ಪಾಳುಬಿದ್ದ ಗುಂಡು ತೋಪಿಗೆ ಕಾಯಕಲ್ಪ

ಗಿಡ-ಗಂಟಿಗಳ ತೆರವು: ತಲೆ ಎತ್ತಿದ 200 ತೆಂಗು ಸಸಿಗಳು • ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘ ಸಾಧನೆ

Team Udayavani, Jun 3, 2019, 12:39 PM IST

mandya-tdy-3..

ಮಂಡ್ಯ: ಗಿಡ-ಗಂಟಿ, ಮುಳ್ಳುಗಿಡಗಳು ಬೆಳೆದುಕೊಂಡು ಪೊದೆಯಂತಿದ್ದು ವಿಷಜಂತುಗಳಿಗೆ ಆಶ್ರಯತಾಣವಾಗಿದ್ದ ಗುಂಡುತೋಪಿನ ಜಾಗದಲ್ಲೀಗ ತೆಂಗಿನ ಸಸಿಗಳು ತಲೆಎತ್ತಿ ನಿಂತಿವೆ. ವಿವಿಧ ಜಾತಿಯ ಬೆಲೆಬಾಳುವ ಮರದ ಸಸಿಗಳನ್ನು ನೆಟ್ಟಿ ಬೆಳೆಸಲು ಕಂಕಣ ತೊಡಲಾಗಿದೆ. ಹತ್ತಾರು ವರ್ಷಗಳಿಂದ ಇದ್ದ ಈ ಪ್ರದೇಶ ಸ್ವರೂಪ ಈಗ ಬದಲಾಗಿದೆ. ಇದಕ್ಕೆಲ್ಲಾ ಮೂಲ ಕಾರಣ ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು.

ಟಿ.ಮಲ್ಲೀಗೆರೆ ಗ್ರಾಮದ ಶ್ರೀ ಊರಮಾರಮ್ಮ ದೇವಾಲಯಕ್ಕೆ ಹೊಂದಿಕೊಂಡಂತಿರುವ ಗುಂಡುತೋಪು ಜಾಗ ಅಭಿವೃದ್ಧಿ ಕಾಣದೆ ಹತ್ತಾರು ವರ್ಷಗಳಿಂದ ಅನಾಥವಾಗಿತ್ತು. 6 ಎಕರೆ 3 ಗುಂಟೆ ವ್ಯಾಪ್ತಿಯ ಪ್ರದೇಶದಲ್ಲಿ ಗಿಡ-ಗಂಟೆಗಳು, ಮುಳ್ಳಿನ ಗಿಡಗಳು ಬೆಳೆದುಕೊಂಡು ಬಳ್ಳಿಗಳು ಆವರಿಸಿಕೊಂಡಿದ್ದವು. ಇಡೀ ಪ್ರದೇಶ ಕಾಡಿನ ಸ್ವರೂಪ ಪಡೆದುಕೊಂಡಿತ್ತು.

ಗಿಡಗಂಟಿಗಳ ತೆರವು: ಗ್ರಾಮ ದೇವತೆ ಶ್ರೀ ಊರಮಾರಮ್ಮ ದೇವಸ್ಥಾನಕ್ಕೆ ವಿದ್ಯುತ್‌ ದೀಪದ ಬೆಳಕಿಲ್ಲದೆ ಕತ್ತಲು ಆವರಿಸಿತ್ತು. ರಾತ್ರಿ ಸಮಯದಲ್ಲಿ ಈ ಜಾಗಕ್ಕೆ ಹೋಗುವುದಕ್ಕೆ ಭಯಪಡುವಂತಹ ವಾತಾವರಣವಿತ್ತು. ಗ್ರಾಮದೇವತೆ ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳೆಲ್ಲರೂ ಗುಂಡುತೋಪು ಜಾಗದಲ್ಲಿ ಬೆಳೆದಿದ್ದ ಗಿಡ- ಗಂಟಿಗಳನ್ನೆಲ್ಲಾ ತೆರವುಗೊಳಿಸಿ ಕಾಯಕಲ್ಪ ನೀಡುವುದಕ್ಕೆ ಸನ್ನದ್ಧರಾದರು.

