ದಾಖಲೆ ಮಳೆ: ಬೆಳೆಗೆ ರೋಗ
Team Udayavani, Oct 23, 2022, 3:20 PM IST
ಮಂಡ್ಯ: ಕಳೆದ 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಾಖಲೆ ಮಳೆಯಾಗಿದ್ದು, ಜೂನ್‌ನಿಂದ ಸೆಪ್ಟೆಂಬರ್ ವರೆಗೂ ಮುಂಗಾರು ಅಬ್ಬರಿಸಿತ್ತು. ಈಗ ಹಿಂಗಾರು ಮಳೆಯೂ ಹವಾಮಾನ ವೈಪರೀತ್ಯದಿಂದಾಗಿ ಧಾರಾಕಾರವಾಗಿ ಸುರಿಯುತ್ತಿದೆ.
ಜಿಲ್ಲೆಯಲ್ಲಿ ಜೂನ್‌ನಿಂದಲೇ ನಿಧಾನವಾಗಿ ಆರಂಭಗೊಂಡ ಮಳೆ ಜುಲೈನಲ್ಲಿಯೇ ಅಬ್ಬರಿಸಿತ್ತು. ಪ್ರತಿ ವರ್ಷ ವಾಡಿಕೆಯಂತೆ ಸರಾಸರಿ 630 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಜುಲೈನಲ್ಲಿಯೇ 630ಕ್ಕಿಂತ ಹೆಚ್ಚು ಮಳೆ ಸುರಿದಿತ್ತು.
1389.8 ಮಿ.ಮೀ ಮಳೆ: ಅ.21ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲಾದ್ಯಂತ 1389.8 ಮಿ.ಮೀ ಸರಾಸರಿ ಮಳೆಯಾಗಿದ್ದು ಇದರಿಂದ ಶೇಕಡವಾರು 134 ಹೆಚ್ಚುವರಿ ಮಳೆ ಸುರಿದಿದೆ. ಕೆ.ಆರ್.ಪೇಟೆ 1451.7 ಮಿ.ಮೀ, ಮದ್ದೂರು 1368.1 ಮಿ.ಮೀ, ಮಳವಳ್ಳಿ 1263.4 ಮಿ.ಮೀ, ಮಂಡ್ಯ 1547.2 ಮಿ.ಮೀ, ನಾಗಮಂಗಲ 1360.6 ಮಿ.ಮೀ, ಪಾಂಡವಪುರ 1378.2 ಮಿ.ಮೀ, ಶ್ರೀರಂಗಪಟ್ಟಣ 1351.7 ಮಿ.ಮೀ ಮಳೆ ಸುರಿದಿದೆ.
4 ತಿಂಗಳಲ್ಲಿ 730 ಮಿ.ಮೀ ಮಳೆ: ಕಳೆದ ಜೂನ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೂ ಸರಾಸರಿ 730 ಮಿ.ಮೀ ಮಳೆಯಾಗಿದೆ. ಇದರಿಂದ ಶೇ.131 ಹೆಚ್ಚುವರಿ ಮಳೆಯಾಗಿತ್ತು. ಕೆ.ಆರ್.ಪೇಟೆ 672.7 ಮಿ.ಮೀ, ಮದ್ದೂರು 792 ಮಿ.ಮೀ, ಮಳವಳ್ಳಿ 629.1 ಮಿ.ಮೀ, ಮಂಡ್ಯ 870.7 ಮಿ.ಮೀ, ನಾಗಮಂಗಲ 787.8 ಮಿ.ಮೀ, ಪಾಂಡವಪುರ 644.1 ಮಿ.ಮೀ, ಶ್ರೀರಂಗಪಟ್ಟಣ 675.1 ಮಿ.ಮೀ ಮಳೆಯಾಗಿದೆ.
