![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 1, 2021, 11:43 AM IST
ಮದ್ದೂರು: ತಾಲೂಕಿನ ಮಾದನಾಯನಹಳ್ಳಿ ಗ್ರಾಮದಿಂದ ಕಸಾಯಿಖಾನೆಗೆ ಸಾಗಿಸುತ್ತಿದ್ದ 11 ಕರುಗಳನ್ನು ಬಜರಂಗದಳ ಮತ್ತು ಹಿಂದೂ ಸಂಘಟನೆಗಳ ಮುಖಂಡರು ವಶಪಡಿಸಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಗ್ರಾಮದಿಂದ ನಿಡಘಟ್ಟ ಗ್ರಾಮದ ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಭಾನುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವಾಹನದಲ್ಲಿ ಕರೆದೊಯ್ಯುತ್ತಿದ್ದ ಕರುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುರಿ ಮಾಂಸದ ಜತೆಯಲ್ಲಿ ಕರುವಿನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕರುಗಳನ್ನು ಮಾರಾಟ ಮಾಡಲು ಕರೆದುಕೊಂಡು ಹೋಗುತ್ತಿದ್ದರು ಎಂದು ಹಿಂದೂ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ:ಈ ಬಾರಿಯ ಅಧಿವೇಶನದಲ್ಲಿ ಯಾವುದೇ ಹೊಸ ಬಿಲ್ ಮಂಡನೆ ಮಾಡಲ್ಲ: ರಾಜ್ಯ ಸರ್ಕಾರ
ನೈದಿಲೆ ಚಂದ್ರು, ಗುರು ಸ್ವಾಮಿ, ಸಿಪಾಯಿ ಶ್ರೀನಿವಾಸ್, ಅಭಿಷೇಕ್, ತೈಲೂರು ಆತ್ಮ ಇತರರು ಒಂದು ತಿಂಗಳಿನಿಂದ ಗಮನ ವಹಿಸಿ, ಕಸಾಯಿ ಖಾನೆಗೆ ಕರೆದುಕೊಂಡು ಹೋಗುತ್ತಿದ್ದ ಕರುಗಳನ್ನು ವಶಪಡಿಸಿಕೊಂಡಿದ್ದಾರೆ. ಕರುಗಳನ್ನು ಪಟ್ಟಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.