ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿದ ಅಶೋಕ್
Team Udayavani, Aug 15, 2022, 5:50 PM IST
ಶ್ರೀರಂಗಪಟ್ಟಣ: ಆದಷ್ಟು ಬೇಗ ದಡ ಸೇರಿರಿ ಎನ್ನುವ ಮೂಲಕ ಪರೋಕ್ಷವಾಗಿ ಸಂಸದೆ ಸುಮಲತಾ ಹಾಗೂ ಅವರ ಟೀಂ ಅನ್ನು ಪಕ್ಷಕ್ಕೆ ಬರುವಂತೆ ಮುಕ್ತ ಆಹ್ವಾನ ನೀಡಿದ ಸಚಿವರಾದ ಅಶೋಕ್, “ಕಳೆದ ಒಂದು ತಿಂಗಳಿಂದ ಹೇಳುತ್ತಿದ್ದೇನೆ. ಆದಷ್ಟು ಬೇಗ ನಮ್ಮ ನರೇಂದ್ರ ಮೋದಿಯವರ ದಡಕ್ಕೆ ಬನ್ನಿ’ ಎಂದು ಪಕ್ಷಕ್ಕೆ ಆಹ್ವಾನಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಶಂಕರೇಗೌಡ ಚಾರಿಟಬಲ್‌ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವ, ನಾಡಪ್ರಭು ಕೆಂಪೇಗೌಡ ಜಯಂತಿ, ಸಾಧಕರಿಗೆ ಅಭಿನಂದನಾ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಆ್ಯಕ್ಟಿವ್ ಸಂಸದರು: ಮಂಡ್ಯ ಸಂಸದೆ ಯಾಗಿ ಆಯ್ಕೆ ಯಾದ ಸುಮಲತಾ ಅಂಬರೀಶ್ ಆ್ಯಕ್ಟಿವ್ ಸಂಸದರಾ ಗಿದ್ದಾರೆ ಎಂದು ವೇದಿಕೆ ಮೇಲೆ ಸಚಿವ ಆರ್. ಅಶೋಕ್ ಹಾಡಿ ಹೊಗ ಳಿದರು. ಮಂಡ್ಯದ ಗಂಡು ರೀತಿಯಲ್ಲೇ ಸಂಸತ್ತಿನಲ್ಲಿ ಅವರು ಮಾತನಾಡುತ್ತಿ ದ್ದಾರೆ. ಇನ್ನು ಅವರ ಬೆಂಬಲಿಗ ಅಂದ ಮೇಲೆ ಸಮಾ ವೇಶವನ್ನು ಆಯೋಜಿಸಿರುವ ಇಂಡು ವಾಳು ಸಚ್ಚಿದಾ ನಂದ ಅವರೂ ಶ್ರೀರಂಗಪಟ್ಟ ಣದ ಅಭಿವೃದ್ಧಿಗೆ ಮುಂದಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಅವರ ಪರವಾಗಿ ನೀವು ನಿಲ್ಲಬೇಕು ಎಂದರು.
ಧ್ವಜಾರೋಹಣ: 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ಬೆಂಗಳೂರು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇನೆ. ನಮ್ಮದೇ ನೆಲ ಆದರೂ ಆ ನೆಲದಲ್ಲಿ ಭಾರತದ ಬಾವುಟ ಹಾರಿಸಲು 75 ವರ್ಷ ಬೇಕಾಯಿತು. ಬೆಂಗಳೂರು ಈದ್ಗಾ ನೆಲದಲ್ಲಿ ಬಾವುಟ ಹಾರಿಸಲು ಯಾವುದೇ ಸರ್ಕಾರಕ್ಕೆ ಆಗಿರಲ್ಲ. ಈಗ ನಮ್ಮ ಸರ್ಕಾರ ಆ ನೆಲದಲ್ಲಿ ಬಾವುಟ ಹಾರಿಸುತ್ತಿದೆ. ಇದು ನಮ್ಮ ಸರ್ಕಾರದ ಹೆಮ್ಮೆ ಎಂದರು.
ಮಾತು ಉಳಿಸಿಕೊಂಡಿದ್ದೇನೆ: ಸಂಸದೆ ಸುಮಲತಾ ಮಾತನಾಡಿ, ಕಲ್ಲುಗಣಿ ಸ್ಥಗಿತ ಮತ್ತು ಮೈಷುಗರ್ ಕಾರ್ಖಾನೆ ಪುನಃಶ್ಚೇತನ ವಿಚಾರವಾಗಿ ಹಲವು ಬಾರಿ ಹೋರಾಟ ಮಾಡಿದ್ದೇನೆ. ಆ ಹೋರಾಟಕ್ಕೆ ಗೌರವ ಸಿಕ್ಕಿದೆ. ಕಲ್ಲುಗಣಿ ವಿಚಾರಕ್ಕೆ ಕೆಆರ್‌ಎಸ್ ಜಲಾಶಯಕ್ಕೆ ಅಪಾಯದ ವಿಚಾರದಲ್ಲಿ ಹೋರಾಟಕ್ಕೆ ಚುನಾವಣೆಗಿಂತ ಮೊದಲೇ ಮಾತುಕೊಟ್ಟಿದ್ದೆ. ಅದರಂತೆ ಸ್ಥಗಿತವಾಗಿದೆ. ಮಂಡ್ಯ ಷುಗರ್ ಕಾರ್ಖಾನೆ ಮತ್ತೆ ಆರಂಭಿಸಲು ಹೋರಾಟ ಮಾಡುವುದಾಗಿ ಭರವಸೆ ನೀಡಿದ್ದೆ. ಈಗ, ಆರಂಭವಾಗುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ಅಭಿನಂದಿಸುತ್ತೇನೆ. ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆಂದರು.
