ಭರದಿಂದ ಸಾಗಿದೆ ಆರು ಪಥದ ರಸ್ತೆ ಕಾಮಗಾರಿ

ಬೂದನೂರು ಗ್ರಾಮಸ್ಥರಿಗೆ ಇನ್ನೂ ತಲುಪಿಲ್ಲ ಸೂಕ್ತ ಪರಿಹಾರ,ಮಂಡ್ಯ ನಗರದ ವ್ಯವಹಾರಕ್ಕೆ ಬೀಳಲಿದೆ ಬ್ರೇಕ್‌

Team Udayavani, Oct 13, 2020, 1:59 PM IST

Mandya-tdy-1

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಆರು ಪಥದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಸುಮಾರು 117 ಕಿ.ಮೀ ಉದ್ದದ ರಸ್ತೆಗೆ 2+2 ಸರ್ವೀಸ್‌ ರಸ್ತೆ ಸೇರುವುದರಿಂದ ಒಟ್ಟು 10 ಪಥ ಆಗಲಿದೆ. ಬೆಂಗಳೂರು ನೈಸ್‌ ರಸ್ತೆಯಿಂದ ಮೈಸೂರಿನ ಕೊಲಂಬಿಯಾ ಆಸ್ಪತ್ರೆವರೆಗೂ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು-ಮೈಸೂರಿನವರೆಗೆ ರಾಮನಗರ, ಮಂಡ್ಯ ಎರಡು ಕಡೆ ಬೈಪಾಸ್‌ ರಸ್ತೆ ಬರಲಿದೆ. ಒಟ್ಟು 32 ಕಿ.ಮೀ ಉದ್ದದ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿದೆ. ರಾಮನಗರದ ಜೈಪುರ ಗ್ರಾಮದಿಂದ ಚನ್ನಪಟ್ಟಣದ ಭೈರಾಪಟ್ಟಣವರೆಗೆ22ಕಿ.ಮೀ ಉದ್ದದಒಂದು ಬೈಪಾಸ್‌ ಬಂದರೆ, ಮಂಡ್ಯದಲ್ಲಿ 10 ಕಿ.ಮೀ ಬೈಪಾಸ್ ‌ರಸ್ತೆ ನಿರ್ಮಾಣವಾಗಲಿದೆ. ಬೆಂಗಳೂರಿನಿಂದಮೈಸೂರಿನವರೆಗೆ ಸುಮಾರು 8.5 ಕಿ.ಮೀಮೇಲ್ಸುತುವೆ ಬರಲಿದೆ. ಮಂಡ್ಯದಲ್ಲಿ ಎರಡು ಕಡೆ ಮೇಲ್ಸುತುವೆ ಬರಲಿದೆ.

ಬೆಂಗಳೂರು ಕಡೆಯಿಂದ ಮಂಡ್ಯದ ಅಮರಾವತಿಹೋಟೆಲ್‌ನ ಬಲಭಾಗದಿಂದ ಮೈಸೂರಿನಿಂದ ಎಡ ಗಡೆಗೆ ಬರುವ ಇಂಡುವಾಳು ಗ್ರಾಮದ ಸಮೀಪ ದವರೆಗೆ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿದೆ.

ಶೇ.53ರಷ್ಟು ಕೆಲಸ ಪೂರ್ಣ: ಬೆಂಗಳೂರಿನಿಂದ ಮದ್ದೂರಿನ ನಿಡಘಟ್ಟದವರೆಗೆ ಶೇ.53ರಷ್ಟು ಕೆಲಸ ಪೂರ್ಣಗೊಂಡಿದ್ದರೆ, ನಿಡಘಟ್ಟದಿಂದ ಮೈಸೂರಿನವರೆಗೆ ಶೇ.32ರಷ್ಟು ಕಾಮಗಾರಿ ಮುಗಿದಿದೆ. ಸಂಪೂರ್ಣ ಕಾಮಗಾರಿ ಮುಂದಿನ ವರ್ಷ ಡಿಸೆಂಬರ್‌ ವೇಳೆಗೆ ಮುಗಿಯುವ ಸಾಧ್ಯತೆ ಇದ್ದು, ಇದರಿಂದ ಬೆಂಗಳೂರು-ಮೈಸೂರು ಸಂಚಾರದ ಅವಧಿ ಕಡಿಮೆಯಾಗಲಿದೆ.

