ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ
Team Udayavani, Apr 27, 2023, 3:36 PM IST
ಭಾರತೀನಗರ: ಮದ್ದೂರು ತಾಲೂಕು ಕೊಕ್ಕರೆಬೆಳ್ಳೂರು ಗ್ರಾಮ ಬಳಿಯ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಡಳಿತಾಧಿಕಾರಿಗಳು ವಿಧಾನಸಭಾ ಚುನಾವಣೆಯಲ್ಲಿ ತಮ್ಮದೆಯಾದ ಕಾರ್ಯ ಒತ್ತಡದಲ್ಲಿ ಇರುವುದನ್ನು ಮನಗಂಡು ಸ್ಥಳೀಯರು, ಶಿಂಷಾನದಿ ಪಾತ್ರದಲ್ಲಿ ಮರಳು ತೆಗೆಯುವುದಲ್ಲಿ ನಿರತರಾಗಿದ್ದಾರೆ. ಮರಳು ತೆಗೆಯದಂತೆ 144 ಸೆಕ್ಷನ್ ಜಾರಿ ಮಾಡಿದ್ದರೂ, ಶಿಂಷಾನದಿ ಪ್ರದೇಶದಲ್ಲಿ ಹೆಗ್ಗಿಲ್ಲದೆ ಮರಳು ದಂಧೆ ಸಾಗುತ್ತಿದೆ. ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಸಮೀಪದ ಇಗ್ಗಲೂರು, ಕೊಕ್ಕರೆಬೆಳ್ಳೂರು ಬಳಿಯ ಶಿಂಷಾ ನದಿಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಹಲವು ತೊಂದರೆಗಳು ಕಾದಿವೆ.
ಮೌನವಹಿಸಿದ ಜಿಲ್ಲಾಡಳಿತ: ಶಿಂಷಾ ನದಿಯ ಇಗ್ಗಲೂರು ಬ್ಯಾರೇಜ್ ಚನ್ನಪಟ್ಟಣ್ಣ ತಾಲೂಕಿಗೆ ಹಾಗೂ ಕೊಕ್ಕರೆಬೆಳ್ಳೂರು- ತೊರೆಚಾಕನಹಳ್ಳಿ ಮದ್ದೂರು ತಾಲೂಕು ವ್ಯಾಪ್ತಿಗೆ ಸೇರುತ್ತದೆ. ಅಕ್ರಮ ಮರಳು ತಡೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ರಾಮನಗರ ಜಿಲ್ಲಾಡಳಿತ ಕಂಡು ಕಣದಂತೆ ಮೌನವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸೇತುವೆ ಶಿಥಲ: ಕೊಕ್ಕರೆಬೆಳ್ಳೂರು ಚಾಕನಹಳ್ಳಿಗೆ ಸಂಪರ್ಕ ಸೇತುವೆ ಕಂಬಗಳ ಸುತ್ತ ನಿತ್ಯ ಅಪಾರ ಪ್ರಮಾಣದಲ್ಲಿ ಮರಳು ತೆಗೆಯುತ್ತಿರುವುದರಿಂದ ಸೇತುವೆ ಶಿಥಲಗೊಳ್ಳುತ್ತಿವೆ. ಹೀಗೆ ಮುಂದುವರಿದರೆ ಹಲವು ಗ್ರಾಮಕ್ಕೆ ಇರುವ ಸೇತುವೆ ಕುಸಿದು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಇಗ್ಗೂರು ಬಳಿ ಮರಳು ಸಂಗ್ರಹ: ಸಮೀಪದ ಹಾಗಲಹಳ್ಳಿ ಹೊಂದಿಕೊಂಡಂತಿರುವ ಇಗ್ಗಲೂರು ಬ್ಯಾರೇಜ್‌ನಲ್ಲಿ ಅಕ್ರಮ ಮರಳುಗಾರಿಕೆ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ನಡೆಯುತ್ತಿದೆ. ಮರಳನ್ನು ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದ ಬಳಿ ಟ್ರ್ಯಾಕ್ಟರ್, ಲಾರಿ ಮೂಲಕ ವಿವಿಧೆಡೆ ಸಾಗಾಟ ಮಾಡಲಾಗುತ್ತಿದೆ. ಇದರ ತಡೆಗೆ ಮಂಡ್ಯ, ರಾಮನಗರ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೊಕ್ಕರೆಬೆಳ್ಳೂರು- ತೊರೆಚಾಕನಹಳ್ಳಿಯಲ್ಲಿ ಮರಳು ಸಾಗಾಟ ನಡೆಯುತ್ತಿದ್ದರೂ, ಪೊಲೀಸ್ ಅಧಿಕಾರಿಗಳು ಕ್ರಮವಹಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಮರಳು ದಂಧೆ ಕಡಿವಾಣಕ್ಕೆ ಮದ್ದೂರು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಳು ದಂಧೆ ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದರು. ಆದರೂ, ಅದನ್ನು ಲೆಕ್ಕಿಸದೆ ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿದೆ.
