ಕರ ವಸೂಲಿಗಾರನ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Oct 26, 2019, 3:45 PM IST
ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ನರಸಿಂಹೇಗೌಡ ಅವರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರೆ ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ಜರುಗಿತು.
ತಾಲೂಕಿನ ಕೌಡ್ಲೆ ಗ್ರಾಪಂ ಕಚೇರಿಯ ಬಳಿ ಜಮಾವಣೆಗೊಂಡ ಸದಸ್ಯರು ತಾಲೂಕು ಆಡಳಿತ ಕರ ವಸೂಲಿಗಾರನ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಡಿಸಿ, ಆತನನ್ನು ಕರ್ತವ್ಯದಿಂದ ಬಿಡುಡೆಗೊಳಿಸುವಂತೆ ಒತ್ತಾಯಿಸಿದರು. ಕೌಡ್ಲೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ಸರ್ಕಾರಿ ನಿವೇಶಗಳನ್ನು ಹಣ ಪಡೆದು ಉಳ್ಳವರಿಗೆ ನೀಡುತ್ತಿರುವ ಜತೆಗೆ ಸಮರ್ಪವಾಗಿ ಗ್ರಾಮಗಳಲ್ಲಿ ಕರ ವಸೂಲಿ ಮಾಡದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಬಗ್ಗೆ ಅಧ್ಯಕ್ಷರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು. ಕರ್ತವ್ಯಕ್ಕೆ ಹಾಜರಾಗದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಕರ ವಸೂಲಿಗೆ ಮುಂದಾಗದೆ ಪ್ರತಿ ತಿಂಗಳು ಶೇ.3ರಷ್ಟು ವಸೂಲಾತಿಗೆ ಮುಂದಾಗಿರುವುದರಿಂದ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ವಿದ್ಯುತ್ ದೀಪ ಇನ್ನಿತರರ ಕಾಮಗಾರಿಗಳು ನನೆಗುದಿಗೆ ಬಿದ್ದಿರುವುದಾಗಿ ಆರೋಪಿಸಿದರು.
ಕಂದಾಯ ವಸೂಲಿ ಮಾಡುವ ನರಸಿಂಹೇಗೌಡ ಹಣ ದುರ್ಬಳಕೆ ಮಾಡಿಕೊಂಡಿದ್ದು ಪ್ರತಿದಿನ ಬ್ಯಾಂಕ್‌ಗೆ ಪಾವತಿಸಿಬೇಕಾದ ಹಣವನ್ನು 15 ದಿನಗಳಿಗೊಮ್ಮೆ ಪಾವತಿಸಿದರೂ ಪಿಡಿಒ ನರಸಿಂಹಮೂರ್ತಿ, ಗ್ರಾಪಂ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಶಿವರಾಮು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆಂದು ದೂರಿದರು. ಸ್ಥಳಕ್ಕೆ ಜಿಪಂ ಸಿಇಒ ಹಾಗೂ ತಾಪಂ ಇಒ ಮಣಿಕಂಠ ಅವರು ಸ್ಥಳಕ್ಕೆ ಆಗಮಿಸುವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ಮಹೇಂದ್ರ, ಗಿರೀಶ್, ರಮೇಶ್, ಶಂಕುತಲಾ, ಶೋಭಾ ನೇತೃತ್ವವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.