ಹೆಚ್ಚುವರಿ ಭೂಸ್ವಾಧೀನ: ಹೆದ್ದಾರಿಗೆ ಬೇಕಾದ ಜಮೀನನ್ನು ರೈತರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗ ಇನ್ನೂ ಹೆಚ್ಚುವರಿ ಭೂಮಿ ಅಗತ್ಯವಿದ್ದು, ಹೆಚ್ಚುವರಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸರ್ಕಾರ ಗೆಜೆಟೆಡ್‌ ನೋಟಿಫಿಕೇಷನ್‌ ಹೊರಡಿಸುವ ಸಾಧ್ಯತೆ ಇದೆ. ಬಗೆಹರಿಯದ ಪರಿಹಾರ ಗೊಂದಲ: ಹೆದ್ದಾರಿಕಾಮಗಾರಿಗಾಗಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದರಂತೆಪರಿಹಾರವನ್ನು ವಿತರಣೆ ಮಾಡಲಾಗಿದೆ. ಆದರೆ,ಪರಿಹಾರ ವಿತರಣೆಯಲ್ಲಿ ತಾರತಮ್ಯ ಆರೋಪ ಕೇಳಿ ಬಂದಿತ್ತು. ಒಬ್ಬೊಬ್ಬರ ಮನೆಗೆ ಒಂದೊಂದುರೀತಿಯ ಪರಿಹಾರ ನೀಡಲಾಗಿತ್ತು. ಇದರಿಂದ ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ್ದರು. ಭೂಪರಿವರ್ತನೆಯಾಗಿಲ್ಲ ಎಂಬ ಒಂದೇ ಉದ್ದೇಶದಿಂದ ಮನೆ ಇರುವ ಜಾಗಕ್ಕೂ ಹೊಲ, ಗದ್ದೆಯ ದರ ಕುಂಟೆ ಲೆಕ್ಕದಲ್ಲಿ ಪರಿಹಾರ ನೀಡಲಾಗಿತ್ತು. ಇದರ ವಿರುದ್ಧ ಗ್ರಾಮಸ್ಥರು ತಕರಾರು ತೆಗೆದಿದ್ದಾರೆ. ಅದು ಇನ್ನೂ ಮುಂದುವರೆದಿದೆ. ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ದರ ನೀಡಿ, ಪ್ರಭಾವಿಗಳಿಗೆ ಹೆಚ್ಚು ಅಡಿ ಲೆಕ್ಕದಲ್ಲಿ ಪರಿಹಾರ ನೀಡಲಾಗಿದೆ. ಆದ್ದರಿಂದ ನಮಗೂ ಅಡಿ ಲೆಕ್ಕದಲ್ಲಿಪರಿಹಾರ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಮರು ಸರ್ವೆಗೆ ಆಗ್ರಹ: ಪರಿಹಾರದಲ್ಲಿ ತಾರತಮ್ಯ ಮಾಡಿರುವುದರಿಂದ ಮರು ಸರ್ವೆ ನಡೆಸಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅದರಂತೆ ಖಾಸಗಿ ಏಜೆನ್ಸಿಗೆ ಮರು ಪರಿಶೀಲನೆ ನಡೆಸಲು ಸೂಚಿಸಲಾಗಿತ್ತು. ಆದರೆ, ಅದು ಇನ್ನೂ ಕಾರ್ಯಗತವಾಗಿಲ್ಲ. ಇದರ ಬಗ್ಗೆಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರನೀಡುತ್ತಾರೆ. ಸೂಕ್ತ ಪರಿಹಾರ ಸಿಗುವವರೆಗೂಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ನಗರದ ವ್ಯಾಪಾರದ ಮೇಲೆ ಹೊಡೆತ :  ಮಂಡ್ಯದ ಹೊರವಲಯದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಮಂಡ್ಯ ನಗರದ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ. ಹೋಟೆಲ್‌ಗ‌ಳು, ಡಾಬಾಗಳು, ಸಣ್ಣಪುಟ್ಟ ಅಂಗಡಿಗಳು, ಕಾಫಿ, ಟೀ ಮಾರಾಟಗಾರರು ಸೇರಿದಂತೆ ಎಲ್ಲ ರೀತಿಯ ವ್ಯಾಪಾರ-ವಹಿವಾಟುಕುಸಿತಗೊಳ್ಳಲಿದೆ. ಇದರಿಂದ ವರ್ತಕರಿಗೆ ಆತಂಕ ಶುರುವಾಗಿದೆ. ಬೆಂಗಳೂರು ಹೆದ್ದಾರಿ ಇಕ್ಕೆಲಗಳಲ್ಲಿ ಹೋಟೆಲ್‌ಗ‌ಳು, ಶೋರೂಂಗಳು, ಮಾಲ್‌ಗ‌ಳು, ಬೇಕರಿಗಳು, ಹಣ್ಣು, ಹೂ, ತರಕಾರಿ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು, ಫಾಸ್ಟ್‌ಫ‌ುಡ್‌ ಅಂಗಡಿಗಳು, ಇತರೆ ವಾಣಿಜ್ಯ ಅಂಗಡಿಗಳಿವೆ. ಈ ಎಲ್ಲ ವ್ಯಾಪಾರಸ್ಥರು ಮಂಡ್ಯ ನಗರದ ಜನತೆ ಅಲ್ಲದೆ, ಬೆಂಗಳೂರು-ಮೈಸೂರು ಸಂಚರಿಸುವ ವಾಹನ ಸವಾರರು, ಪ್ರಯಾಣಿಕರನ್ನು ಅವಲಂಬಿಸಿದ್ದರು. ಆದರೆಬೈಪಾಸ್‌ ರಸ್ತೆ ನಿರ್ಮಾಣವಾಗುವುದರಿಂದ ಈ ಎಲ್ಲವ್ಯಾಪಾರಿಗಳಿಗೆ ವ್ಯವಹಾರಕ್ಕೆ ತೊಂದರೆಯಾಗಲಿದೆ.

