ನಾಳೆ ಕೋಟೆ ಮುಂಬಾಗಿಲು ರಸ್ತೆ ಬದಿ ಅಂಗಡಿಗಳ ತೆರವು
ಕೋಟೆ ಬಾಗಿಲಿನಿಂದ ಹೆದ್ದಾರಿಯವರೆಗೆ ರಸ್ತೆ ಅಗಲೀಕರಣ ಕಾಮಗಾರಿ, ಪುರಸಭಾ ಅಧಿಕಾರಿಗಳಿಂದ ವ್ಯಾಪಾರಸ್ಥರಿಗೆ ಕೊನೆಯ ಎಚ್ಚರಿಕೆ
Team Udayavani, Sep 4, 2019, 11:51 AM IST
ಶ್ರೀರಂಗಪಟ್ಟಣದ ಕೋಟೆ ಮುಂಬಾಗಿಲು ರಸ್ತೆ ಬದಿ ವ್ಯಾಪಾರಿಗಳ ಅಂಗಡಿ ತೆರವು ಮಾಡಲು ಪುರಸಭಾ ಅಧಿಕಾರಿಗಳು ಮೌಖೀಕವಾಗಿ ವ್ಯಾಪಾರಸ್ಥರಿಗೆ ಸೂಚಿಸುವುದು.
ಶ್ರೀರಂಗಪಟ್ಟಣ: ಪಟ್ಟಣದ ಮೈಸೂರು -ಬೆಂಗಳೂರು ಹೆದ್ದಾರಿಯಿಂದ ಕೋಟೆ ಹೆಬ್ಟಾಗಿಲು ರಸ್ತೆಯ ಎರಡು ಬದಿ ಅಂಗಡಿಗಳ ತೆರವುಗೊಳಿಸಲು ಆದೇಶ ಬಂದಿದ್ದು ವ್ಯಾಪಾರಸ್ಥರು ಗುರುವಾರದೊಳಗೆ ತಮ್ಮ ತಮ್ಮ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಪಟ್ಟಣ ಪುರಸಭಾ ಮುಖ್ಯಾಧಿಕಾರಿ ಕೃಷ್ಣ ತಿಳಿಸಿದರು.
ವ್ಯಾಪಾರಸ್ಥರಿಗೆ ಮನವಿ: ಈ ಬಾರಿಯ ದಸರೆಯೊಳಗೆ ಕೋಟೆ ಬಾಗಿಲಿನಿಂದ ಹೆದ್ದಾರಿಯವರೆಗೆ ಅಂಗಡಿಗಳ ತೆರವುಗೊಳಿಸಿ ರಸ್ತೆ ಕಾಮಗಾರಿ ನಡೆಸಲು ಒಂದು ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಕಾಮಗಾರಿ ನಡೆಸಲು ವ್ಯಾಪಾರಸ್ಥರು ಸ್ಥಳ ಬಿಟ್ಟುಕೊಡಲು ಅಂಗಡಿ ಮುಂಗ್ಗಟ್ಟುಗಳ ಮುಂದೆ ವ್ಯಾಪಾರಸ್ಥರಿಗೆ ಮನವಿ ಮಾಡಿದರು.
