ಸಕಾಲ ವ್ಯಾಪ್ತಿಗೆ ನಮೂನೆ-3 ತರಲು ಶಿಫಾರಸು
Team Udayavani, Nov 26, 2019, 4:04 PM IST
ಮಂಡ್ಯ: ನಗರ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಸಂಕೀರ್ಣ, ನಿವೇಶನ ಹಾಗೂ ಮನೆಗಳ ಆಸ್ತಿ ತೆರಿಗೆ ಪಾವತಿ ಬಳಿಕ ನೀಡಲಾಗುವ ನಮೂನೆ-3 ವಿತರಣಾ ವ್ಯವಸ್ಥೆಯನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ಜಿಲ್ಲಾಡಳಿತ ನಿರ್ಧರಿಸಿದೆ.
ಪ್ರಸ್ತುತ ಆಸ್ತಿ ತೆರಿಗೆ ಪಾವತಿಸುವ ಕಟ್ಟಡಗಳ ಮಾಲೀಕರಿಗೆ ನಿಗದಿತ ಸಮಯದೊಳಗೆ ನಮೂನೆ-3 ಸಿಗದೆ ಪರದಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ನಮೂನೆ-3 ಕೈ ಬರಹದಲ್ಲೂ ನೀಡ ಲಾಗುತ್ತಿದೆ ಎಂಬ ಆರೋಪಗಳೂ ಇವೆ. ಆ ಹಿನ್ನೆಲೆಯಲ್ಲಿನಮೂನೆ-3 ಅನ್ನು ಸಕಾಲ ವ್ಯಾಪ್ತಿಗೆ ತರುವುದಕ್ಕೆ ರಾಜ್ಯಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.
ಕಚೇರಿಗೆ ಅಲೆದಾಟ: ಆಸ್ತಿ ತೆರಿಗೆ ಪಾವತಿಸಿದ ಕಟ್ಟಡಮಾಲೀಕರಿಗೆ ನಮೂನೆ-3 ಅನ್ನು ಕೊಡುವುದಕ್ಕೆ ಕನಿಷ್ಠ 3ರಿಂದ 6 ತಿಂಗಳು ಕಚೇರಿಗಳಿಗೆ ಅಲೆಸುತ್ತಿರುವುದು ಕಂಡು ಬಂದಿದೆ. ಕಟ್ಟಡಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ನಿಗದಿತ ಸಮಯದಲ್ಲಿ ನಮೂನೆ-3 ಸಿಗದೆ ಎಷ್ಟೋ ಮಂದಿ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣಗಳೂ ಚಾಲ್ತಿಯಲ್ಲಿವೆ.ಇದರಿಂದ ಪರವಾನಗಿ ಇಲ್ಲದೆ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಜಿಲ್ಲಾಡಳಿತ ನಮೂನೆ-3 ಕೊಡುವ ವ್ಯವಸ್ಥೆ ಸಕಾಲ ವ್ಯಾಪ್ತಿಯಡಿಗೆ ತರಲು ನಿರ್ಧರಿಸಿದೆ.
ಮೇಲ್ಮನವಿಗೆ ಅವಕಾಶ: ಆಸ್ತಿ ತೆರಿಗೆ ಪಾವತಿಸಿದ ಬಳಿಕ ನಮೂನೆ-3 ನೀಡುವುದಕ್ಕೆ ನಗರಸಭೆ ಮತ್ತು ಪುರಸಭೆಗಳ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆಯರ್‌ಗಳು ಬಂದು ಸ್ಥಳ ಪರಿಶೀಲನೆ ನಡೆಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವುದಕ್ಕೂ ಕಾಲಮಿತಿ ನಿಗದಿಪಡಿಸಲಾಗುವುದು. ಒಂದು ವೇಳೆಲೋಪ ಕಂಡುಬಂದಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವುದಕ್ಕೆ ಮುಂದಾಗಿದೆ.
