ಪಡಿತರಕ್ಕೆ ನಿಖರ ಬೆಲೆ ನಿಗದಿಪಡಿಸಿ
ಶಾಸಕ ಎಂ.ಅಶ್ವಿನ್ ಕುಮಾರ್ ತಹಶೀಲ್ದಾರ್ಗೆ ಸೂಚನೆ
Team Udayavani, Apr 18, 2020, 2:24 PM IST
ತಿ.ನರಸೀಪುರ: ಕೋವಿಡ್ -19 ಹಿನ್ನೆಲೆಯಲ್ಲಿ ಪಟ್ಟಣದ ದಿನಸಿ ವರ್ತಕರು ಪಡಿತರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು
ಕೇಳಿಬಂದಿದೆ. ಹೋಲ್ಸೇಲ್ ವ್ಯಾಪಾರಿಗಳಿಂದ ಮಾಹಿತಿ ಪಡೆದು ನಿಖರ ಬೆಲೆ ನಿಗದಿಪಡಿಸಬೇಕು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು.
ತಾಲೂಕು ನ್ಯಾಯ ಬೆಲೆ ಅಂಗಡಿಗಳ ಮಾಲೀಕರಿಂದ ನೀಡಲಾಗುವ ಆಹಾರದ ಕಿಟ್ ತಹಶೀಲ್ದಾರ್ ಮೂಲಕ ಬಡವರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ
ನೀಡಿ ಮಾತನಾಡಿದರು.
ಜನ ಸಂಕಷ್ಟದಲ್ಲಿರುವ ವೇಳೆ ವರ್ತಕರು ಮಾನವೀಯತೆ ಪ್ರದರ್ಶನ ಮಾಡಬೇಕು. ಪಡಿತರಕ್ಕೆ ಹೆಚ್ಚು ಬೆಲೆ ನಿಗದಿ ಮಾಡಿ ಜನರನ್ನು ಕಷ್ಟಕ್ಕೆ ದೂಡುವ ಕೆಲಸ ಮಾಡಬಾರದು. ತಾಲೂಕು ಆಡಳಿತದ ಅಧಿಕಾರಿಗಳು ಹೋಲ್ಸೇಲ್ ವ್ಯಾಪಾರದಾರರನ್ನು ಭೇಟಿ ಮಾಡಿ, ಪರಿಶೀಲಿಸಿ ಬಡವರಿಗೆ ಕೈ ಗೆಟುಕುವ ಬೆಲೆಯಲ್ಲಿ ಆಹಾರ ಪದಾರ್ಥ ಕಲ್ಪಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಮಾಂಸ ಮಾರಾಟ ಅವಶ್ಯವಿಲ್ಲ ಎಂದರು.
ತಾಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಎಸ್. ಉದಯಶಂಕರ್, ಖಜಾಂಚಿ ರಾಜೇಶ್, ಜಿಪಂ ಮಾಜಿ
ಸದಸ್ಯ ಎಂ.ಆರ್.ಸೋಮಣ್ಣ, ಮೂಗೂರು ಸಿದ್ದರಾಜು, ಎಂ.ಶಿವಪ್ರಸಾದ್, ಬಿ.ಆರ್. ರಾಘವೇಂದ್ರ ಸ್ವಾಮಿ, ಕೆಂಪರಾಜು, ಶಿರಸ್ತೇದಾರ್ ಜೆ.ಕೆ.ಪ್ರಭುರಾಜ್, ಆಹಾರ ಇಲಾಖೆಯ ಸಣ್ಣಸ್ವಾಮಿ, ಆರ್ಐ ಮಹದೇವ ನಾಯಕ್, ಶಂಭುದೇವನಪುರ ರಮೇಶ್, ವಕೀಲ ಮಹದೇವ ಸ್ವಾಮಿ, ಕೆ.ಎನ್. ಪ್ರಭುಸ್ವಾಮಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.