ಸಿಡಿಹಬ್ಬದಲ್ಲಿ ಕಂಬಕ್ಕೆ ಮನುಷ್ಯರನ್ನು ಕಟ್ಟದಂತೆ ಆದೇಶ
ದೊಡ್ಡರಸಿನಕೆರೆ ಗ್ರಾಮದಲ್ಲಿ ಏಳೂರಮ್ಮ ದೇವತೆ ಸಿಡಿಹಬ್ಬ! ನಾಳೆಯಿಂದ ಮೂರು ದಿನಗಳ ಕಾಲ ಆಚರಣೆ
Team Udayavani, Feb 25, 2021, 8:01 PM IST
ಭಾರತೀನಗರ: ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಏಳೂರಮ್ಮ ದೇವತೆಯ ಸಿಡಿ ಹಬ್ಬ ಫೆ.26ರಿಂದ 28ವರೆಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, ಸಿಡಿಹಬ್ಬದಲ್ಲಿ ಕಂಬಕ್ಕೆ ಮನುಷ್ಯನನ್ನು ಕಟ್ಟ ದಂತೆ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ. ಐತಿಹಾಸಿಕ ಶ್ರೀಏಳೂರಮ್ಮ ಸಿಡಿಗೆ ಮನುಷ್ಯರನ್ನು ಸಿಡಿಕಂಬಕ್ಕೆ ಕಟ್ಟಿ ಎಳೆಯುವ ಬದಲು ಹೊಂಬಾಳೆ ಅಥವಾ ಗೊಂಬೆ ಕಟ್ಟಿ ರಥ ಎಳೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.
ತಾಲೂಕು ಆಡಳಿತದ ಕಳೆದ ವರ್ಷವೇ ಸಿಡಿ ಕಂಬಕ್ಕೆ ಮನುಷ್ಯರನ್ನು ಕಟ್ಟದಂತೆ ತೀರ್ಮಾನದ ಹಿನ್ನೆಲೆಯಲ್ಲಿ ಸಿಡಿಹಬ್ಬವನ್ನೇ ನಿಲ್ಲಿಸಲಾಗಿತ್ತು. ಸಿಡಿ ಮಹೋತ್ಸವ ಜನಪ್ರಿಯ: ಮಂಡ್ಯ ಜಿಲ್ಲೆ ಹಾಗೂ ವಿವಿಧ ಗ್ರಾಮದಲ್ಲಿ ಅಪಾರ ಭಕ್ತರನ್ನು ಹೊಂದಿರುವ ಶ್ರೀ ಏಳೂರಮ್ಮ ಮತ್ತು ಕಾಳಮ್ಮ ದೇವತೆಗಳ ಸಿಡಿ ಮಹೋತ್ಸವ ಜನಪ್ರಿಯವಾಗಿದೆ. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದ ಹಬ್ಬವನ್ನು ಕಳೆದ
ವರ್ಷ ನಿಲ್ಲಿಸಲಾಗಿತ್ತು. ಇದರಿಂದ ಗ್ರಾಮದಲ್ಲಿ ಸಮ ಸ್ಯೆಗಳಾಗಿದ್ದು, ಕಂಬಕ್ಕೆ ಮನುಷ್ಯನನ್ನು ಕಟ್ಟಲು ಅನುಮತಿ ನೀಡಬೇಕು ಎಂದು ಗ್ರಾಮದ ಮುಖಂಡರು ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಕೆ.ಎಂ.ದೊಡ್ಡಿ ಠಾಣೆಗೆ ಮನವಿ ನೀಡಿದ್ದಾರೆ. ಆದರೆ, ತಹಶೀಲ್ದಾರ್ ವಿಜಯ್ ಕುಮಾರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ, ಹಬ್ಬ ಆಚರಣೆ ಮಾಡಿ. ಆದರೆ, ಯಾವುದೇ ಕಾರ ಣಕ್ಕೂ ಕಂಬಕ್ಕೆ ಮನುಷ್ಯನನ್ನು ಕಟ್ಟಲು ಅವಕಾಶವಿಲ್ಲ. ನಾವುಅನುಮತಿ ನೀಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮನುಷ್ಯರನ್ನು ಕಟ್ಟಿ ಸಿಡಿ ಆಚರಣೆ ರದ್ದು: 75 ಅಡಿಯ ಮರಕ್ಕೆ ದೊಡ್ಡರಸಿನಕೆರೆ ಗ್ರಾಮದ ಎಲ್ಲೆಯಲ್ಲಿ ಗಂಗಮತಸ್ಥ ಜನಾಂಗದ ಮನೆಯ ಹಿರಿಯ ಮಕ್ಕಳು ಹಾಗೂ ಮುಟ್ಟನಹಳ್ಳಿ ಗ್ರಾಮದ ಎಲ್ಲೆಯಲ್ಲಿಒಕ್ಕಲಿಗ ಜಾತಿಯಲ್ಲಿ ಮದುವೆಯಾದ ಮನೆಯಹಿರಿಯ ಮಕ್ಕಳನ್ನು ಮೊದಲ ವರ್ಷ ತೇರಿನ ಕಂಬಕ್ಕೆನೇತು ಹಾಕಿ, ಅದನ್ನು ರಥಕ್ಕೆ ಕಟ್ಟಿ ಎಳೆಯುವ ಸಂಪ್ರದಾಯ ಈಗ ಮುರಿದು ಬಿದ್ದಿದೆ.
