ಮಳೆಗೆ ಗ್ರಾಮೀಣ ರಸ್ತೆಗಳು ಕೆಸರು ಗದ್ದೆ


Team Udayavani, Jul 18, 2022, 2:17 PM IST

ಮಳೆಗೆ ಗ್ರಾಮೀಣ ರಸ್ತೆಗಳು ಕೆಸರು ಗದ್ದೆ

ಕೆ.ಆರ್‌.ಪೇಟೆ: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಜಿಟಿ ಜಿಟಿ ಮಳೆಪ್ರಾರಂಭವಾಗಿದ್ದು ಗ್ರಾಮೀಣ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಹೀಗಾಗಿ ರೈತರು ತಮ್ಮಹೊಲ, ಗದ್ದೆ, ತೋಟಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಭತ್ತದ ಕೊಯ್ಲು ನಡೆಯುತ್ತಿದ್ದು, ಹುಲ್ಲು, ಭತ್ತ ಸಾಗಾಣಿಕೆಗೆ ತೊಂದರೆ ಅನುಭವಿಸುತ್ತಿದ್ದಾರೆ.

ಕೆಸರು ತುಂಬಿದ ರಸ್ತೆಗಳು: ತಾಲೂಕಿನ ಯಾವುದೇ ಭಾಗಕ್ಕೆ ಹೋದರೂ ಹದಗೆಟ್ಟ ರಸ್ತೆಗಳು ಕಣ್ಣಿಗೆಬೀಳುತ್ತವೆ. ಜಡಿ ಮಳೆಯಿಂದ ರಸ್ತೆ ಗುಂಡಿಗಳಲ್ಲಿನೀರು ತುಂಬಿದ್ದು ಬೈಕ್‌ ಮತ್ತಿತರ ವಾಹನಗಳಲ್ಲಿಸಂಚರಿಸುವ ರೈತರ ಮಕ್ಕಳು ರಸ್ತೆ ಗುಂಡಿಗೆಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣಜನತೆ ಕೆಸರು ತುಂಬಿರುವ ರಸ್ತೆಗಳಲ್ಲಿ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ.

ಹದಗೆಟ್ಟ ರಸ್ತೆಗಳಿಂದ ಗ್ರಾಮೀಣ ಯುವಕರು ಆಕ್ರೋಶಭರಿತರಾಗಿದ್ದು ತಮ್ಮೂರಿನ ರಸ್ತೆಗಳ ಸ್ಥಿತಿಗತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕ್ಷೇತ್ರದ ಶಾಸಕರಾಗಿರುವ ಸಚಿವ.  ನಾರಾಯಣಗೌಡ ಸೇರಿದಂತೆ ಕಂಡೂ ಕಾಣದಂತಿರುವ ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ.

ತಾಲೂಕಿನ ಕುಂದನಹಳ್ಳಿ, ದೊಡ್ಡಸೋಮನಹಳ್ಳಿ, ಬೂಕನಕೆರೆ ಮುಂತಾದ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತಾಲೂಕಿನ ದುಸ್ಥಿತಿಯನ್ನು ಹೊರ ಜಗತ್ತಿಗೆ ಸಾರುತ್ತಿವೆ.

ದುರ್ವಾಸನೆ: ಕ್ಷಿಪ್ರವಾಗಿ ಬೆಳೆಯುತ್ತಿರುವ ಕೆ.ಆರ್‌.ಪೇಟೆ ಪಟ್ಟಣವೂ ಸಮಸ್ಯೆಗಳಿಂದಹೊರತಾಗಿಲ್ಲ. ಪಟ್ಟಣಕ್ಕೆ ಸುಸಜ್ಜಿತ ಯುಜಿಡಿ ವ್ಯವಸ್ಥೆ ಇಲ್ಲ. ಕಳೆದ 10 ವರ್ಷಗಳ ಹಿಂದೆ ಯುಜಿಡಿ ವ್ಯವಸ್ಥೆ ಕಲ್ಪಿಸಲು ಕಾಮಗಾರಿ ಮಾಡಲಾಗಿದ್ದು ಅಪೂರ್ಣಗೊಂಡಿದೆ. ಅಲ್ಲದೇ,ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಯುಜಿಡಿಯಿಂದ ಹೊರಬರುವ ಗಲೀಜಿನ ವಾಸನೆಗೆ ಪಟ್ಟಣದ ನಿವಾಸಿಗಳು ಹಿಡಿಶಾಪ ಹಾಕತೊಡಗಿದ್ದಾರೆ.

