ಪಿಎಸ್‌ಎಸ್‌ಕೆ, ಮೈಷುಗರ್‌ ಶೀಘ್ರ ಆರಂಭ

Team Udayavani, Jul 1, 2020, 6:08 AM IST

pssk

ಮಂಡ್ಯ: ಸಿಎಂ ಯಡಿಯೂರಪ್ಪ ಅವರು ಜಿಲ್ಲೆಯ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್‌ ಕಾರ್ಖಾನೆಯ ಆರಂಭದ ಬಗ್ಗೆ ತಮ್ಮದೇ ಆದ ಸ್ಪಷ್ಟ ನಿಲುವು ಹೊಂದಿದ್ದು, ಶೀಘ್ರ ಎರಡೂ ಕಾರ್ಖಾನೆಗಳನ್ನು ಆರಂಭಿಸಲಿದ್ದಾರೆ ಎಂದು ಸಚಿವ  ಕೆ.ಸಿ.ನಾರಾಯಣಗೌಡ ತಿಳಿಸಿದರು.

ನಗರದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌, ಮಂಡ್ಯ ಹಾಲು ಒಕ್ಕೂಟ ಇತರೆ ಸಹಕಾರ ಸಂಘದಿಂದ ನಡೆದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನದ ಚೆಕ್‌ ವಿತರಣಾ ಸಮಾರಂಭದಲ್ಲಿ  ಮಾತನಾಡಿ, ಮೈಷುಗರ್‌ ವ್ಯಾಪ್ತಿಗೆ ಕಬ್ಬು ಸರಬರಾಜು ಮಾಡುವ 135 ಹಳ್ಳಿಗಳು ಮಂಡ್ಯ ತಾಲೂಕಿನಲ್ಲೇ ಇವೆ. ಬೇರೆ ಯಾವ ತಾಲೂಕುಗಳಿಂದಲೂ ಇಲ್ಲಿಗೆ ಕಬ್ಬು ಸರಬರಾಜಾ ಗುವುದಿಲ್ಲ. ಆದರೂ ಏಕೆ ಇಷ್ಟೊಂದು ಗುಂಪುಗಾರಿಕೆ  ನಡೆಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.

ನಾವು ಬೇರೆ ಕಡೆ ರಾಜಕಾರಣ ಮಾಡೋಣ. ಆದರೆ, ರೈತರ ಬದುಕಿನಲ್ಲಿ ಆಟವಾಡುವುದು ಸರಿಯಲ್ಲ ಎಂದರು. ಸದ್ಯದಲ್ಲೇ ಆರಂಭ: ಈಗಾಗಲೇ ಪಿಎಸ್‌ಎಸ್‌ ಕೆಯನ್ನು ಖಾಸಗಿಯವರಿಗೆ  ಗುತ್ತಿಗೆ ನೀಡಲಾ ಗಿದ್ದು, ಅದು ಸದ್ಯದಲ್ಲೇ ಆರಂಭವಾಗುವ ಹಂತದಲ್ಲಿದೆ. ಇನ್ನು ಮಂಡ್ಯದ ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂ ಮೂಲಕ ಆರಂಭಿಸಲು ಈಗಾಗಲೇ ಕಾರ್ಖಾನೆ ನಡೆಸು ತ್ತಿರುವವರ ಸಮಿತಿ ರಚಿಸಿ, ಅವರ  ಸಲಹೆ ಯಂತೆ ಕಾರ್ಖಾನೆಗೆ ಜೀವ ನೀಡಲು ಎಲ್ಲ ಸಿದಟಛಿತೆ ನಡೆಸಲಾಗಿದೆ ಎಂದು ಹೇಳಿದರು.

ಅಗತ್ಯ ಕ್ರಮ: ಲಾಕ್‌ಡೌನ್‌ ಸಂದರ್ಭದಲ್ಲಿ ಸಹಕಾರ ಸಚಿವರು ರೈತರ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಗಮನ ನೀಡಿದ ಪರಿಣಾಮ ಬೆಂಗಳೂ ರಿನ ಮಾರುಕಟ್ಟೆಯೊಂದರಲ್ಲೇ ಸುಮಾರು 150 ಟನ್‌ ತರಕಾರಿ ಮಾರಾಟವಾಗುದೆ.  ಅದಕ್ಕೂ ಹಿಂದೆ ಕೇವಲ 30ರಿಂದ 40 ಟನ್‌ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಇದರಿಂ ದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು.

ಈ ಕಾರ್ಯದಲ್ಲಿ ಸಚಿವರಾದ ಬಿ.ಸಿ. ಪಾಟೀಲ್‌, ಗೋಪಾಲಯ್ಯ, ಸೋಮಶೇಖರ್‌ ಮತ್ತು  ನಾನು ಎಲ್ಲ ಅಗತ್ಯ ಕ್ರಮ ಕೈಗೊಂಡಿ ದ್ದೆವು ಎಂದು ವಿವರಿಸಿದರು. ಸಂಸದೆ ಸುಮಲತಾ ಅಂಬರೀಶ್‌, ಶಾಸಕ ಎಂ. ಶ್ರೀನಿವಾಸ್‌, ಡೀಸಿ ಡಾ.ಎಂ.ವಿ. ವೆಂಕಟೇಶ್‌, ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಇದ್ದರು.

ಮೈಷುಗರ್‌ ಕಾರ್ಖಾನೆ ಆರಂಭದ ವಿಚಾರವಾಗಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉಸ್ತುವಾರಿ ಸಚಿವ ನಾರಾಯಣಗೌಡರು ಬೇಡಿಕೆ ಇಟ್ಟ ಯಾವುದಕ್ಕೂ ಸಿಎಂ ನಿರಾಕರಿಸಿಲ್ಲ. ತಮ್ಮ ತವರಿನ ಮೇಲಿರುವ ಕಾಳಜಿ  ತೋರುತ್ತದೆ. 
-ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Mur

Mandya: ತಮ್ಮನ ಕೊಲೆಗೆ ಸುಪಾರಿ ನೀಡಿ, ಕುಂಭಮೇಳಕ್ಕೆ ಹೋದ ಅಣ್ಣ!

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

Mandya: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ಇಬ್ಬರು ಮಹಿಳೆಯರು ನೀರುಪಾಲು

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

ರೇವಣ್ಣಗೆ ವೋಟ್‌ಗೆ ಮಾತ್ರ ಮಂಡ್ಯ,ಅಭಿವೃದ್ಧಿಗೆ ಹಾಸನ: ಚಲುವರಾಯಸ್ವಾಮಿ

1-dess

Mandya: ಬೆಳ್ಳಂಬೆಳಗ್ಗೆ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹ*ತ್ಯೆ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

ಇಂದಿನಿಂದ ದಕ್ಷಿಣ ಭಾರತದ ಮಹಾಕುಂಭಮೇಳ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.