ರಾಯಣ್ಣ, ಕನಕರ ಪ್ರತಿಮೆ ಧ್ವಂಸ
Team Udayavani, May 10, 2018, 7:50 AM IST
ಕೆ.ಆರ್.ಪೇಟೆ/ಕಿಕ್ಕೇರಿ (ಮಂಡ್ಯ): ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ
ಪ್ರತಿಮೆಗಳನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದು, ಇದನ್ನು ಖಂಡಿಸಿ ತುಳಸಿ ಗ್ರಾಮದ ಸಮೀಪ
ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಚನ್ನರಾಯಪಟ್ಟಣ ಮತ್ತು ಕೆ.ಆರ್.ಪೇಟೆ ಮುಖ್ಯ ರಸ್ತೆಯಿಂದ ತುಳಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಯುವಕರೆಲ್ಲಾ ಸೇರಿ ಮಹಾದ್ವಾರವನ್ನು ನಿರ್ಮಾಣ ಮಾಡುತ್ತಿದ್ದರು. ಆ ದ್ವಾರದ ಮೇಲೆ ಸಿಮೆಂಟ್‌ನಿಂದ ಕನಕದಾಸರು ಮತ್ತು ಸಂಗೋಳ್ಳಿರಾಯಣ್ಣ ಅವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಮಂಗಳವಾರ ರಾತ್ರಿ ದುಷ್ಕರ್ಮಿಗಳು ಎರಡೂ ಪ್ರತಿಮೆಗಳ ಕೈಗಳನ್ನು ಮುರಿದು ಹಾಕಿದ್ದಾರೆ. ಆದರೆ, ಅವುಗಳ ಪಕ್ಕದಲ್ಲಿಯೇ ನಿರ್ಮಾಣ ಮಾಡಿದ್ದ ಗಣೇಶ ಮತ್ತು ಈಶ್ವರ ದೇವರ ವಿಗ್ರಹಗಳಿಗೆ ಯಾವುದೇ ಹಾನಿ ಮಾಡಿಲ್ಲ.
ವಿಷಯ ತಿಳಿದು ಗ್ರಾಮಸ್ಥರು ಬುಧವಾರ ರಸ್ತೆ ತಡೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ, ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.