ಇಲ್ಲಿನ ಬಡಾವಣೆಗಳಲ್ಲಿ ವ್ಯವಸ್ಥಿತ ಒಳಚರಂಡಿಯೇ ಇಲ್ಲವಾಗಿದೆ. ಕೆಲವುಕಡೆ ರಸ್ತೆಯ ಒಂದು ಭಾಗದಲ್ಲಿ ಒಳಚರಂಡಿ ಇದ್ದರೆ ಮತ್ತೂಂದು ಭಾಗದಲ್ಲಿ ಚರಂಡಿಯಿಲ್ಲ. ಇನ್ನು ಕೆಲವು ಕಡೆ ರಸ್ತೆಯ ಎರಡೂ ಕಡೆ ಒಳಚರಂಡಿಯೇ ಇಲ್ಲದೆ ಗಲೀಜು ನೀರು ಮತ್ತುಮಳೆ ನೀರು ನಡುರಸ್ತೆಯಲ್ಲಿ ಹರಿದು ರಸ್ತೆ ಕೊರಕಲು ಉಂಟಾಗಿದೆ. ಇತ್ತೀಚೆಗೆ ಪಟ್ಟಣದಒಂದೆರಡು ರಸ್ತೆಗಳ ಗುಂಡಿ ಮುಚ್ಚಿ ಉತ್ಸಾಹ ತೋರಿದ ಪುರಸಭೆ ಮತ್ತೆ ತಣ್ಣಗಾಗಿದೆ.

ತಿರುಗಿ ನೋಡಿ: ಜು.21 ರಂದು ಸಚಿವ ನಾರಾಯಣಗೌಡರ ಹುಟ್ಟುಹಬ್ಬ. ಕೆಸಿಎನ್‌ಹುಟ್ಟು ಹಬ್ಬದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಪಟ್ಟಣಕ್ಕೆ ಆಗಮಿಸಿ ಹಲವುಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪಟ್ಟಣಕ್ಕೆ ಬರುತ್ತಿರುವಮುಖ್ಯಮಂತ್ರಿಗಳೇ ಒಮ್ಮೆ ನಮ್ಮ ತಾಲೂಕಿನ ಗ್ರಾಮೀಣ ರಸ್ತೆಗಳ ಕಡೆ ತಿರುಗಿ ನೋಡಿ ಎಂದು ರೈತ ಮುಖಂಡ ಬೂಕನಕೆರೆ ನಾಗರಾಜು ಒತ್ತಾಯಿಸಿದ್ದಾರೆ.

ತಾಲೂಕಲ್ಲಿ ಅಭಿವೃದ್ಧಿ ಮರೀಚಿಕೆ :

ತಾಲೂಕು ಕೇಂದ್ರಕ್ಕೆ ಇರಬೇಕಾದ ಹಲವಾರು ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಫ‌ಲರಾಗಿದ್ದಾರೆ. ಅಭಿವೃದ್ಧಿಗಾಗಿಯೇ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಮಾತೃ ಪಕ್ಷ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿ ಪ್ರಭಾವಿ ಸಚಿವರಾಗಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಸಚಿವ ನಾರಾಯಣಗೌಡ ಕೆ.ಆರ್‌.ಪೇಟೆಯನ್ನು ಶಿಕಾರಿಪುರ ಮಾಡುವುದಾಗಿ ಎಲ್ಲೆಡೆ ಹೇಳುತ್ತಿದ್ದರು. ತಾಲೂಕಿನ ಸ್ಥಿತಿ ನೋಡಿ ಸಾರ್ವಜನಿಕರುಬಿ.ಎಸ್‌.ಯಡಿಯೂರಪ್ಪ ಅವರ ಶಿಕಾರಿಪುರವೂ ನಮ್ಮಕೆ.ಆರ್‌.ಪೇಟೆಯಷ್ಟೇ ಹದಗೆಟ್ಟಿದೆಯಾ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

– ಅರುಣ್‌ಕುಮಾರ್‌

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.