ಸ್ಥಳ ಪರಿಶೀಲನೆ: ಪಟ್ಟಣವನ್ನು ಪ್ರವಾಸೋದ್ಯಮ ನಗರವನ್ನಾಗಿಸಲು ಸರ್ಕಾರದಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು ರಸ್ತೆ ಅಗಲೀಕರಣ ನಡೆಸಿ ರಸ್ತೆ ಚರಂಡಿ, ನಿರ್ಮಿಸಿ, ಸಾಲು ವಿದ್ಯುತ್ ದೀಪ ಅಳವಡಿಸಿ ಕೋಟೆ ಬಾಗಿಲು ನೇರವಾಗಿ ಹೆಬ್ಟಾಗಿಲಿನಂತೆ ಕಾಣಲು ಕಾಮಗಾರಿ ನಡೆಸುವಂತೆ ಆದೇಶ ಮಾಡಿದ್ದರಿಂದ ತ್ವರಿತವಾಗಿ ಲೋಕೋಪ ಯೋಗಿ ಇಲಾಖೆ ಎಇಇ ಮಹೇಶ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಮೌಖೀಕವಾಗಿ ತಿಳಿಸಲಾಗಿದೆ: ವ್ಯಾಪಾರಸ್ಥರನ್ನು ಕುರಿತು , ಪಟ್ಟಣದ ಪಾರಂಪರಿಕ ಯೋಜನೆಗಳಿಗೆ ಕೋಟೆ ಮುಂಭಾಗದಲ್ಲಿ ಇಟ್ಟಿರುವ ಅಂಗಡಿಗಳು ಧಕ್ಕೆಯಾಗುತ್ತಿವೆ. ಇಲ್ಲಿವರೆಗೂ ಸ್ಥಳ ಬಿಟ್ಟುಕೊಡಲು
ವ್ಯಾಪಾರಸ್ಥರಿಗೆ ಮೌಖೀಕವಾಗಿ ಸಿಬ್ಬಂದಿಗಳಿಂದ ತಿಳಿಸಲಾಗಿದೆ. ಆದರೂ, ಸ್ಥಳ ಬಿಟ್ಟುಕೊಡಲು ಒಪ್ಪದ ಕಾರಣ ಹೆದ್ದಾರಿಯಿಂದ ಕೋಟೆ ಬಾಗಿಲುವರೆಗೂ ಇಟ್ಟಿರುವ ಅಂಗಡಿಗಳನ್ನು ಗುರುವಾರ ಪುರಸಭಾ ಸಿಬ್ಬಂದಿಗಳೊಂದಿಗೆ ಅಂಗಡಿ ತೆರವು ಕಾರ್ಯ ನಡೆಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಕೃಷ್ಣ ‘ಉದಯವಾಣಿ’ಗೆ ತಿಳಿಸಿದರು.
13 ಕೋಟಿ ರೂ.ವಿಶೇಷ ಅನುದಾನ: ಪಟ್ಟಣವನ್ನು ಪ್ರವಾಸೋದ್ಯಮ ನಗರವನ್ನಾಗಿ ಮಾಡಲು ಸರ್ಕಾರ ದಸರಾ ವಿಶೇಷವಾಗಿ 2018-19ನೇ ಸಾಲಿನಲ್ಲಿ 13 ಕೋಟಿ ರೂ.ಹಣ ಬಿಡುಗಡೆ ಗೊಳಿಸಿದೆ. ಕಾರಣಾಂತರದಿಂದ ಕಾಮಗಾರಿಗೆ ಚಾಲನೆ ದೊರೆತಿಲ್ಲ.
ಈಗ ಪ್ರಸ್ತುತ ಚಾಲನೆ ನೀಡಲು ಸರ್ಕಾರ ಮುಂದಾಗಿದ್ದು ಪಟ್ಟಣದ ನೀಲಿ ನಕ್ಷೆಯೊಂದಿಗೆ ಸಿದ್ಧತಾ ವರದಿ ತಯಾರಿ ನಡೆದಿದೆ. ಪಟ್ಟಣದ ಮುಖ್ಯ ರಸ್ತೆ, ಪಟ್ಟಣದ ಸುತ್ತಲ ರಾಂಪಾಲ್ ರಸ್ತೆ, ದಸರಾ ಬನ್ನಿ ಮಂಟಪದ ಬಳಿ ರಂಗಮಂದಿರ , ಪಟ್ಟಣ ಸ್ವಚ್ಛತೆಗೆ ಅಗತ್ಯ ಸೌಕರ್ಯ, ಇವೆಲ್ಲದರ ಜೊತೆಯಲ್ಲಿ ಬೃಹತ್‌ಕಾರದ ವಿದ್ಯುತ್ ದೀಪ ಸೇರಿ ಮೂಲ ಭೂತ ಸೌಕರ್ಯ ಅಳವಡಿಸಲು ಈಗಾಗಲೇ ಸಿದ್ಧತೆಯಲ್ಲಿದ್ದು ಕಾಮಗಾರಿಗೆ ಚಾಲನೆ ಸದ್ಯದಲ್ಲಿ ದೊರೆಯುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಮಹೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಎಇ ರೇವಣ್ಣ, ಪುರಸಭಾ ಅಧಿಕಾರಿಗಳಾದ ಸೋಮಶೇಖರ್, ಶಿವಶಂಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.