ಗುಪ್ತಗಾಮಿನಿಯಂತಿರುವ ಮಹಿಳಾ ಓಟುಗಳು!


Team Udayavani, Apr 21, 2019, 8:52 PM IST

guptagamini

ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ದಾಖಲೆಯ ಮತದಾನ ನಡೆದಿದೆ. ಇದರಲ್ಲಿ ಯುವ ಮತದಾರರು ಹಾಗೂ ಮಹಿಳಾ ಓಟುಗಳು ಯಾರ ಪರವಾಗಿ ಅಧಿಕ
ಸಂಖ್ಯೆಯಲ್ಲಿ ಹರಿದಿರುವುದೋ ಅವರಿಗೆ ವಿಜಯಮಾಲೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.71.47ರಷ್ಟು ಮತದಾನ ನಡೆದಿತ್ತು. ಅಂದು 16,69,262 ಮತದಾ ರರಲ್ಲಿ 6,04,491 ಪುರುಷರು, 5,87,306 ಮಹಿಳೆಯರು, 8 ಇತರೆ ಮತದಾರರು ಸೇರಿ ಒಟ್ಟು 11,91,805 ಮತ ಚಲಾವಣೆಗೊಂಡಿದ್ದವು.
2018ರ ಚುನಾವಣೆಯಲ್ಲಿ 6,93,262 ಪುರುಷರು ಹಾಗೂ 6,79,620 ಮಹಿಳೆಯರು ಹಾಗೂ ಇತರೆ 26 ಮತದಾರರು ಸೇರಿ 13,72,908 ಮತಗಳು ಚಲಾವಣೆ ಯಾಗಿವೆ. 2014ರಲ್ಲಿ ಪುರುಷರ
ಮತದಾರರಿಗೆ ಹೋಲಿಸಿದರೆ ಮಹಿಳಾ ಓಟುಗಳ ಅಂತರ 17,185 ಮತಗಳಾಗಿದ್ದರೆ, 2018ರಲ್ಲಿ ಅದರ ಅಂತರ 13,642 ಇದೆ.

ಸ್ವಯಂಪ್ರೇರಿತರಾಗಿ ಬಂದು ಮತ ಚಲಾವಣೆ: ಪ್ರತಿ
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರು ಆಟೋ, ಅಫೆ ಆಟೋ,
ಟೆಂಪೋಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸಲು ನೆರವಾಗುತ್ತಿದ್ದರು.

ಇದರ ನಡುವೆಯೂ ಫ‌ಲಿತಾಂಶ ಶೇ.70ರ ಗಡಿ ಮುಟ್ಟುವುದೇ ಹೆಚ್ಚು ಎನ್ನುವಂತಿತ್ತು. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಅಂತಹ ದೃಶ್ಯಗಳು ಯಾವುದೇ ಕ್ಷೇತ್ರದ ಮತಗಟ್ಟೆಗಳ ಬಳಿ ಕಂಡುಬರಲೇ
ಇಲ್ಲ. ಆದರೂ, ಮತದಾನದ ಪ್ರಮಾಣ ಶೇ.80ರ ಗಡಿ ತಲುಪಿದೆ. ಇದನ್ನು ಗಮನಿಸಿದರೆ ಮತದಾರರು ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದು ಕಂಡು ಬರುತ್ತಿದೆ.

ಈ ಲೋಕಸಭಾ ಚುನಾವಣೆಯಲ್ಲಿ 18 ವರ್ಷದಿಂದ 25 ವರ್ಷದೊಳಗಿನ ಯುವ ಮತದಾರರು ಚುನಾವಣೆಯ ಬಗ್ಗೆ ಆಸಕ್ತಿ ವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತ
ಚಲಾಯಿಸಿದ್ದಾರೆ. ಮಂಡ್ಯ ನಗರ ಪ್ರದೇಶದ ಮತದಾನದ ಪ್ರಮಾಣ ಶೇ.60ರಿಂದ 65ರ ಗಡಿ ಮುಟ್ಟುವುದೇ ಹೆಚ್ಚು ಎನ್ನುವಂತಿತ್ತು. ಅದೀಗ
ಶೇ.74ರ ಗಡಿ ತಲುಪಿದೆ. ನಗರ ಪ್ರದೇಶದ ನಾಗರಿಕರು
ಮತದಾನಕ್ಕೆ ಪ್ರಥಮ ಬಾರಿಗೆ ಹೆಚ್ಚಿನ ಒಲವು ತೋರಿದ್ದಾರೆ. ಇದೆಲ್ಲವೂ ಫ‌ಲಿತಾಂಶದ ಕೌತುಕವನ್ನು ಹೆಚ್ಚಿಸುವಂತೆ ಮಾಡಿದೆ.