ಸಾವಿರಾರು ಭಕ್ತರ ನಿರೀಕ್ಷೆ: ಈ ಹಬ್ಬವನ್ನು ಚಿಕ್ಕರಸಿ ನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನ ದೊಡ್ಡಿ ಸೇರಿದಂತೆ 7 ಗ್ರಾಮಗಳ ಸಾವಿರಾರು ಭಕ್ತರು ಹಬ್ಬ ದಲ್ಲಿ ಪಾಲ್ಗೊಂಳ್ಳುವ ನಿರೀಕ್ಷೆಯಿದೆ.
ಕೊಂಡಾಬಂಡಿ ಉತ್ಸವ: ಫೆ.26ರ ಶುಕ್ರವಾರ ರಾತ್ರಿ 7 ಗಂಟೆಗೆ ಶ್ರೀಮಾರಮ್ಮ ದೇಗುಲದಲ್ಲಿ 5 ಕೊಂಡಾಬಂಡಿಗಳನ್ನು ಕಟ್ಟಿ ಏಳೂರಮ್ಮ, ಕಾಳಮ್ಮ, ಹಿರಿಯಮ್ಮ ದೇವಸ್ಥಾನದ ಸುತ್ತ ಪ್ರದರ್ಶನ ಮಾಡಲಾಗುವುದು,ಗ್ರಾಮದ ಪ್ರಮುಖ ರಸ್ತೆಯಲ್ಲಿ ಕೊಂಡಾಬಂಡಿ ಮೆರವಣಿಗೆ ನೆಡಸಲಾಗುವುದು.
ದೇವತೆ, ಚಿಕ್ಕಮ್ಮ ದೇವತೆ ಈ ದೇವತೆಗಳು ಏಳೂರಮ್ಮ ದೇವಸ್ಥಾನಕ್ಕೆ ಹೋಗಿ ಹೂ - ಹೊಂಬಾಳೆ ಮಾಡಲಾಗುವುದು. ಇದನ್ನು ಏಳೂರಮ್ಮ ಗುಡ್ಡಪ್ಪ, ಕಾಳಮ್ಮನ ಗುಡ್ಡಪ್ಪಂದಿರು ರಥೋತ್ಸವದ ಹತ್ತಿರ ಬಂದು ಪೂಜೆಸಲ್ಲಿಸುತ್ತಾರೆ. ನಂತರ ರಥದ ಮೇಲೆ ಎಡ-ಬಲದ ಇಬ್ಬರು ಗುಡ್ಡಪ್ಪಂದಿರು ಕುಳಿತು ರಥೋ ತ್ಸವ ನಡೆಯಲಿದೆ. ಗ್ರಾಮದ ಸಾವಿರಾರು ಮಹಿಳೆಯರು 27ರ ಶನಿವಾರ ಬೆಳಗ್ಗೆ 7 ಗಂಟೆಗೆ ಏಳೂರಮ್ಮ ದೇವಸ್ಥಾಕ್ಕೆ ಕಿಚಡಿ ಅನ್ನ ಮಾಡಿಕೊಂಡು ಹೋಗಿ ಪೂಜೆಸಲ್ಲಿಸುತ್ತಾರೆ. ನಂತರ ಈಡಿಗರ ಜನಾಂಗ ದವರು ಪೋತಲಿಂಗೇಶ್ವರ ದೇಗುಲದ ಹತ್ತಿರ ಆರತಿ ಮಾಡುತ್ತಾರೆ.
ಕೊಂಡೋತ್ಸವ: ಶನಿವಾರ 9 ಗಂಟೆಗೆ ಏಳೂರಮ್ಮ ದೇವಸ್ಥಾನದ ಹತ್ತಿರ ನಡೆಯುವ ಕೊಂಡೋತ್ಸವಕ್ಕೆ ಶುಕ್ರವಾರ ಸಂಜೆ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನದೊಡ್ಡಿ ಗ್ರಾಮಸ್ಥರು ಸೌದೆ ತಂದು ಹಾಕುತ್ತಾರೆ. ಪೂಜೆ ಸಲ್ಲಿಸಿ ಸೌದೆಗೆ ಬೆಂಕಿಹಾಕುತ್ತಾರೆ. ಏಳೂರಮ್ಮನ ಗುಡ್ಡಪ್ಪ, ಕಾಳಮ್ಮನ ಪೂಜಾರಿ, ಕ್ಯಾತಮ್ಮನ ಪೂಜಾರಿ ಕರಗಹೊತ್ತು ಕೊಂಡೋತ್ಸವ ನಡೆಸುತ್ತಾರೆ.
ಅಣ್ಣೂರು ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.