ಕಾರ್ಯಕ್ರಮ ಆಯೋಜನೆ ಮಾಡಿದ ಇಂಡವಾಳು ಸಚ್ಚಿದಾನಂದ ಮಾತನಾಡಿ, ವಂಶ ಪರಂಪರೆ ರಾಜಕಾರಣ ಬೇಡವಾಗಿದ್ದು , ಕ್ಷೇತ್ರದ ಅಭಿವೃದ್ಧಿ ಆಸೆ ಹೊತ್ತು ಬಂದಿರುವ ನನ್ನಂತಹ ಹೊಸ ಪೀಳಿಗೆಗೆ ಜನ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ನಿಮ್ಮೊಂದಿಗಿದ್ದೇವೆ: ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ, ಮೈಸೂರು ಭಾಗದ ಉಸ್ತುವಾರಿಯನ್ನು ಸಚಿವರಾದ ನಮ್ಮ ನಾಯಕ ಅಶೋಕ್ ಅವರು ವಹಿಸಿಕೊಳ್ಳಬೇಕು. ಈ ಭಾಗದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದರು.
ಸಚಿವ ನಾರಾಯಣಗೌಡ ವೇದಿಕೆ ಕುರಿತು ಮಾತನಾಡಿದರು.
ಶಕ್ತಿ ಪ್ರದರ್ಶನ: ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೂರಾರು ವಾಹನಗಳಲ್ಲಿ ಸಾವಿರಾರು ಜನರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಜೆಡಿಎಸ್- ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜನ ಆಗಮಿಸಿದರು. ಆಶಾ ಕಾರ್ಯಕರ್ತೆಯರು, ಅಂಗವಿಕಲರಿಗೆ ಕಿಟ್, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನಿಂದ 1 ಲಕ್ಷ ರೂ. ಗಳ ಚೆಕ್ ಅನ್ನು ವಿತರಣೆ ಮಾಡಲಾಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ವಿವಿಧ ಕಲಾ ತಂಡಗಳ ಮೆರವಣಿಗೆ ಸಾಗಿತು. ಸಮಾಜ ಸೇವಕ ಸಚ್ಚಿದಾನಂದರ ಜತೆ ಮೆರವಣಿಗೆಯ ಮೂಲಕ ತೆರೆದ ವಾಹನದಲ್ಲಿ ಕಂದಾಯ ಸಚಿವ ಅಶೋಕ್, ಕೆ.ಗೋಪಾಲಯ್ಯ, ನಾರಾಯಣಗೌಡ ಇತರರು ಆಗಮಿಸಿದರು.
ಈ ಸಂದರ್ಭದಲ್ಲಿ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಉಮೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಟಿ.ಶ್ರೀಧರ್, ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ನಾನು ಕುಟುಂಬ ರಾಜಕಾರಣ ಮಾಡಲ್ಲ : ನಾನು ಕುಟುಂಬ ರಾಜಕಾರಣ ಮಾಡಲ್ಲ ಎಂದು ತಿಳಿಸಿದ ಸಂಸದೆ ಸುಮಲತಾ, ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹೇಳುವಂತೆ ಸಮಾವೇಶದಲ್ಲಿ ಆಗಮಿಸಿದ್ದ ಜನರಿಗೆ ಪರೋಕ್ಷವಾಗಿ ಮಾಜಿ ಸಿಎಂ ಎಚ್ಡಿಕೆ ಅವರ ಹೆಸರೇಳದೆ ವಾಗ್ಧಾಳಿ ನಡೆಸಿದರು. ಜಿಲ್ಲೆಯಲ್ಲಿ ನನ್ನ ಮಗ ಅಭಿಷೇಕ್‌ಗಿಂತ ನಾನು ಸಚ್ಚಿಯನ್ನು ರಾಜಕೀಯದಲ್ಲಿ ಬೆಳೆಸಲು ಆಸೆ ಪಡುತ್ತಿದ್ದೇನೆ. ನನ್ನ ಪುತ್ರನಿಗೆ ನಾನು ಯಾವತ್ತೂ ರಾಜಕೀಯ ಬೆಂಬಲ ನೀಡಿಲ್ಲ. ಅವನಿಗೆ ಆ ಅರ್ಹತೆ ಇದ್ದಲ್ಲಿ ಆ ಕ್ಷೇತ್ರದಲ್ಲಿ ಆ ಶಕ್ತಿ ಇದ್ದರೇ ಅವನು ಸ್ವ ಶಕ್ತಿಯಿಂದ ಮೇಲೆ ಬರ್ತಾನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.