12 ಕೋಟಿ ರೂ ವರ್ಗಾವಣೆಯಲ್ಲಿ ನಿಯಮ ಉಲ್ಲಂಘನೆ


Team Udayavani, Nov 27, 2017, 5:08 PM IST

mandyaa.jpg

ಮಂಡ್ಯ: ಆಸ್ಪತ್ರೆ ಬಳಕೆದಾರರ ನಿಧಿಗೆ ಸೇರಿದ 12 ಕೋಟಿ ರೂ. ಹಣವನ್ನು ನಿಯಮಾವಳಿ ಉಲ್ಲಂಗಿಸಿ ರಾಷ್ಟ್ರೀಕೃತ ಬ್ಯಾಂಕಿನಿಂದ ಖಾಸಗಿ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಲ್ಲದೆ, ಈ ಪ್ರಕರಣ ವಿವಾದದ ಸ್ವರೂಪ ತಾಳುತ್ತಿದ್ದಂತೆ ಮತ್ತೆ ಖಾಸಗಿ ಬ್ಯಾಂಕಿನಲ್ಲಿ ಇಡಲಾಗಿದ್ದ ಹಣವನ್ನು ವಾಪಪ್‌ ಪಡೆದು ಹಿಂದೆ ಇದ್ದ ರಾಷ್ಟ್ರೀಕೃತ ಬ್ಯಾಂಕಿಗೆ ವರ್ಗಾಯಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಜಿಲ್ಲಾ ಆಸ್ಪತ್ರೆಗೆ ಸೇರಿದ ಸುಮಾರು 12 ಕೋಟಿ ರೂ. ಆಸ್ಪತ್ರೆ ಬಳಕೆದಾರರ ನಿಧಿ ಈ ಮೊದಲು ಕೇಂದ್ರ ಸ್ವಾಮ್ಯದ ಕಾರ್ಪೋರೇಷನ್‌ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು. 2016 ರಲ್ಲಿ ಅದನ್ನು ಹೆಚ್ಚಿನ ಬಡ್ಡಿ ಆಸೆಗಾಗಿ ಖಾಸಗಿ ಬ್ಯಾಂಕ್‌ ಆಗಿರುವ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಠೇವಣಿ ಪೂರ್ಣವಾಗಿ ಆಮಿಷಕ್ಕೆ ಒಳಗಾಗಿ ವರ್ಗಾವಣೆ ಮಾಡಲಾಯಿತು ಎಂಬ
ಮಾತುಗಳು ಆಸ್ಪತ್ರೆ ವಲಯದಲ್ಲಿ ಕೇಳಿಬಂದವು. 

ಈ ಸಂಗತಿಯ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರನ್ನು “ಉದಯವಾಣಿ ಪ್ರಶ್ನೆ ಮಾಡಿದ ವೇಳೆ ಖಾಸಗಿ ಬ್ಯಾಂಕ್‌ ಗೆ ಹಣ ವರ್ಗಾವಣೆ ಮಾಡಿರುವುದರಲ್ಲಿ ತಪ್ಪೇನಿದೆ? ಎಂದು ಮರು ಪ್ರಶ್ನೆ ಮಾಡಿದರು. ಅಲ್ಲದೆ, 2016 ರಲ್ಲಿ ಹಣವನ್ನು ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ವೈದ್ಯಕೀಯ ಕಾಲೇಜಿನ ಅಧಿಕಾರಿ ವರ್ಗ ಆಮಿಷಕ್ಕೆ ಒಳಗಾಗಿರುವ ಬಗ್ಗೆ ದಾಖಲೆ ಇದ್ದರೆ ಕೊಡಿ. ನಾನು ಕ್ರಮ ಜರುಗಿಸುತ್ತೇನೆ ಎಂದು ಹೇಳಿ
ನುಣುಚಿಕೊಂಡರು. 

