ಪೂರಿಗಾಲಿ ನೀರಾವರಿ ಯೋಜನೆಗೆ ಗ್ರಹಣ
Team Udayavani, Jul 19, 2022, 3:19 PM IST
ಮಂಡ್ಯ: ಮಳವಳ್ಳಿ ತಾಲೂಕಿನ ಬಹುದೊಡ್ಡ ನೀರಾವರಿ ಯೋಜನೆಯಾಗಿರುವ ಪೂರಿಗಾಲಿ ಹನಿಮತ್ತು ತುಂತುರು ನೀರಾವರಿ ಯೋಜನೆಗೆ ಗ್ರಹಣಹಿಡಿದಿದ್ದು, ಕಾಮಗಾರಿ ಆರಂಭಗೊಂಡು ನಾಲ್ಕೂವರೆ ವರ್ಷ ಕಳೆಯುತ್ತಿದ್ದರೂ ಮುಗಿದಿಲ್ಲ.
ಸುಮಾರು 593 ಕೋಟಿ ರೂ. ವೆಚ್ಚದ ಬೃಹತ್ ಮೊತ್ತದ ಯೋಜನೆ ಇದಾಗಿದ್ದು, ಬರಪೀಡಿತ ಪೂರಿಗಾಲಿ ವ್ಯಾಪ್ತಿಯ 25 ಸಾವಿರ ಹೆಕ್ಟೇರ್ ಪ್ರದೇಶದಕೃಷಿ ಭೂಮಿಗೆ ನೀರೊದಗಿಸಲಿದೆ. ಆದರೆ,ಇದುವರೆಗೂ ಕಾಮಗಾರಿ ಮಾತ್ರ ಮುಗಿದಿಲ್ಲ. ಈಭಾಗದ ರೈತರು ಯಾವಾಗ ಕಾಮಗಾರಿ ಮುಗಿದು ಜಮೀನುಗಳಿಗೆ ನೀರು ಬರುತ್ತದೆಯೋ ಎಂದು ಕಾದು ನೋಡುತ್ತಿದ್ದಾರೆ.
ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯ: ಕಾಮಗಾರಿ ಇಷ್ಟೊಂದು ವಿಳಂಬವಾಗಲು ಅಧಿಕಾರಿ ಗಳು, ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವಾಗಿದೆ. ಪೈಪ್‌ಲೈನ್ ಅಳವಡಿಕೆ, ವಿದ್ಯುತ್ ಸಂಪರ್ಕ ಇನ್ನೂಆಗಿಲ್ಲ. ಪೈಪ್‌ಲೈನ್ ಅಳವಡಿಕೆಗೆ ರೈತರ ಭೂಮಿಗಳಿಗೆಸರಿಯಾದ ಪರಿಹಾರ ಪಾವತಿಸಿಲ್ಲ. ಅಲ್ಲದೆ, ವಿದ್ಯುತ್‌ಸಂಪರ್ಕವನ್ನು ಕೊಳ್ಳೇಗಾಲದಿಂದ ತರಬೇಕಾಗಿದೆ. ಈಗಾಗಲೇ 18 ವಿದ್ಯುತ್ ಟವರ್‌ಗಳ ಪೈಕಿ 12 ಟವರ್‌ಗಳನ್ನು ಮಾತ್ರ ಹಾಕಲಾಗಿದೆ. ಉಳಿದ 8 ಟವರ್‌ಗಳಅಳವಡಿಕೆಗೆ ರೈತರು ಬಿಡುತ್ತಿಲ್ಲ. ಇದರಲ್ಲಿ ರೈತರಮನವೊಲಿಸಿ ಕಾಮಗಾರಿ ಪೂರ್ಣಗೊಳಿಸಬೇಕಾದಅಧಿಕಾರಿಗಳು, ಜನಪ್ರತಿನಿಧಿ ಗಳು ಹಾಗೂ ಗುತ್ತಿದಾರರು ನಿರ್ಲಕ್ಷ್ಯ ವಹಿಸಿದ್ದಾರೆ.
ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣ :
ತಾಲೂಕಿನ ಬೋಪ್ಪೇಗೌಡನಪುರ(ಬಿ.ಜಿ.ಪುರ) ಹೋಬಳಿಯ ಬಿಳಿಜಗಲಿಮೊಳೆಯ ಬಳಿಯ ಪಂಪ್‌ಹೌಸ್ ನಿರ್ಮಾಣ ಮಾಡಲಾ ಗಿದೆ. ಕಾವೇರಿ ನದಿಯಿಂದ ನೀರು ಸರಬರಾಜು ಮಾಡಲು ಪೈಪ್, ಯಂತ್ರೋಪಕರಣ ಅಳವಡಿಸಲಾಗಿದೆ. ಪಂಪ್ ಮಾಡಿದ ನೀರನ್ನು ನಾರಾಯಣಪುರ ಬಳಿಯ ಟ್ಯಾಂಕ್‌ಗೆ ಸರಬರಾಜು ಮಾಡಲು ವಿದ್ಯುತ್‌ಸಂಪರ್ಕ ಮಾಡಿಲ್ಲ. ಕಾಮಗಾರಿ ನಡೆಯುತ್ತಿದೆ. ಅಲ್ಲದೆ, ನಾರಾಯಣ ಪುರ ಬಳಿ ಇರುವ ಟ್ಯಾಂಕ್‌ನ ಕಬ್ಬಿಣ ಸರಳುಗಳೆಲ್ಲವೂ ತುಕ್ಕು ಹಿಡಿಯುತ್ತಿವೆ.ಪಕ್ಕದಲ್ಲೇ ನಿರ್ಮಿಸಿರುವ ಕೊಠಡಿ ಶಿಥಿಲಾವಸ್ಥೆ ತಲುಪಿದೆ. ಅಲ್ಲದೆ,ಪಂಪ್‌ಹೌಸ್‌ನಲ್ಲೂ ಅಳವಡಿಸಿರುವ ಯಂತ್ರ ಹಳೆಯದಾಗುತ್ತಿವೆ. ಜತೆಗೆ ಸಾಕಷ್ಟು ಸಾಮಗ್ರಿ ಕಳ್ಳತನವಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
2018ರಲ್ಲಿ ಮುಗಿಯಬೇಕಿದ್ದ ಕಾಮಗಾರಿ :
2016-17ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಅವ ಧಿಯಲ್ಲಿ ಮಂಜೂರಾಗಿದ್ದ ಯೋಜನೆಗೆ 2017ರಲ್ಲಿ ಅನುಮೋದನೆ ಪಡೆದು ಜೈನ್ ಇರಿಗೇಷನ್ ಎಂಬ ಖಾಸಗಿ ಕಂಪನಿಗೆ 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಷರತ್ತಿನೊಂದಿಗೆ ನೀಡಲಾಗಿತ್ತು. ಅಂದರೆ, 2018ರ ನವೆಂಬರ್‌ಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಇದುವರೆಗೂ ಕಾಮಗಾರಿ ಮುಗಿದಿಲ್ಲ.
410 ಕೋಟಿ ರೂ. ಪಾವತಿ :
ಕಾಮಗಾರಿ ಮೊತ್ತ 593 ಕೋಟಿ ರೂ.ಗಳಲ್ಲಿ ಈಗಾಗಲೇ ಗುತ್ತಿಗೆ ಪಡೆದ ಜೈನ್ ಇರಿಗೇಷನ್ ಕಂಪನಿಗೆ ಈಗಾಗಲೇ ಸರ್ಕಾರದಿಂದ 410 ಕೋಟಿ ರೂ. ಪಾವತಿ ಮಾಡಲಾಗಿದೆ. ಆದರೂ, ಇನ್ನೂ ಕಾಮಗಾರಿ ಕುಂಟುತ್ತಲೇ ಸಾಗಿದೆ.