ಲೆಕ್ಕಕ್ಕೆ ಸಿಗುತ್ತಿಲ್ಲ: ಈ ಗುಪ್ತಗಾಮಿನಿಯಂತೆ ಹರಿದಾಡಿರುವ ಮತಗಳು ಅಷ್ಟು ಸುಲಭವಾಗಿ ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಸುಮಲತಾ ಹಾಗೂ ಕೆ.ನಿಖೀಲ್‌ ಗೆಲುವನ್ನು ಸುಲಭವಾಗಿ ಗ್ರಹಿಸಲು ಆಗುತ್ತಿಲ್ಲ. ಗೆಲುವು ಯಾರಿಗೂ ಸುಲಭವಲ್ಲ ಎಂಬ ಮಾತುಗಳು ಅಲ್ಲಲ್ಲಿ
ಕೇಳಿಬರುತ್ತಿವೆ. ಇದು ಚುನಾವಣಾ ತಜ್ಞರ ನಿರೀಕ್ಷೆ, ಆಲೋಚನೆಗಳನ್ನು ಮೀರಿ ನಿಂತಿರುವ ಮಹತ್ವದ ಚುನಾವಣೆ ಎನಿಸಿಕೊಂಡಿದೆ.

ಜೆಡಿಎಸ್‌ ಹಾಗು ಸುಮಲತಾ ಬೆಂಬಲಿಗರು ಜಾತಿ ಲೆಕ್ಕಾಚಾರದ ಮೇಲೆ ಮತಗಳನ್ನು ಮುಂದಿಟ್ಟುಕೊಂಡು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಗುಪ್ತಗಾಮಿನಿಯಂತಿರುವ ಮಹಿಳಾ ಹಾಗೂ ಯುವ ಮತದಾರರ ಬಗ್ಗೆ ಅವರು ಮಾತನಾಡುತ್ತಿಲ್ಲ. ಆ ಮತಗಳ ಹರಿದಾಟದ ಬಗ್ಗೆ ಅವರಿಗೂ ಅನುಮಾನಗಳು ಕಾಡುತ್ತಿವೆ. ಜೆಡಿಎಸ್‌ ಪರವಾಗಿಯೇ ಆ ಮತಗಳು ಹರಿದುಬಂದಿವೆ ಎಂದು ನಿಶ್ಚಿತವಾಗಿ ಅವರು ಹೇಳುತ್ತಿಲ್ಲ.

ಮೋದಿ ಪ್ರಭಾವ: ಪ್ರಧಾನಿ ನರೇಂದ್ರ ಮೋದಿ ಪ್ರಭಾವವೂ ಯುವ ಮತದಾರರ ಮೇಲೆ ಪರಿಣಾಮ ಬೀರಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ಏರ್‌ ಸ್ಟ್ರೈಕ್‌ನಿಂದ ಆಕರ್ಷಿತರಾಗಿರುವ
ಯುವ ಮತದಾರರು ಚುನಾವಣೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿ ಕೊಂಡು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇವರ ಮತಗಳೂ ಸರಿಯಾದ ರೀತಿಯಲ್ಲಿ ಪರಿಗಣನೆಗೆ ಸಿಗುತ್ತಿಲ್ಲ.

ಈ ಹಿಂದಿನ ಚುನಾವಣಾ ಲೆಕ್ಕಾಚಾರಗಳನ್ನು ತಾಳೆಯೇ ಆಗದ ರೀತಿಯಲ್ಲಿ ಚುನಾವಣಾ ಫ‌ಲಿತಾಂಶ ತೀವ್ರ ಕುತೂಹಲವನ್ನಂತೂ
ಕೆರಳಿಸಿರುವುದು ಸತ್ಯವಾಗಿದೆ.