ಹಿಂದಿದ್ದ ಬ್ಯಾಂಕ್‌ಗೆ ಹಣ ವರ್ಗಾವಣೆ: ಈ ಚರ್ಚೆ ಆರಂಭವಾದ ಕೆಲ ದಿನಗಳಲ್ಲೇ ಮತ್ತೆ 12 ಕೋಟಿ ರೂ. ಹಣವನ್ನು ಎಚ್‌ಡಿಎಫ್ಸಿ ಬ್ಯಾಂಕ್‌ ನಿಂದ ಡ್ರಾ ಮಾಡಿ ಆ ಹಣವನ್ನು ಆಸ್ಪತ್ರೆಯ ಆವರಣದಲ್ಲೇ ಇರುವ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಇಡಲು ನಿರ್ಧರಿಸಿದರು. ಆದರೆ, ಅಲ್ಲಿ ಠೇವಣಿ ಹಣಕ್ಕೆ ಕಡಿಮೆ ಬಡ್ಡಿ ಎಂಬ ಕಾರಣಕ್ಕೆ ಮತ್ತೆ ಹಣವನ್ನು ಹಿಂದೆ ಇದ್ದ ಕಾರ್ಪೊರೇಷನ್‌ ಬ್ಯಾಂಕ್‌ಗೆ ವರ್ಗಾಯಿಸಿ ಠೇವಣಿ ಇಟ್ಟಿದ್ದಾರೆ. ಇದು ಕೂಡ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರ ಆದೇಶದ ಮೇರೆಗೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಹಿಂದೆ ಕೂಡ 1 ಕೋಟಿ 50 ಲಕ್ಷ ರೂ. ಹಣವನ್ನು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಸಂದರ್ಭದಲ್ಲಿ ಎಜಿ ಲೆಕ್ಕಾಧಿಕಾರಿಗಳು ತಕರಾರುಷರಾ ಬರೆದು ಹೋಗಿದ್ದರೂ ಪುನಃ 12 ಕೋಟಿ ರೂ. ದೊಡ್ಡ ಮೊತ್ತವನ್ನು ಖಾಸಗಿ ಬ್ಯಾಂಕ್‌ನಲ್ಲಿ ಬಡ್ಡಿ ಆಸೆಗಾಗಿ ಇಟ್ಟಿದ್ದು ಸರ್ಕಾರ ನಿಯಮಗಳನ್ನು ಗಾಳಿ ತೂರಿದಂತಾಗಿತ್ತು. ಈಗ ಕಾರ್ಪೊರೇಷನ್‌ ಬ್ಯಾಂಕಿನಲ್ಲಿ ಸಾರ್ವಜನಿಕರ ಹಣ ಸುರಕ್ಷಿತವಾಗಿದೆ.

ಬ್ಯಾಂಕ್‌ ಬದಲಾಯಿಸಲು ಕಾರಣವೇನು? ಜಿಲ್ಲಾ ಆಸ್ಪತ್ರೆಯ ಬಳಕೆದಾರರ ಹಣವನ್ನು ತಮ್ಮಿಷ್ಟಕ್ಕೆ ಬಂದ ಹಾಗೆ ಒಂದು ಬ್ಯಾಂಕ್‌ನಿಂದ, ಮತ್ತೂಂದು ಬ್ಯಾಂಕ್‌ಗೆ ಠೇವಣಿ ಇಡಲು ಸರ್ಕಾರ ಅಥವಾ ಇಲಾಖೆ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯಲಾಗಿತ್ತೆ. ಇಂತಹ ನಿರ್ಧಾರ ಕೈಗೊಂಡ ನಂತರ ಈಗ ಪುನಃ ಬ್ಯಾಂಕ್‌ ಬದಲಾಯಿಸಿರುವುದಕ್ಕೆ ಕಾರಣವೇನು? ಇದು ಯಾವ ಅಧಿಕಾರಿಗಳಿಂದ ಆಗಿರುವ ತಪ್ಪು ನಿರ್ಧಾರ? ಈ ಬಗ್ಗೆ ಸಮಗ್ರ ತನಿಖೆ ಮಾಡುವ ಅಗತ್ಯ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸಾಕ್ಷಾಧಾರ ಲಭಿಸಿದರೆ ಕ್ರಮ: ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಪ್ರತಿಯೊಂದು ಅವಾಂತರ, ಗೊಂದಲಗಳು ನನ್ನ ಗಮನದಲ್ಲಿದೆ. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಲಭಿಸಿದಲ್ಲಿ ಕ್ರಮ ಜರುಗಿಸುವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರು ಹೇಳುವ ಮಾತು.

ನಿವೃತ್ತ ನೌಕರರದ್ದೇ ದರ್ಬಾರ್‌: ಮಂಡ್ಯ ವೈದ್ಯಕೀಯ ಕಾಲೇಜಿನ ಬಹುತೇಕ ಆಡಳಿತ ಸೂತ್ರ ನಿವೃತ್ತ ನೌಕರರ ಕೈಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ರಾಜ್ಯ ಸರ್ಕಾರವೇ 2016 ಫೆ.29ಕ್ಕೆ ಸ್ಪಷ್ಟವಾಗಿ ಪತ್ರ ಬರೆದು ಯಾವುದೇ ಕಾರಣಕ್ಕೂ ನಿವೃತ್ತ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳ ಸೇವೆಯನ್ನು ಮುಂದುವರೆಸಬೇಡಿ ಎಂದು ಹೇಳಿದ್ದರೂ ಕೂಡ ಕಾಲೇಜಿನ ಆಡಳಿತ ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ 6 ಮಂದಿ ಸಿಬ್ಬಂದಿಗೆ ಆಯಕಟ್ಟಿನ ಜಾಗ ನೀಡಿದೆ.

