ್ಯ ಕರ್ತರ ಸಭೆಗಳು ವರ್ಷವಿಡೀ ನಿರಂತರವಾಗಿ ನಡೆಸಲಾ ಯಿತು. ಪಕ್ಷ ಸಂಘಟನೆಗೆ ಶಕ್ತಿ ತುಂಬುವ ಕೆಲಸಗಳು ನಡೆಯುತ್ತಿದ್ದರೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಠೇವಣಿಕಳೆದುಕೊಳ್ಳುವಂತಾಯಿತು.

ಒಳ ಮೈತ್ರಿಯಿಂದ ಹಿನ್ನಡೆ: ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ತ್ರಿಕೋನ ಸ್ಪರ್ಧೆ ನೀಡುವ ಮೂಲಕ ನಡುಕ ಹುಟ್ಟಿಸಿದ್ದ ಬಿಜೆಪಿ ಕೊನೇ ಕ್ಷಣದಲ್ಲಿ ಮಂಕಾಗಿತ್ತು. ರಾಜ್ಯ ನಾಯಕರ ನಡುವಿನ ಒಳ ಮೈತ್ರಿಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಸರ್ಕಾರ, ಸಚಿವರು ಇದ್ದರೂ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದಿರುವುದು ಒಳ ಮೈತ್ರಿಯೇಕಾರಣವಾಗಿದೆ ಎನ್ನಲಾಗುತ್ತಿದೆ. 2015ರಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆ ಯಲ್ಲಿ ಸುಮಾರು 150ಕ್ಕೂ ಹೆಚ್ಚು ಮತ ಪಡೆದಿದ್ದ ಬಿಜೆಪಿ ಆದರೆ ಈ ಬಾರಿ ತೀವ್ರ ಪೈಪೋಟಿ ನೀಡಿದರೂ ಕೇವಲ 50 ಮತಗಳಿಗೆ ಕುಸಿಯುವಂತಾಗಿತ್ತು.

ಬಿಜೆಪಿ ಮತಗಳುಕೈ ಪಾಲು

2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸುಮಾರು 350ಕ್ಕೂ ಹೆಚ್ಚು ಬೆಂಬಲಿತ ಸದಸ್ಯರನ್ನು ಗೆಲ್ಲಿಸಿಕೊಂಡಿತ್ತು. ಬಹುತೇಕ ಕಡೆ ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಆ ಮತಗಳು ಸಹ ಬಿಜೆಪಿಗೆ ಬಿದ್ದಿಲ್ಲ.

ಇದನ್ನೂ ಓದಿ:- ವಿಜಯಪುರ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿ ಪತಿ ಆತ್ಮಹತ್ಯೆ

50 ಮತಗಳು ಹೊರತು ಪಡಿಸಿ ಉಳಿದ ಮತಗಳೆಲ್ಲವೂ ಕಾಂಗ್ರೆಸ್‌ ಪಾಲಾಗಿವೆ ಎಂಬ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್‌ ವಿರುದ್ಧವಾಗಿರುವ ಬಿಜೆಪಿ ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ ಪರ ಮತಗಳನ್ನು ತಿರುಗಿಸಿದ್ದು, ಪಕ್ಷ ಠೇವಣಿ ಕಳೆದುಕೊಳ್ಳಲು ಕಾರಣವಾಗಿದೆ. ಇನ್ನಾದರೂ ರಾಜ್ಯ ಹಾಗೂ ಸ್ಥಳೀಯ ನಾಯಕರು ಒಳ ಮೈತ್ರಿ ಬಿಟ್ಟು ಪಕ್ಷದ ಬೆಳವಣಿಗೆಗೆ ಮುಂದಾಗಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಆಗ್ರಹವಾಗಿದೆ.

ವಲಸಿಗರಿಗೆ ಹೆಚ್ಚು ಮಣೆ

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಬರುವ ವಲಸಿ ಗರಿಗೆ ಹೆಚ್ಚು ಮನ್ನಣೆ ನೀಡಲಾಗು ತ್ತಿದೆ. ನಂತರ ಪಕದಿಂದ  ಅನುಕೂಲ ಪಡೆದ ನಂತರ ಮತ್ತೆ ಬೇರೆ ಪಕ್ಷಗಳಿಗೆ ಹಾರುವುದು ಸಾಮಾನ್ಯವಾಗಿದೆ. ಅಲ್ಲದೆ, ಪ್ರತೀ ಚುನಾವಣೆಯಲ್ಲೂ ಜೆಡಿಎಸ್‌ನೊಂದಿಗಿನ ಒಳ ಮೈತ್ರಿಯಿಂದ ಪಕ್ಷ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ

ಸಂಘಟನೆ ಮಾಡಿದ್ದ ಬೂಕಹಳ್ಳಿ ಮಂಜು

ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಬೂಕಹಳ್ಳಿ ಬಿ.ಸಿ.ಮಂಜುಕಳೆದ10 ತಿಂಗಳಿನಿಂದ ಜಿಲ್ಲೆ ಸುತ್ತುವ ಮೂಲಕ ಸಂಘಟನೆ ಮಾಡಿದ್ದರು. ಪ್ರತಿ ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ಪಕ್ಷದ ಬಲ ಹೆಚ್ಚುವಂತೆ ಮಾಡಿದ್ದರು. ಆದರೆ ಮತದಾನಕ್ಕೂ ಮುನ್ನ ನಡೆದ ಬೆಳವಣಿಗೆಗಳಿಂದ ಬೇಸತ್ತುಕಣ್ಣೀರು ಹಾಕುವ ಮೂಲಕ ಏನೂ ಮಾಡಲಾಗದಂಥ ಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಜತೆಗಿದ್ದವರೇ ನನಗೆ ಕೈಕೊಟ್ಟರು. ಪಕ್ಷದ ಬೆಳವಣಿಗೆ ಸಹಿಸದೇ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

– ಎಚ್‌.ಶಿವರಾಜು

ಟಾಪ್ ನ್ಯೂಸ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Israel: ಹಮಾಸ್, ಹೆಜ್ಬುಲ್ಲಾ ದಾಳಿ ಬಳಿಕ ಯೆಮೆನ್ ಹೌಥಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ

Israel: ಹಮಾಸ್,ಹೆಜ್ಬುಲ್ಲಾ, ಸಿರಿಯಾ ಜೊತೆಗೆ ಯೆಮೆನ್ ಹೌತಿ ನೆಲೆಗಳ ಮೇಲೆ ಇಸ್ರೇಲ್ ದಾಳಿ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-letter

CM Siddramaiah: “ರಾಜೀನಾಮೆ ನೀಡಬೇಡಿ’ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

AdnaanShaik: ಸೋದರಿಗೆ ಹಿಗ್ಗಾಮುಗ್ಗಾ ಥಳಿತ; ಬಿಗ್‌ಬಾಸ್‌ ಮಾಜಿ ಸ್ಪರ್ಧಿ ವಿರುದ್ದ ಎಫ್ಐಆರ್

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

Chitradurga: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ… ವಿದ್ಯಾರ್ಥಿಗಳು ಸೇರಿ ಹಲವರಿಗೆ ಗಾಯ

3

Influencer: ತನ್ನನ್ನು ತಾನೇ ಮದುವೆಯಾಗಿದ್ದ 26ರ ಯುವತಿ ಕಟ್ಟಡದಿಂದ ಜಿಗಿದು ಆ*ತ್ಮಹ*ತ್ಯೆ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

Shivamogga: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ… ಅಧಿಕಾರಿಗಳಿಂದ ದಾಳಿ

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.