ಸರಳೀಕರಣಕ್ಕೆ ಚಿಂತನೆ: ನಮೂನೆ-3 ಅನ್ನು ಈಗಿರುವುದಕ್ಕಿಂತಲೂ ಸರಳೀಕರಣ ಮಾಡುವುದಕ್ಕೂ ಚಿಂತನೆ ನಡೆಸಿರುವ ಜಿಲ್ಲಾಡಳಿತ, ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಹಾಗೂ ಅರ್ಜಿ ಫಾರಂನ್ನು ಭರ್ತಿ ಮಾಡುವುದು, ಆನ್‌ಲೈನ್‌ಗೆ ಅಪ್‌ಲೋಡ್ ಮಾಡುವುದು, ಆನ್‌ಲೈನ್‌ನಲ್ಲೇ ನಮೂನೆ-3 ಪಡೆದುಕೊಳ್ಳುವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ತಿಗಳ ಆರ್‌ಟಿಸಿಗಳು ಸುಲಭವಾಗಿ ದೊರೆಯುವ ಮಾದರಿಯಲ್ಲೇ ನಮೂನೆ-3 ಅನ್ನೂ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ನಿಗದಿತ ಅವಧಿಯೊಳಗೆ ಸುಲಭವಾಗಿ ಪಡೆದುಕೊಳ್ಳುವಂತಹ ವ್ಯವಸ್ಥೆ ಜಾರಿಗೆ ತಂದಲ್ಲಿ ಹಲವು ಗೊಂದಲ ನಿವಾರಣೆಯಾಗುವ ಜೊತೆಗೆ ಸಿವಿಲ್ ವ್ಯಾಜ್ಯಗಳು ಸೃಷ್ಟಿಯಾಗುವುದು ತಪ್ಪಿಸಬಹುದು ಎಂಬ ಉದ್ದೇಶ ಹೊಂದಿದೆ.
ಕೈ ಬರಹದಲ್ಲಿ ನೀಡಿಕೆಗೆ ಕಡಿವಾಣ: ಕೈ ಬರಹಗಳಲ್ಲಿ ನಮೂನೆ-3 ನೀಡುತ್ತಿರುವುದರಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡು ನೋಂದಣಿ ಮಾಡಿಸುತ್ತಿರುವುದು, ಕೈ ಬರಹದಲ್ಲಿರುವುದನ್ನು ತಿದ್ದುವುದು ಕಂಡುಬಂದಿದೆ. ಇದರಿಂದ ಸಿವಿಲ್ ವ್ಯಾಜ್ಯಗಳು ಉದ್ಭವವಾಗುತ್ತಿದೆ.ಇದನ್ನು ತಪ್ಪಿಸುವ ಉದ್ದೇಶದಿಂದ ನಮೂನೆ-3 ಅನ್ನು ಅಧಿಕೃತವಾಗಿ ತಂತ್ರಾಂಶದ ಮೂಲಕ ಪಡೆದು ಸಕ್ಷಮ ಅಧಿಕಾರಿಯಿಂದ ದೃಢೀಕರಿಸಿದ ಫಾರಂ-3 ಪಡೆದು ನಂತರ ಆಸ್ತಿಯನ್ನು ನೋಂದಣಿ ಮಾಡುವಂತೆ ಸಂಬಂಧಿಸಿದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಸೂಚನೆ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ.
ಜಾಗೃತಿ ಫಲಕಕ್ಕೆ ಸೂಚನೆ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಗಳಲ್ಲಿ ಆಸ್ತಿ ತೆರಿಗೆ ಪಾವತಿಸಿದ ಕಟ್ಟಡ ಮಾಲೀಕರು ನಮೂನೆ-3 ಪಡೆಯುವ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಷ್ಟೋ ಜನರು ಆಸ್ತಿ ತೆರಿಗೆ ಪಾವತಿಸಿ ನಮೂನೆ-3 ಅನ್ನು ಪಡೆಯದೆ ರಸೀದಿ ಪಡೆದುಕೊಂಡು ಹೋಗುತ್ತಿದ್ದಾರೆ. ಕಟ್ಟಡ ಮಾಲೀಕರು ತಮ್ಮ ಆಸ್ತಿಯ ಎದುರು ನಿಂತು ಫೋಟೋ ತೆಗೆಸಿಕೊಂಡು ಬಳಿಕ ಆಸ್ತಿಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ ಅಪ್‌ಲೋಡ್ ಮಾಡುವ ವಿಧಾನವೇ ಗೊತ್ತಿಲ್ಲದೆ ಪರಿತಪಿಸುತ್ತಿದ್ದಾರೆ. ಕೆಲವರು ನಮೂನೆ-3 ಪಡೆಯಲು ತಿಂಗಳಾನುಗಟ್ಟಲೆ ಅಲೆದಾಡುತ್ತಿರುವ ವಿಷಯ ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿರುವುದರಿಂದ ನಗರಸಭೆ-ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿರುವ ಅವ್ಯವಸ್ಥೆ ಸರಿಪಡಿಸುವುದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಕ್ಕೆ ಕಾರ್ಯೋನ್ಮುಖವಾಗಿದೆ.
-ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.