ಉಳುಮೆ ಮಾಡಿ ಸಮತಟ್ಟು: ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದ ಈ ಜನೋಪಯೋಗಿ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿ ಸಿದರು. ಗುಂಡುತೋಪು ಜಾಗದಲ್ಲಿದ್ದ ಗಿಡ-ಗಂಟಿಗಳನ್ನೆಲ್ಲಾ ತೆರವುಗೊಳಿಸಿ ಮಟ್ಟ ಮಾಡಿದರು. ಸಣ್ಣ-ಪುಟ್ಟ ಗಿಡ-ಮರಗಳನ್ನೆಲ್ಲಾ ಬೇರು ಸಹಿತ ಕಿತ್ತೆಸೆದರು. ಒಳಗಡೆ ಇದ್ದ ಕಲ್ಲುಗಳನ್ನೆಲ್ಲಾ ತೆಗೆದು ರಸ್ತೆಬದಿಗೆ ಹಾಕಿದರು. ಇಡೀ ಗುಂಡು ತೋಪು ಜಾಗವನ್ನು ಟ್ರ್ಯಾಕ್ಟರ್‌ ಸಹಾಯದಿಂದ ಉಳುಮೆ ಮಾಡಿದರು. ಭೂಮಿ ಸ್ವಚ್ಛಗೊಳಿಸಿದರು.

ಸಸಿ ನೆಡಲು ತೀರ್ಮಾನ: ಆನಂತರ ಗುಂಡು ತೋಪಿನ ಆರು ಎಕರೆ ಜಾಗದಲ್ಲಿ 200 ತೆಂಗಿನ ಸಸಿಗಳನ್ನು ನೆಡಲು ನಿರ್ಧರಿಸಿದ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ತಾವೇ ಗುಂಡಿಗಳನ್ನು ತೆಗೆದು ಸಸಿ ನೆಟ್ಟು ದನ-ಕರುಗಳಿಂದ ಸಸಿಗಳನ್ನು ರಕ್ಷಣೆ ಮಾಡಲು ಸುತ್ತ ತಂತಿ ಬೇಲಿ ನಿರ್ಮಿಸಿ ಪೋಷಣೆ ಮಾಡುತ್ತಿರುವುದು ಇತರರಿಗೂ ಮಾದರಿಯಾಗಿದೆ. ಇದಲ್ಲದೆ ಜೂ.5ರಂದು ಉಳಿದ ಜಾಗದಲ್ಲಿ ಹೊಂಗೆ, ಬೇವು, ಬೀಟೆ, ಮಾವು ಸೇರಿದಂತೆ ವಿವಿಧ ಜಾತಿಯ 500 ಸಸಿಗಳನ್ನು ನೆಟ್ಟು ಬೆಳೆಸಲು ಸಂಘದವರು ತೀರ್ಮಾನಿಸಿದ್ದಾರೆ.

ದೇಗುಲಕ್ಕೆ ವಿದ್ಯುಚ್ಛಕ್ತಿ ವ್ಯವಸ್ಥೆ: ಗುಂಡು ತೋಪಿನ ಜಾಗ ಸಂಪೂರ್ಣ ಸ್ವಚ್ಛಗೊಂಡು ತೆಂಗಿನ ಸಸಿಗಳಿಂದ ಕೂಡಿ ಹೊಸ ರೂಪ ಪಡೆದುಕೊಂಡಿದ್ದರಿಂದ ಶ್ರೀ ಊರಮಾರಮ್ಮ ದೇವಾಲಯಕ್ಕೆ ಈಗ ಮೆರುಗು ಬಂದಿದೆ. ಗ್ರಾಮ ಪಂಚಾಯಿತಿಯವರು ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಕಾರ್ಯವನ್ನು ಮೆಚ್ಚಿ ದೇಗುಲಕ್ಕೆ ವಿದ್ಯುಚ್ಛಕ್ತಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಟಿ.ಮಲ್ಲೀಗೆರೆ ಗ್ರಾಮದ ಶ್ರೀ ಊರಮಾರಮ್ಮ ದೇಗುಲದ ಗುಂಡುತೋಪಿನ ಜಾಗ ವಾಯುವಿಹಾರಿಗಳಿಗೂ ಅನುಕೂಲಕರ ವಾತಾವರಣವಾಗಿ ರೂಪುಗೊಂಡಿದೆ. ರಸ್ತೆ ಡಾಂಬರೀಕರಣವಾಗಿದ್ದು, ಈ ಭಾಗದಲ್ಲಿ ಸೇತುವೆ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಶ್ರೀ ಊರಮಾರಮ್ಮ ಗ್ರಾಮಾಭಿವೃದ್ಧಿ ಸಂಘದವರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಗುಂಡು ತೋಪಿನ ಜಾಗಕ್ಕೆ ಹೊಸ ಕಾಯಕಲ್ಪ ಸಿಕ್ಕಿರುವುದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ ಸೂಚಿಸಿದ್ದಾರೆ. ಪಂಚಾಯಿತಿ ಪಿಡಿಒ ಯೋಗಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಂಘದ ಪದಾಧಿಕಾರಿಗಳು ಗುಂಡು ತೋಪಿನ ಜಾಗವನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ಸಂಘದ ಪದಾಧಿಕಾರಿ ಟಿ.ಮಲ್ಲೀಗೆರೆ ಎಂ.ಬಿ.ಲೋಕೇಶ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Untitled-1

Kasaragod Crime News: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.