ಅತ್ಯಾಚಾರ, ಕೊಲೆ ಪ್ರಕರಣ ಶೀಘ್ರ ಇತ್ಯರ್ಥಪಡಿಸಿ
Team Udayavani, Oct 16, 2022, 3:23 PM IST
ಮಳವಳ್ಳಿ: 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪಿ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ತೆರೆದು ಆರೋಪಿಗೆ ತ್ವರಿತಗತಿಯಲ್ಲಿ ಗಲ್ಲುಶಿಕ್ಷೆ ವಿಧಿ ಸಬೇಕು ಎಂದು ವಿವಿಧ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ 50ಕ್ಕೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಿ ಘಟನೆ ಖಂಡಿಸಿ, ಮೃತ ಬಾಲಕಿ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ವೃತ್ತಕ್ಕೆ ಹೆಸರಿಡಿ: ಕೃಷಿ ಕೂಲಿಕಾರರ ಸಂಘ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಶಾಲೆಗಳಲ್ಲಿ ಉತ್ತಮವಾಗಿ ಪಾಠ ಮಾಡುತ್ತಿರುವ ಹಿನ್ನೆಲೆ ಟ್ಯೂಷನ್ ಸೆಂಟರ್‌ಗಳನ್ನು ಶಿಕ್ಷಣ ಇಲಾಖೆ ನಿಷೇಧಿ ಸಬೇಕು. ನಿರ್ಭಯಾ ಪ್ರಕರಣದಂತೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಅಲ್ಲದೇ ಸರ್ಕಾರ ಮೃತ ಬಾಲಕಿ ಹೆಸರಿನಲ್ಲಿ ನಿಧಿ ಸ್ಥಾಪನೆ ಮಾಡಬೇಕು. ಪಟ್ಟಣದ ಯಾವುದಾದರೂ ಒಂದು ಸರ್ಕಲ್‌ಗೆ ಬಾಲ ಕಿಯ ಹೆಸರಿಡಬೇಕು ಎಂದರು.
ಕೋರ್ಟ್ ತೆರೆಯಿರಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಪುಟ್ಟ ಬಸವಯ್ಯ ಮಾತನಾಡಿ, ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಕೃತ್ಯವನ್ನು ತಾಲೂಕಿನ ಎಲ್ಲ ಸಮುದಾಯ ಮತ್ತು ಧರ್ಮದ ಜನ ಖಂಡಿಸಿದ್ದಾರೆ. ಆರೋಪಿಗೆ ಕಡಿಮೆ ಅವಧಿಯಲ್ಲಿ ಗಲ್ಲು ಶಿಕ್ಷೆ ವಿಧಿ ಸಲು ವಿಶೇಷ ನ್ಯಾಯಾಲಯ ತೆರೆಯಬೇಕು ಎಂದು ಆಗ್ರಹಿಸಿದರು.
ಸೌಹಾರ್ದ ನಾಗರೀಕ ವೇದಿಕೆ ಪ್ರಧಾನ ಕಾರ್ಯದರ್ಶಿ ರೂಪೇಶ್ ಮಾತನಾಡಿ, ಪಟ್ಟಣದಲ್ಲಿ ಗಾಂಜಾ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತು ಗಳಿಂದ ಯುವ ಜನತೆ ದೂರ ಇರಬೇಕು ಎಂದರು.
ಮುಖಂಡರಾದ ದೊಡ್ಡಯ್ಯ, ಎಂ.ಎನ್.ಮಹೇಶ್ ಕುಮಾರ್, ಬಂಡೂರು ಚಿಕ್ಕಲಿಂಗಯ್ಯ, ವಿ.ಪಿ. ನಾಗೇಶ್, ಸಿ.ಮಾಧು, ಕೆ.ಎಸ್.ದ್ಯಾಪೇಗೌಡ, ಬಿ. ಮಹದೇವು, ಜಯರಾಜು, ಟಿ.ಎಂ.ಪ್ರಕಾಶ್, ದಯಾ ಶಂಕರ್, ವಿಶ್ವಕರ್ಮ ಪ್ರಕಾಶ್, ಪುಟ್ಟಸ್ವಾಮಿ, ಸಿದ್ದ ರಾಜು, ಜಯಮ್ಮ, ಬಿ.ಎಂ.ಶಿವಮಲ್ಲಯ್ಯ, ಟಿ.ಎಚ್. ಅನಂದ್, ಸಿದ್ದರಾಜು ಮತ್ತಿತರರಿದ್ದರು.
ರಾಜ್ಯದ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತ ಸತ್ತರೇ 50 ಲಕ್ಷ ರೂ. ಪರಿಹಾರ ನೀಡುವುದರ ಜತೆಗೆ ಇಡೀ ಸರ್ಕಾರವೇ ಅವರ ಮನೆಗೆ ಹೋಗಿ ಸಾಂತ್ವಾನ ಹೇಳುತ್ತದೆ. ಆದರೆ, ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪುಟ್ಟ ಬಾಲಕಿಯ ಕುಟುಂಬ ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ?. -ಬಿ.ಪುಟ್ಟಬಸವಯ್ಯ, ಉಪಾಧ್ಯಕ್ಷ, ರಾಜ್ಯ ಪ್ರದೇಶ ಕುರುಬರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.