ನಿರಾಶ್ರಿತರ ಪಟ್ಟಿಗೆ ಸೇರಿಸಿ, ಉದ್ಯೋಗದಲ್ಲಿ ಮೀಸಲಾತಿ ನೀಡಿ : ಅಧಿಕಾರಿಗಳು ಮೌಲ್ಯಮಾಪನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೇರೆಯವರಿಗೆ ಚದರಡಿಗೆ 1500 ರೂ. ನೀಡಿ, ನಮಗೆ ಗುಂಟೆ ಲೆಕ್ಕದಲ್ಲಿ ಹಣನೀಡಲಾಗಿದೆ. ಇದರಿಂದ ಅಡಿಗೆಕೇವಲ 235 ರೂ. ನೀಡುವ ಮೂಲಕ ತಾರತಮ್ಯ ಎಸಗಿದ್ದಾರೆ. ಆರಂಭದಲ್ಲಿ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಹೇಳಿ ಭೂಮಿ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪುನರ್ವಸತಿ ಕಲ್ಪಿಸಿಕೊಡುತ್ತೇವೆ ಎಂದು ಹೇಳಿದ್ದರು. ಅದನ್ನು ಮಾಡುತ್ತಿಲ್ಲ. ಆದ್ದರಿಂದ ಕೂಡಲೇ ಮರುಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರನ್ನು ನಿರಾಶ್ರೀತರ ಪಟ್ಟಿಗೆ ಸೇರಿಸಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದುಬೂದನೂರು ಗ್ರಾಮದಲ್ಲಿ ಮನೆ ಕಳೆದು ಕೊಂಡಬಿ.ಎಂ.ರಾಜಾಆಗ್ರಹಿಸಿದ್ದಾರೆ.

ಈಗಾಗಲೇಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದೊಳಗೆಕಾಮಗಾರಿ ಮುಗಿಯುವ ಸಾಧ್ಯತೆ ಇದೆ. ಭೂ ಸ್ವಾಧೀನಪಡಿಸಿಕೊಂಡ ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಬೂದನೂರು ಗ್ರಾಮದಲ್ಲಿ ಮರು ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಗೊಂದಲ ನಿವಾರಿಸಲಾಗುವುದು. ಶ್ರೀಧರ್‌, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ

ನಮಗೆ ಸೂಕ್ತ ಪರಿಹಾರ ನೀಡಿಲ್ಲ. ಇದರ ಬಗ್ಗೆ ಕೇಳಿದರೆ ಡೀಸಿ ನ್ಯಾಯಾಲಯದಲ್ಲಿ ಪ್ರಕರಣದಾಖಲಿಸಿ ಎಂದಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿದರೂ ವಿಚಾರಣೆ ನಡೆಸಿಲ್ಲ. ನಮ್ಮೆಲ್ಲರ ಬಳಿ ಮನೆಗಳಖಾತೆ ಇದ್ದು, ಪ್ರತಿ ವರ್ಷ ಕಂದಾಯಕಟ್ಟಿದ್ದೇವೆ. ಆದರೂ, ಪರಿಹಾರ ನೀಡಲು ತಾರತಮ್ಯ ಎಸಗಿದ್ದಾರೆ. ಬಿ.ಪಿ.ಅನಂತರಾಜು, ಬೂದನೂರು ಗ್ರಾಮ

ಕಳೆದ 15 ವರ್ಷಗಳಿಂದ ಹೆದ್ದಾರಿಯಲ್ಲಿಕಾಫಿ,ಟೀ ಮಾರುತ್ತಾ ಜೀವನ ಸಾಗಿಸುತ್ತಿದ್ದೇವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಂದಲೇ ವ್ಯಾಪಾರವಾಗುತ್ತಿತ್ತು. ಆದರೆ,ಈಗಬೈಪಾಸ್‌ ರಸ್ತೆ ನಿರ್ಮಾಣದಿಂದ ವಾಹನಗಳು ಆ ಭಾಗದಲ್ಲಿ ಸಂಚರಿಸುವುದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಲಿದೆ. ಕುಮಾರ್‌, ಟೀ ಅಂಗಡಿ ಮಾಲೀಕ

ನಮ್ಮ ಹೋಟೆಲ್‌ಗೆ ನಿತ್ಯ ಬೆಂಗಳೂರು- ಮೈಸೂರಿನಿಂದ ಗ್ರಾಹಕರು ಬರುತ್ತಿದ್ದರು. ಬೈಪಾಸ್‌ ರಸ್ತೆ ನಿರ್ಮಾಣದಿಂದ ಗ್ರಾಹಕರ ಸಂಖ್ಯೆಕಡಿಮೆಯಾಗಲಿದೆ. ಅಲ್ಲದೆ, ಬೆಂಗಳೂರು-ಮೈಸೂರು ಎಷ್ಟೋ ಮಂದಿ ಹೆದ್ದಾರಿ ವ್ಯಾಪಾರವನ್ನೇ ನಂಬಿಕೊಂಡಿರುವವರು ಸಾಕಷ್ಟು ಮಂದಿ ಇದ್ದಾರೆ. ಪ್ರದೀಪ್‌, ದಯಾನಂದ ಮೆಸ್‌, ಹೋಟೆಲ್‌ ಮಾಲೀಕ

 

ಎಚ್‌.ಶಿವರಾಜು

ಟಾಪ್ ನ್ಯೂಸ್

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

Manipur: ಮತ್ತೆ ಸಶಸ್ತ್ರಪಡೆಗಳ ಕಾಯ್ದೆ ಜಾರಿ; ಸೇನಾ ಕಾರ್ಯಾಚರಣೆ:ಶಸ್ತ್ರಾಸ್ತ್ರಗಳು ವಶಕ್ಕೆ

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Chennai: ತಮಿಳುನಾಡಿನಲ್ಲಿ ಮತ್ತೊಬ್ಬ ವೈದ್ಯನ ಮೇಲೆ ದಾಳಿ, ಪರಾರಿ

Suilla

Bantwala: ಬೋಳಂಗಡಿ; ಅಡಿಕೆ ಕೀಳುತ್ತಿದ್ದ ಕಾರ್ಮಿಕ ಮರದಿಂದ ಬಿದ್ದು ಸಾವು

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

ud

Puttur: ಮನೆ ಅಂಗಲದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.