ಜಾತಿ ಲೆಕ್ಕಾಚಾರ: ಇಬ್ಬರೂ ಪ್ರಬಲ ಒಕ್ಕಲಿಗ ಅಭ್ಯರ್ಥಿಗಳು ಕಣದಲ್ಲಿದ್ದ ಕಾರಣದಿಂದ ಒಕ್ಕಲಿಗ ಓಟುಗಳು ಹರಿದು ಹಂಚಿಹೋಗಿರುವುದು ಸತ್ಯಸಂಗತಿ. ಇನ್ನು ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂಬ ಕಾರಣಕ್ಕೆ ಕೆಲವು ಕ್ಷೇತ್ರಗಳಲ್ಲಿ
ಅಲ್ಪಸಂಖ್ಯಾತರು ಅವರ ಕೈ ಹಿಡಿದಿಲ್ಲ ಎಂಬ ಮಾತುಗಳು ಕ್ಷೇತ್ರದೊಳಗೆ ಕೇಳಿಬರುತ್ತಿವೆ. ಇದೇ ವೇಳೆಗೆ ಬಿಜೆಪಿ, ಕಾಂಗ್ರೆಸ್‌ ಹಾಗೂ ರೈತಸಂಘದ ಮತಗಳಲ್ಲಿ ಬಹುಪಾಲು ಸುಮಲತಾ ಕೈ ಹಿಡಿದಿವೆ.

ಕುರುಬರು ಸುಮಲತಾ ಪರವಾಗಿದ್ದಾರೆಂದು ಹೇಳಲಾಗುತ್ತಿದ್ದರೆ, ದಲಿತ ಓಟುಗಳು ಜೆಡಿಎಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿವೆ
ಎನ್ನಲಾಗುತ್ತಿದೆ. ಇನ್ನು ಉಪ್ಪಾರ, ಮಡಿವಾಳ, ಕುಂಬಾರ, ಸವಿತಾ, ಗಾಣಿಗ, ಬೆಸ್ತ ಸೇರಿದಂತೆ ಫ‌ಲಿತಾಂಶದ ನಿರ್ಣಾಯಕ ಶಕ್ತಿಗಳಾಗಿರುವ ಈ ಮತದಾರರು ಯಾರ ಕೈ ಹಿಡಿದಿದ್ದಾರೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ.

ಮೈತ್ರಿ ಧರ್ಮವಿಲ್ಲ: ಜೆಡಿಎಸ್‌ನವರು ಚುನಾವಣಾ ಸಂಪನ್ಮೂಲ ಹಂಚುವ ಸಮಯದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಡೆಗಣಿಸಿ ಪ್ರತ್ಯೇಕವಾಗಿ ಹಣ ಹಂಚಿಕೆ ಮಾಡಿದ್ದಾರೆ. ಇಲ್ಲಿ ಮೈತ್ರಿಧರ್ಮ ಪಾಲಿಸಿಲ್ಲ.

ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಅಪಸ್ವರಗಳು ಅಲ್ಲಲ್ಲಿ
ಕೇಳಿಬರುತ್ತಿವೆ. ಇದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಚುನಾವಣೆ ನಡೆಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಒಟ್ಟಾರೆ ಮಹಿಳಾ ಹಾಗೂ ಯುವ ಮತದಾರರು ಯಾರ ಪರವಾಗಿ ಆಕರ್ಷಿತರಾಗಿದ್ದಾರೋ ಅವರಿಗೆ ಗೆಲುವು ಸುಲಭವಾಗಿ ದಕ್ಕಲಿದೆ. ಅದೇ ರೀತಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಲ್ಲಿದ್ದ ಮಂಡ್ಯ ಮೂಲದ ಮತದಾರರು ಲೋಕಸಭಾ ಚುನಾವಣೆಗೆ ಬಂದು ಮತ ಚಲಾಯಿಸಿರುವುದು ಒಂದು ವಿಶೇಷ ಹಾಗೂ ಮತದಾನ ಹೆಚ್ಚಳಕ್ಕೂ
ಕಾರಣವಾಗಿದೆ ಎನ್ನಲಾಗಿದೆ.

  • ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.