ದುಪ್ಪಟ್ಟು ಬೆಲೆಗೆ ಅಗತ್ಯ ವಸ್ತುಗಳ ಮಾರಾಟ
ದಾಸ್ತಾನು ಕೊರತೆ ನೆಪ, ವರ್ತಕರ ಹಗಲು ದರೋಡೆ; ಪದಾರ್ಥಗಳ ಬೆಲೆಗೆ ಮುಗಿ ಬಿದ್ದ ಜನರು
Team Udayavani, Apr 20, 2020, 6:00 PM IST
ಸಾಂದರ್ಭಿಕ ಚಿತ್ರ
ಮಂಡ್ಯ: ದೇಶಾದ್ಯಂತ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ತುರ್ತು ಪರಿಸ್ಥಿತಿಯನ್ನೇ ಲಾಭಮಾಡಿಕೊಂಡು ಕೆಲ ವರ್ತಕರು ಆಹಾರ ಪದಾರ್ಥಗಳಿಗೆ ದುಪ್ಪಟ್ಟು ಬೆಲೆ ವಿಧಿಸಿ ಮಾರಾಟ ಮಾಡುತ್ತಾ ಹಗಲು ದರೋಡೆಯಲ್ಲಿ ತೊಡಗಿದ್ದಾರೆ.
ಅಗತ್ಯ ವಸ್ತುಗಳ ದರಪಟ್ಟಿಯನ್ನು ಅಂಗಡಿ ಎದುರು ನಮೂದಿಸುವಂತೆ ಜಿಲ್ಲಾಡಳಿತ ವರ್ತಕರಿಗೆ ಸೂಚಿಸಿ ಸುಮ್ಮನಾಗಿದೆ. ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ದಾಸ್ತಾನು ಕೊರತೆಯ ನೆಪವೊಡ್ಡಿ ಎಂಆರ್‌ಪಿ ದರಕ್ಕಿಂತಲೂ 20ರಿಂದ 30 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ದುಪ್ಪಟ್ಟು ದರ: 1200 ರೂ. ಬೆಲೆಯ 25 ಕೆ.ಜಿ.ಅಕ್ಕಿಗೆ 1500 ರೂ., 36 ರೂ. ಇದ್ದ ಕೆ.ಜಿ.ಸಕ್ಕರೆಗೆ 44 ರೂ., ಕೆ.ಜಿ.ಗೆ 150 ರೂ. ಇದ್ದ ಚೋಟು ಮೆಣಸಿನಕಾಯಿ ಬೆಲೆ 260 ರೂ., ಸೋಪುಗಳ ಬೆಲೆಯಲ್ಲೂ 5ರಿಂದ 10 ರೂ. ಬೆಲೆ ವಿಧಿಸಲಾಗಿದೆ. ಬೇಳೆ ಕಾಳುಗಳ ಬೆಲೆಯೂ 15 ರೂ.ನಿಂದ, 20 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ದರಪಟ್ಟಿ ಹಾಕಿಲ್ಲ: ಯಾವುದೇ ದಿನಸಿ ಅಂಗಡಿಗಳ ಎದುರು ದರಪಟ್ಟಿ ಹಾಕಿಲ್ಲ. ಅಗತ್ಯ ವಸ್ತುಗಳಿಗೆಲ್ಲಾ ಮನಸೋ ಇಚ್ಛೆ ದರಕ್ಕೆ ಮಾರುತ್ತಿದ್ದಾರೆ. ಗ್ರಾಹಕರು ಈ ಬಗ್ಗೆ ಪ್ರಶ್ನೆ
ಮಾಡಿದರೆ, ಮುಂದೆ ಪದಾರ್ಥ ಸಿಗುವುದು ಕಷ್ಟ. ಬೇಕಿದ್ದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದೂ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.
ಮಾಹಿತಿ ಕೊರತೆ: ನಗರ, ಪಟ್ಟಣದಲ್ಲಿ ಬಹುತೇಕ ಕಡೆ ಎಂಆರ್‌ಪಿ ಬೆಲೆಗೆ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚಿನ ದರ ಕೇಳಿದರೆ ಜಿಲ್ಲಾಡಳಿತಕ್ಕೆ ದೂರು ಕೊಡಬಹುದೆಂಬ ಭಯ ವ್ಯಾಪಾರಸ್ಥರಲ್ಲಿದೆ. ಆದರೂ ಕೆಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವ್ಯಾಪಾರಸ್ಥರಿಗೆ ಕಡಿವಾಣ ಹಾಕುವವರಿಲ್ಲ. ಜಿಲ್ಲಾಡಳಿತದ
ಆದೇಶ ಹಳ್ಳಿಗೆ ಮುಟ್ಟುತ್ತಿಲ್ಲ. ಇದರ ಬಗ್ಗೆ ಗ್ರಾಮೀಣರಿಗೂ ಮಾಹಿತಿ ಸಿಗುತ್ತಿಲ್ಲ.
ಲಾಕ್‌ಡೌನ್ ದುರ್ಬಳಕೆ
ವ್ಯಾಪಾರಸ್ಥರು ನಗರದಿಂದ ತರಕಾರಿ ತಂದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತರಕಾರಿ ಮಾರುಕಟ್ಟೆ ದರಕ್ಕಿಂತಲೂ ಅಧಿಕವಾಗಿದೆ. 5 ರೂ. ಕೊತ್ತಂಬರಿ ಸೊಪ್ಪು ಕಟ್ಟಿಗೆ 20 ರೂ., 10 ರೂ. ಇರುವ ಕೆಜಿ ಟೊಮೆಟೋ ಬೆಲೆ 30 ರೂ., ಎಲ್ಲಾ ಸೊಪ್ಪುಗಳ ಬೆಲೆ 20 ರೂ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವವರೇ ಇಲ್ಲ ದಂತಾಗಿದೆ. ಲಾಕ್‌ಡೌನ್ ಸಮಯವನ್ನು ವ್ಯಾಪಾರಸ್ಥರು ದುರ್ಬಳಕೆ ಮಾಡಿಕೊಂಡು ಭರ್ಜರಿ ಹಣ ಗಳಿಸುತ್ತಿದ್ದಾರೆ. ಜಿಲ್ಲಾಡಳಿತ ತ್ವರಿತ ಕ್ರಮ ವಹಿಸಬೇಕಿದೆ.
ಆಹಾರ ಇಲಾಖೆಯವರಿಗೆ ಎಲ್ಲಾ ಮಾದರಿಯ ಆಹಾರ ಪದಾರ್ಥಗಳ ಬೆಲೆಯನ್ನು ವಿವರವಾಗಿ ಪ್ರಕಟಿಸಿ ವ್ಯಾಟ್ಸಾಪ್ ಗ್ರೂಪ್‌ಗಳಿಗೆ ರವಾನಿಸಲು ವ್ಯವಸ್ಥೆ ಮಾಡಲಾಗುವುದು. ತೋಟಗಾರಿಕೆ ಇಲಾಖೆ ಉತ್ಪನ್ನಗಳಿಗೂ ಇದೇ ವ್ಯವಸ್ಥೆ ಜಾರಿಗೊಳಿಸುವಂತೆ ಕ್ರಮ ವಹಿಸುತ್ತೇನೆ.
● ಯಾಲಕ್ಕೀಗೌಡ, ಜಿಲ್ಲಾ ನೋಡಲ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.