ಹಾಲಿ-ಮಾಜಿ ಶಾಸಕರ ನಡುವೆ ವಾಕ್ಸಮರ :
ಬೃಹತ್ ನೀರಾವರಿ ಯೋಜನೆಯಾಗಿರುವ ಪೂರಿಗಾಲಿ ಹನಿ ಹಾಗೂ ತುಂತುರು ನೀರಾವರಿ ಯೋಜನೆ ಹಾಲಿಹಾಗೂ ಮಾಜಿ ಶಾಸಕರ ರಾಜಕೀಯ ವಾಕ್ಸಮರಕ್ಕೆಕಾರಣವಾಗಿದೆ. ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ನನ್ನ ಅವಧಿಯಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ತಾಂತ್ರಿಕ ಪರಿಣಿತರ ಆಧಾರದ ಮೇಲೆ ಜೈನ್ ಇರಿಗೇಷನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಇದುವರೆಗೂ ಈಗಿನ ಶಾಸಕರುಅದನ್ನು ಪೂರ್ಣಗೊಳಿಸುವ ಕೆಲಸ ಮಾಡಿಲ್ಲ ಎಂದು ವಾದಿಸಿದರೆ, ಇತ್ತ ಹಾಲಿ ಶಾಸಕ ಕೆ.ಅನ್ನದಾನಿ, ಗುತ್ತಿಗೆ ನೀಡಿರುವ ಕಂಪನಿ ವಿಳಂಬ ಮಾಡುತ್ತಿದೆ. ಮಾಜಿ ಶಾಸಕರೇ ಜೈನ್ ಕಂಪನಿಯವರಿಗೆ ಗುತ್ತಿಗೆ ನೀಡಿದ್ದಾರೆ. ಇದರ ಬಗ್ಗೆ ನಾನು ಸದನದಲ್ಲೂ ಪ್ರಸ್ತಾಪ ಮಾಡಿದ್ದೇನೆ. ಸರ್ಕಾರ ಜುಲೈ ತಿಂಗಳಲ್ಲೇ ಮುಗಿಸುತ್ತಾರೆ ಎಂದು ಭರವಸೆ ನೀಡಿದ್ದರು. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಒಟ್ಟಾರೆ ಈ ಯೋಜನೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ ಕೀಯ ತಿರುವು ಪಡೆದುಕೊಂಡು ಹಾಲಿ-ಮಾಜಿ ಶಾಸಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.
ಕಾಮಗಾರಿ ವಿಳಂಬ ಮಾಡಲಾಗಿದೆ. 18 ತಿಂಗಳಲ್ಲೇ ಮುಗಿಸಬೇಕಾದ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಅವ ಧಿಗೂಮೀರಿ ಕಾಲಾವಕಾಶ ತೆಗೆದುಕೊಂಡಿರುವುದರಿಂದಗುತ್ತಿಗೆ ನಿಯಮಾವಳಿ ಪ್ರಕಾರ ಗುತ್ತಿಗೆ ಕಂಪನಿಗೆ ದಂಡ ವಿಧಿಸಲಾಗುವುದು. – ನಟೇಶ್, ಕಾರ್ಯಪಾಲಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ
ಇನ್ನೂ 2-3 ತಿಂಗಳಲ್ಲಿ ಪೂರಿಗಾಲಿ ಹನಿ ಮತ್ತುತುಂತುರು ನೀರಾವರಿ ಯೋಜನೆ ಪೂರ್ಣಗೊಳ್ಳದಿದ್ದರೆ ಪಂಪ್‌ಹೌಸ್ ಬಳಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಗುತ್ತಿಗೆದಾರ ಜೈನ್‌ಕಂಪನಿ ಜು.22ಕ್ಕೆಮುಗಿಸುವುದಾಗಿತಿಳಿಸಿದ್ದರು. ಆದರೆ, ಇನ್ನೂಪ್ರಗತಿಯಲ್ಲಿದೆ. ಶೀಘ್ರಮುಗಿಸುವಂತೆ ಸೂಚಿಸಲಾಗಿದೆ. – ಕೆ.ಅನ್ನದಾನಿ, ಶಾಸಕರು
ಯೋಜನೆ ಆರಂಭಗೊಂಡು ನಾಲ್ಕೂವರೆ ವರ್ಷಗಳಾದರೂ ಏಕೆಪೂರ್ಣಗೊಳಿಸಿಲ್ಲ. ಶಾಸಕರಾದವರುನೀರಾವರಿ ಇಲಾಖೆ ಉಪಸಭೆಗಳನ್ನು ನಡೆಸಿಲ್ಲ ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ.ಇದು ಕ್ಷೇತ್ರದ ಜನತೆಗೆ ಗೊತ್ತಿದೆ. – ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರು
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.