ಅಧೀಕ್ಷಕರಾಗಿ ಶಿವಣ್ಣಗೌಡ, ಎಂ.ಆರ್‌.ರಾಜು, ಗಣೇಶ್‌, ವೇಣುಗೋಪಾಲ್‌, ಪುಟ್ಟಸ್ವಾಮಿ, ಶೇಷಾದ್ರಿ ಅವರುಗಳು ವಿವಿಧ ಗುಮಾಸ್ತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಯಂ ನೌಕರರನ್ನು ಸಂಪೂರ್ಣವಾಗಿ ಕಡೆಗೆಣಿಸಿ ನಿವೃತ್ತರಿಗೆ ಮಣೆ ಹಾಕುವ ಅಗತ್ಯವೇನಿದೆ? ಎಂಬ ಪ್ರಶ್ನೆ ಅಲ್ಲದೇ ಕಳೆದ 4 ವರ್ಷಗಳು ಬಹುತೇಕ ನಿವೃತ್ತ ನೌಕರರ ದರ್ಬಾರಿಂದಲೇ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ ಎಂಬ ಮಾತುಗಳು ಆಸ್ಪತ್ರೆ ವಲಯದಲ್ಲಿ ಕೇಳಿಬಂದಿವೆ.

ಭದ್ರತಾ ಸಿಬ್ಬಂದಿಯಿಂದಲೂ ವಸೂಲಿ: ವೈದ್ಯಕೀಯ ಕಾಲೇಜಿನ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಅವರನ್ನು ನಡೆಸಿಕೊಳ್ಳುವ ರೀತಿ ನೋಡಿದರೆ ಅದೊಂದು ಯಾವ ಮಾμಯಾಕ್ಕೂ ಕಡಮೆ ಇಲ್ಲ. ಔಟ್‌ ಸೋರ್ಸ್‌ನಲ್ಲಿ ನೇಮಕಾತಿ ಮಾಡಲು ಗುತ್ತಿಗೆ ನೀಡಿದ ಕಾಲೇಜು ನಿರ್ದೇಶಕರು ಹಾಗೂ ಆಡಳಿತ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಮೈಸೂರಿನ ಕ್ರಾಂತಿ ಎಜೆನ್ಸಿ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ. 

ಸುಮಾರು 80 ಮಂದಿ ಭದ್ರತಾ ಸಿಬ್ಬಂದಿ ಬೇಕು. ಆದರೆ, ನೇಮಕ ಮಾಡುವುದು ಕೇವಲ 40 ಮಂದಿ ಮಾತ್ರ. ಕಾಲೇಜಿಗೆ ಲೆಕ್ಕ ಮತ್ತು ಹಾಜರಾತಿ ಕೊಟ್ಟು 80 ಮಂದಿಯ ಸಂಬಳ,ಸಾರಿಗೆ,ಪಿಎಫ್ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ ಎಂದು ಹೆಸರೇಳಲಿಚ್ಚಿಸದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. 

ಇಲ್ಲದೇ ಪ್ರತಿಯೊಬ್ಬ ಸಿಬ್ಬಂದಿ ಕೇವಲ 9 ರಿಂದ 10 ಸಾವಿರ ರೂ. ಸಂಬಳ ಕೊಡುತ್ತಾರೆ. ನೇಮಕಾತಿ ಸಂದರ್ಭದಲ್ಲಿ ಪ್ರತಿಯೊಬ್ಬರು 20 ಸಾವಿರ ರೂ. ಗಳನ್ನು ಏಜೆಂಟ್‌ ಒಬ್ಬರಿಗೆ ಲಂಚ ಕೊಟ್ಟರೆ ಮಾತ್ರ ಕೆಲಸ ಇಲ್ಲದೇ ಹೋದರೆ ಕೆಲಸವನ್ನೇ ಕೊಡುವುದಿಲ್ಲ ಎನ್ನುತ್ತಾರೆ ಸಿಬ್ಬಂದಿಗಳಲ್ಲಿ ಕೆಲವರು. ಪ್ರತಿ ಮೂರು ಅಥವಾ ನಾಲ್ಕು ತಿಂಗಳಿವೊಮ್ಮೆ ನೌಕರರನ್ನು ಉದ್ದೇಶ ಪೂರಕವಾಗಿ ಕೆಲಸದಿಂದ ತೆಗೆದು ಹಾಕುತ್ತಾರೆ. ಹೊಸ ನೌಕರ ಬಂದರೆ ಮತ್ತೆ 20 ಸಾವಿರ ರೂ. ಲಂಚ ಕೊಡಬೇಕು ಎನ್ನುವುದು ಕೆಲಸದಿಂದ ತೆಗೆದುಹಾಕಿರುವ ಸೆಕ್ಯೂರಿಟಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.