ಮಾ.5ರ ಸಹಸ್ರ ಕಳಶಾಭಿಷೇಕಕ್ಕೆ ಸಿದ್ಧತೆ
Team Udayavani, Feb 23, 2021, 3:01 PM IST
ಮೇಲುಕೋಟೆ: ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಐತಿಹಾಸಿಕ ಮಹತ್ವದ “ಸಹಸ್ರ ಕಳಶಾಭಿಷೇಕ’ ಮಾ.5ರಂದು ನಡೆಯಲಿದೆ.
2020ನೇ ವರ್ಷದ ವೈರಮುಡಿ ಬ್ರಹ್ಮೋತ್ಸವ ರದ್ದಾದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಅನುಸರಿಸುತ್ತಾ ಬಂದಿರುವ ಪೂಜಾಕೈಂಕರ್ಯ ಪದ್ಧತಿಯ ಕೈಪಿಡಿ ಈಶ್ವರ ಸಂಹಿತೆಯ ಪ್ರಕಾರ ಪ್ರಾಯಶ್ಚಿತ್ತ ಪೂರ್ವಕವಾಗಿ ಸಹಸ್ರ ಕಳಶಾಭಿಷೇಕ ಹಮ್ಮಿಕೊಳ್ಳಲಾಗಿದೆ. 4 ದಿನಗಳ ಈ ಮಹತ್ವಪೂರ್ಣ ಧಾರ್ಮಿಕ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ.
ಸಹಸ್ರ ಕಳಶಾಭಿಷೇಕ ನಡೆದಿಲ್ಲ: ಭಗವದ್ರಾ ಮಾನಜರ ಕಾಲದಿಂದಲೂ ಚೆಲುವನಾರಾಯಣ ಸ್ವಾಮಿಗೆ ಸಹಸ್ರ ಕಳಶಾಭಿಷೇಕ ನಡೆ ದಿಲ್ಲ. ಕೋವಿಡ್ ಮಹಾಮಾರಿ ದೇವಾಲಯದಲ್ಲಿ ಐತಿಹಾಸಿಕ ಮಹೋತ್ಸವ ನಿಗದಿಯಾಗುವಂತೆ ಮಾಡಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಪಾಂಚಾರಾತ್ರಾಗಮ ಪಂಡಿತ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗಿದ್ದು, ಆಹ್ವಾನ ಪತ್ರಿಕೆಯನ್ನೂ ಬಿಡುಗಡೆಮಾಡಲಾಗಿದೆ.
4 ದಿನಗಳ ಕಾರ್ಯಕ್ರಮ: ಮಾ.3ರಿಂದ 6ರವರೆಗೆ 4 ದಿನಗಳ ಕಾಲ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ. ಮಾ.3ರಂದು ಅಂಕುರಾರ್ಪಣ, 4ರಂದು ಕಳಶಪ್ರತಿಷ್ಠೆ, 5ರಂದು ಸಹಸ್ರ ಕಳಶಾಭಿಷೇಕ,6 ರಂದು ಅನ್ನಕೋಟಿ ಕಾರ್ಯಕ್ರಮ ನಿಗದಿಯಾಗಿದೆ. ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರ ಆದೇಶದಂತೆ ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ.ಆನಂದಾಳ್ವಾರ್ ಸಹಸ್ರ ಕಳಶಾಭಿಷೇಕಕ್ಕೆ ಸಂಪೂರ್ಣಉಚಿತವಾಗಿ ವ್ಯವಸ್ಥೆ ಮಾಡಿಕೊಡಲಿದ್ದಾರೆ
ಈಶ್ವರ ಸಂಹಿತೆಯಂತೆ ಸಹಸ್ರ ಕಳಶಾಭಿಷೇಕ :
ಸಹಸ್ರ ಕಳಶಾಭಿಷೇಕದಲ್ಲಿ ನಿಗದಿಯಾದದಿನಗಳಂದು ಪೂಜಾ ಕೈಂಕರ್ಯಗಳು ಹೇಗಿರಬೇಕು. ಯಾವ ರೀತಿ ಕಳಶಾಭಿಷೇಕ ಮಾಡಬೇಕು. ಕಳಶಗಳನ್ನು ಯಾವ ಸ್ಥಳದಲ್ಲಿ ಸ್ಥಾಪಿಸಬೇಕು ಎಂಬುದನ್ನು ಈಶ್ವರ ಸಂಹಿತೆಯ ಆಧಾರದಲ್ಲಿ ಪಾಂಚರಾತ್ರಾಗಮ ಪಂಡಿತರೊಂದಿಗೆ ಚರ್ಚಿಸಿ, ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಕಚೇರಿಯಿಂದ ರೂಪುರೇಷೆ ಸಿದ್ಧ ಮಾಡಲಾಗುತ್ತದೆ ಎಂದು ಧಾರ್ಮಿಕದತ್ತಿ ಇಲಾಖೆಯ ಆಗಮ ಪಂಡಿತ ವಿಜಯಕುಮಾರ್ ತಿಳಿಸಿದ್ದಾರೆ.
ಮೇಲುಕೋಟೆಯಲ್ಲಿ ನಡೆಸಿದ ಸಭೆಯಲ್ಲಿ ಮಹೋತ್ಸವಕ್ಕೆ ದಿನಾಂಕ ನಿಗದಿ ಮಾಡಿ ಧಾರ್ಮಿಕ ಪರಂಪರೆಗೆ ಚ್ಯುತಿ ಬರದಂತೆ ಮಹೋತ್ಸವಗಳನ್ನು ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾನಿಗಳನ್ನು ಗುರುತಿಸಲಾಗಿತ್ತು. ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ ಮಾಡಿರಲಿಲ್ಲ.
ಹೀಗಾಗಿ ಒಂದೆರಡು ದಿನಗಳಲ್ಲಿ ಪಾಂಚಾರಾತ್ರಗಮದ ಪ್ರಖ್ಯಾತ ಪಂಡಿತರೊಂದಿಗೆ ಚರ್ಚಿಸಿ, ಈಶ್ವರ ಸಂಹಿತೆಯಲ್ಲಿ ಉಲ್ಲೇಖೀಸಿದ ಆಧಾರ ಪರಾಮರ್ಶಿಸಿ ಮಹೋತ್ಸವದಲ್ಲಿ ಕೈಗೊಳ್ಳಬೇಕಾದ ವಿಧಿ ವಿಧಾನ ನಿರ್ಧರಿಸಲಾಗುತ್ತದೆ. ಸಹಸ್ರ ಕಳಶಾಭಿಷೇಕ ಮಾ.5ರಂದು ವಿದ್ಯುಕ್ತವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.