ಅಕ್ಟೋಬರ್‌ನಲ್ಲೇ 276.7 ಮಿ.ಮೀ ಮಳೆ: ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದುವರೆಗೂ ಅಕ್ಟೋಬರ್‌ನಲ್ಲಿ ಇಷ್ಟೊಂದು ಮಳೆ ಸುರಿದಿಲ್ಲ. ಕಳೆದ ಅ.1ರಿಂದ 21ರವರೆಗೆ 276.7 ಮಿ.ಮೀ ಮಳೆಯಾಗಿದೆ. ಕೆ.ಆರ್ .ಪೇಟೆ 309.9 ಮಿ.ಮೀ, ಮದ್ದೂರು 253.8 ಮಿ.ಮೀ, ಮಳವಳ್ಳಿ 280.8 ಮಿ.ಮೀ, ಮಂಡ್ಯ 311.7 ಮಿ.ಮೀ, ನಾಗಮಂಗಲ 207.4 ಮಿ.ಮೀ, ಪಾಂಡವಪುರ 330.1 ಮಿ.ಮೀ, ಶ್ರೀರಂಗಪಟ್ಟಣ 277.1 ಮಿ.ಮೀ ಮಳೆ ಸುರಿದಿದೆ.
ಬೆಳೆಗಳಿಗೆ ರೋಗ ಭೀತಿ: ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಹಾಗೂ ಪ್ರತಿದಿನ ಮೋಡ ಕವಿದ ವಾತಾವರಣವಿರುವುದರಿಂದ ಬೆಳೆಗಳಿಗೆ ರೋಗ ಭೀತಿ ಎದುರಾಗುತ್ತಿದೆ. ಈಗಾಗಲೇ ಅಲ್ಲಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಅಲ್ಲದೆ, ಭತ್ತದ ಬೆಳೆಗೆ ಫಸಲ್ ಬಿಮಾ ವಿಮೆ ಮಾಡಿಸದ ರೈತರು ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ.
ಹಿಂಗಾರು ಮಳೆಯಿಂದ ರೈತರಿಗೆ ಸಂಕಷ್ಟ: ಆಗಸ್ಟ್ ಹಾಗೂ ಸೆಪ್ಟೆಂಬರ್‌ವರೆಗೂ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಆದರೆ, ವಿಪರೀತ ಮಳೆಯಿಂದ ತಡವಾಗಿ ರೈತರು ಬಿತ್ತನೆ ಕಾರ್ಯ ನಡೆಸಿದ್ದಾರೆ. ಅಲ್ಲದೆ, ಅಕ್ಟೋಬರ್ ಮೊದಲ ವಾರದವರೆಗೂ ಬಿತ್ತನೆ ಮಾಡಲಾಗಿದೆ. ಈಗ ಹಿಂಗಾರು ಮಳೆ ಸುರಿಯುತ್ತಿದ್ದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಬಿತ್ತನೆ ಕಾರ್ಯವೂ ಕುಂಠಿತವಾಗಿದ್ದು ಈಗಿರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕಳೆದ 4ದಿನ ಸುರಿದ ಮಳೆಗೆ 430ಕ್ಕೂ ಹೆಕ್ಟೇರ್‌ನಲ್ಲಿ ಕೃಷಿ ಬೆಳೆಗಳು ನಾಶವಾಗಿವೆ.
ಅ.15-21ರವರೆಗೆ
160.5 ಮಿ.ಮೀ ಮಳೆ
ತಾಲೂಕು ಮಳೆ (ಮಿ.ಮೀ)
ಕೆ.ಆರ್.ಪೇಟೆ 144.3
ಮದ್ದೂರು 159.5
ಮಳವಳ್ಳಿ 193.3
ಮಂಡ್ಯ 222.6
ನಾಗಮಂಗಲ 103.9
ಪಾಂಡವಪುರ 163.7
ಈ ವರ್ಷ ವಿಚಿತ್ರದಂತೆ ಮಳೆ ಸುರಿಯುತ್ತಿದೆ. ರೈತರು ಅತಿ ಹೆಚ್ಚು ಯೂರಿಯಾ ಬಳಸುತ್ತಿರುವು ದರಿಂದ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯಿಂದ ರೈತರಿಗೆ ಜಾಗೃತಿ ಮೂಡಿಸ ಲಾಗುತ್ತಿದೆ. ಭತ್ತದ ಬೆಳೆಗೆ ವಿಮೆ ಮಾಡಿಸಲು ತಿಳಿಸಲಾಗಿತ್ತು. ಆದರೆ ಯಾವ ರೈತರೂ ವಿಮೆ ಮಾಡಿಸಿಲ್ಲ. – ಅಶೋಕ್, ಕೃಷಿ ಜಂಟಿ ನಿರ್ದೇಶಕರು, ಮಂಡ್ಯ
– ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.