ರಸ್ತೆ ಅವ್ಯವಸ್ಥೆ: ಭಾರತೀನಗರ, ಕ್ಯಾತಘಟ್ಟ, ಅಜ್ಜಹಳ್ಳಿ, ಮಠದದೊಡ್ಡಿ, ನಗರಕೆರೆ, ಬನ್ನಳ್ಳಿ ಹೀಗೆ ಅನೇಕ ಗ್ರಾಮೀಣದಲ್ಲಿ ಹಾಕಿರುವ ಡಾಂಬರೀಕರಣ ರಸ್ತೆಗಳು ಮರಳು ದಂಧೆಯಿಂದ ಕಿತ್ತುಹೋಗುತ್ತಿವೆ. ಏತನೀರಾವರಿಗೆ ಧಕ್ಕೆ: ಶಿಂಷಾನದಿಯ ವ್ಯಾಪ್ತಿಯಲ್ಲಿ 22 ಏತನೀರಾವರಿಗಳಿದ್ದು, ಪಂಪ್‌ಸೆಟ್‌ಗಳ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡಿಕೊಳ್ಳುವ ಮೂಲಕ ಉತ್ತಮ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಮರಳು ದಂಧೆಯಿಂದ ಏತನೀರಾವರಿಗೂ ದುರಂತ ಬಂದಿದೆ.
ಇಗ್ಗಲೂರು ಡ್ಯಾಂಗೆ ಅಪಾಯ: ದೇವೇಗೌಡರವರು ಇಗ್ಗಲೂರು ಬಳಿ ಡ್ಯಾಮ್ ನಿರ್ಮಿಸಿ ನೀರಾವರಿ ಯೋಜನೆ ಕಲ್ಪಿಸಿದ್ದರು. ಈಗ ಮರಳು ದಂಧೆಯಿಂದ ಡ್ಯಾಂಗೆ ಅಪಾಯ ಬಂದಿದೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನಮುರಿದು ಹೋರಾಟ ನಡೆಸದಿದ್ದರೆ ಅಪಾಯ ಬರುವುದು ಸತ್ಯ. ಪಕ್ಷಿಗಳ ಸಂಖ್ಯೆ ಇಳಿಮುಖ: ಆಹಾರಕ್ಕಾಗಿ ಶಿಂಷಾನದಿ ಪಾತ್ರದಲ್ಲಿರುವ ಕೊಕ್ಕರೆಬೆಳ್ಳೂರಿಗೆ ವಿದೇಶದ ವಿವಿಧ ರೀತಿಯ ಕೊಕ್ಕರೆಗಳು ವಂಶಾಭಿವೃದ್ದಿಗಾಗಿ ವಲಸೆ ಬಂದು ಪಕ್ಷಿಧಾಮದಂತಾಗಿ, ಈ ವಿಶಿಷ್ಟ ಕೊಕ್ಕರೆಗಳು ಅಕ್ರಮ ಮರಳು ಸಾಗಾಣಿಕೆಯಿಂದ ಇಳಿಮುಖ ಗೊಳ್ಳುವಂತಾಗಿದೆ. ಅಲ್ಲದೆ, ನದಿ ದಂಡೆಯಲ್ಲಿ ಮರಳು ತುಂಬುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಪಕ್ಷಿಗಳು ಆಹಾರಕ್ಕೆ ನದಿಗಿಳಿಯಲು ಹೆದರುತ್ತಿವೆ.
ದಂಧೆಯ ಲಾಭದಲ್ಲಿ ಒಂದು ಭಾಗವನ್ನು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೇರಿದಂತೆ ಬಹುತೇಕ ಪ್ರಭಾವಿ ವ್ಯಕ್ತಿಗಳಿಗೆ ಹಂಚಲಾಗುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು. ● ಮರೀಗೌಡ, ಬನ್ನಹಳ್ಳಿ
ಮದ್ದೂರು ತಾಲೂಕಿನಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನು ಈಗಾಗಲೇ ಕಡಿವಾಣ ಹಾಕಿ, ಒಂದು ಹಂತಕ್ಕೆ ತರಲಾಗದೆ. ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿರುವಾಗ ನಮ್ಮ ಗಮನಕ್ಕೆ ಸಾರ್ವಜನಿಕರು ತಂದರೆ ಕೂಡಲೇ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳುತ್ತೇವೆ. ● ಟಿ.ಎನ್.ನರಸಿಂಹಮೂರ್ತಿ, ತಹಶೀಲ್ದಾರ್ ಮದ್ದೂರು
ಮರಳು ದಂಧೆ ಸ್ಥಳಕ್ಕೆ ದಾಳಿ ಮಾಡಿ, ದಂಧೆಗೆ ಉಪಯೋಗಿ ಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸುತ್ತಿದ್ದೇವೆ. ● ಆನಂದ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಂ.ದೊಡ್ಡಿ
– ಅಣ್ಣೂರು ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.