ಅಕ್ರಮ ಖಾತೆ ರದ್ದುಪಡಿಸಲು ಆಗ್ರಹ
ಪರಿಶಿಷ್ಟ ಎಡಗೈ ಜನಾಂಗದವರಿಗೆ ಹಂಚಿದ್ದ ಜಮೀನು ಪ್ರಭಾವಿಗಳಿಗೆ ಹಂಚಿಕೆ: ಆರೋಪ
Team Udayavani, Jul 30, 2019, 3:56 PM IST
ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದ ಸರ್ವೆ ನಂ. 267ರಲ್ಲಿ 1.20 ಗುಂಟೆ ಜಮೀನಿನಲ್ಲಿ 10 ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಿ ದಲಿತರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಮಿಷನ್, ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.
ಗ್ರಾಮದ ಸರ್ವೆ ನಂ. 267ರಲ್ಲಿ 1.2 ಗುಂಜೆ ಸರ್ಕಾರಿ ಕಟ್ಟೆ ಜಮೀನಿನಲ್ಲಿ 32.1/2 ಗುಂಟೆ ಜಮೀನನ್ನು ವಶಪಡಿಸಿಕೊಂಡು ಪರಿಶಿಷ್ಟ ಎಡಗೈ ಜನಾಂಗದವರಿಗೆ ಹಂಚಿಕೆ ಮಾಡಲಾಗಿತ್ತು.
ಉಳಿಕೆ 10 ಗುಂಟೆ ಜಮೀನು ಖಾಲಿ ಇದ್ದು, ಗ್ರಾಮದ ನಿವಾಸಿಗಳಾದ ಲಕ್ಷ್ಮ ಕೋಂ ಬುಂಡೆಕೆಂಪೇಗೌಡ ಹಾಗೂ ಪಿ.ನಾಗರಾಜು ಬಿನ್ ಪುಟ್ಟಸ್ವಾಮಿಗೌಡರಿಗೆ 2013 ರಲ್ಲಿ ಅಕ್ರಮ ಖಾತೆ ಮಾಡಲಾಗಿದೆ ಎಂದು ಆರೋಪಿಸಿದರು.
ಅಕ್ರಮ ಖಾತೆ ರದ್ದುಪಡಿಸಿ: ಸರ್ಕಾರಿ ಕಟ್ಟೆ ಜಮೀನನ್ನು ಅಕ್ರಮ ಖಾತೆ ಮಾಡಿರುವುದನ್ನು ರದ್ದುಪಡಿಸಬೇಕು. ಡಾ.ಬಾಬು ಜಗಜೀವನರಾಂ ಭವನಕ್ಕೆ ಹಾಗೂ ವಸತಿ ರಹಿತ ಎಡಗೈ ಜನಾಂಗದವರಿಗೆ ನೀಡಬೇಕು ಹಾಗೂ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಕೊಡಬೇಕು.
ಹಾಗೆಯೇ ಮಂಡ್ಯ ತಾಲೂಕು ಹುಲಿವಾನ ಜನತಾ ಕಾಲೋನಿಯಲ್ಲಿ ಸುಮಾರು 50 ವರ್ಷಗಳಿಂದ ಸುಮಾರು 100 ಪರಿಶಿಷ್ಟ ಜಾತಿಯ ಕುಟುಂಬಗಳು ವಾಸವಾಗಿರುತ್ತಾರೆ.
ಜಮೀನು ಅಗತ್ಯ: ಸರ್ಕಾರ ನೀಡಿರುವ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುತ್ತಾರೆ. ಇವರಿಗೆ ಯಾವುದೇ ಜಮೀನು ಇರುವುದಿಲ್ಲ. ಇವರು ಕೂಲಿ ನಂಬಿಕೊಂಡೇ ಜೀವನ ನಡೆಸುತ್ತಿದ್ದಾರೆ. ಇವರಿಗೆ ಶುಭ ಸಮಾರಂಭ, ಸಭೆ ನಡೆಸಲು ಜಮೀನು ಇರುವುದಿಲ್ಲ.
ಆದಕಾರಣ ಜನಾಂಗದ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು, ಗುಡಿ ಕೈಗಾರಿಕೆ ಮಾಡಿ ಅಭಿವೃದ್ಧಿ ಹೊಂದಲು 20 ಗುಂಟೆ ಜಮೀನು ಅವಶ್ಯಕತೆ ಇದ್ದು, ಈ ಜಮೀನನ್ನು ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕು ಎಂದು ಪ್ರತಿಭಟನಾಕಒತ್ತಾಯಿಸಿದರು.
ಸವರ್ಣೀಯರ ಅಡ್ಡಿ: ಹುಲಿವಾನ ಗ್ರಾಮದ ಸರ್ವೆ ನಂ. 105ರಲ್ಲಿ 1.23 ಎಕರೆ ಜಾಗವಿದ್ದು, ಅದರಲ್ಲಿ ಕೊಡಿಸಿಕೊಡಬೇಕು. ಈ ಮೂಲಕ ಕೇಳಿಕೊಳ್ಳುತ್ತೇವೆ. ಈ ಹಿಂದೆ ಸುಮಾರು ಬಾರಿ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಸವರ್ಣಿಯರು ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಜಾಗ ಹಂಚಿಕೆ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದ ಸರ್ವೆ ನಂ. 267ರ ಜಾಗವನ್ನು ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಬೇಕು. ಅಕ್ರಮ ಖಾತೆಯನ್ನು ರದ್ದುಮಾಡಬೇಕು. ನಿವೇಶನ ರಹಿತ ಎಡಗೈ ಜನಾಂಗದ ಉಳಿದ ಜಾಗವನ್ನು ಹಂಚಿಕೆ ಮಾಡಬೇಕು. ಬಾಬು ಜಗಜೀವನರಾಂ ಭವನಕ್ಕೆ ಮಂಜೂರು ಮಾಡಬೇಕು. ಹುಲಿವಾನ ಜನತಾ ಕಾಲೋನಿಯ ಜನರಿಗೆ ಬಾಬು ಜಗಜೀವನರಾಂ ಭವನ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸರ್ವೆ ನಂ. 105ರಲ್ಲಿ 20 ಗುಂಟೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಬುಜಿ, ಚಂದ್ರಕುಮಾರ್ ಸಿ.ಎಚ್.ಆರ್. ಕೃಷ್ಣ, ವೈ.ಜೆ.ಸ್ವಾಮಿ, ಶಂಕರ್, ನವೀನ್, ಭಾನುಪ್ರಕಾಶ್, ರಮಾನಂದ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.