ಅಹಿಂದ ಸಮಾವೇಶದ ಬದಲು ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುವೆ: ಸಿದ್ದರಾಮಯ್ಯ


Team Udayavani, Feb 13, 2021, 6:13 PM IST

ಅಹಿಂದ ಸಮಾವೇಶದ ಬದಲು ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುವೆ: ಸಿದ್ದರಾಮಯ್ಯ

ಮಂಡ್ಯ: ನಾನೆಂದೂ ಎಲ್ಲಿಯೂ ಸಹ ಅಹಿಂದ ಸಮಾವೇಶ ಮಾಡುತ್ತೇನೆ ಎಂದು ಹೇಳಿಲ್ಲ. ನನಗೆ ಅಹಿಂದ ಸಮಾವೇಶದ ಅವಶ್ಯಕತೆ ಇಲ್ಲ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರಾದ ಈಶ್ವರಪ್ಪ ಹಾಗೂ ಎಸ್.ಟಿ.ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಹಿಂದ ವರ್ಗಕ್ಕೆ ನ್ಯಾಯ ಸಿಗಬೇಕೆಂಬುದು ನನ್ನ ಉದ್ದೇಶ. ಕಾಂಗ್ರಸ್ ಪಕ್ಷ ಸಹ ಅದಕ್ಕೆ ಬದ್ಧವಾಗಿ ಅಹಿಂದ ಪರ ಇದೆ. ಕೆಲವರಿಗೆ ನನ್ನ ಬಗ್ಗೆ ಭಯವಿದೆ, ಆ ಭಯಕ್ಕಾಗಿ ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡುತ್ತಾರೆ ಎಂದು ಕಲ್ಪಿಸಿಕೊಂಡು ಹೇಳುತ್ತಾರೆ. ನಾನು ಅಹಿಂದ ಸಮಾವೇಶದ ಬದಲು ರಾಜ್ಯಾದ್ಯಂತ ಕಾಂಗ್ರೆಸ್ ಸಮಾವೇಶ ಮಾಡುವೆ ಎಂದರು.

ಇದನ್ನೂ ಓದಿ :ಸಚಿವ ಶ್ರೀರಾಮಲು ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಿಪ್ಪೇರುದ್ರ ಸ್ವಾಮೀಜಿ

ಖರ್ಗೆಯವರ ವೈಯಕ್ತಿಕ ಅಭಿಪ್ರಾಯ:

ಅಹಿಂದ ನನಗೆ ಗೊತ್ತಿಲ್ಲ ಎಂಬ ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಎಂದೂ ಅಹಿಂದ ಸಮಾವೇಶ ಮಾಡಿಲ್ಲ. ಕಾಂಗ್ರೆಸ್ ಅಹಿಂದ ಪರ ಇರುವುದರಿಂದ ಖರ್ಗೆ ಆ ರೀತಿ ಹೇಳಿರಬಹುದು ಎಂದರು.

ಶಾಸಕರ ತೀರ್ಮಾನ:

ಮುಂದಿನ ಸಿಎಂ ನಾನೇ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಂತರ ಯಾರು ಸಿಎಂ ಆಗಬೇಕೆಂಬುದನ್ನು ಶಾಸಕರು ತೀರ್ಮಾನ ಮಾಡುತ್ತಾರೆ. ಬಳಿಕ ಅದಕ್ಕೆ ಹೈಕಮಾಂಡ್ ಮುದ್ರೆ ಒತ್ತಲಿದೆ. ಇದು ಕಾಂಗ್ರೆಸ್ ಪಕ್ಷದ ನಿಯಮ ಎಂದು ತಿಳಿಸಿದರು.

ವಿಶ್ವನಾಥ್ ಗಂಭೀರ ರಾಜಕಾರಣಿಯಲ್ಲ:

ಸಿದ್ದು ಕರ್ನಾಟಕದ ಡೋನಾಲ್ಡ್ ಟ್ರಂಪ್ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಚ್.ವಿಶ್ವನಾಥ್ ಒಬ್ಬ ಸೀರಿಯಸ್ ಪಾಲಿಟೀಷಿಯನ್ ಅಲ್ಲ. ಆತನ ಬಗ್ಗೆ ನಾನು ಪದೇ ಪದೇ ಉತ್ತರ ಕೊಡಲ್ಲ. ನನ್ನ ಬಗ್ಗೆ ಅವರಿಗೆ ಭಯ ಇರಬೇಕು. ಹಾಗಾಗಿ ನನ್ನ ಕನವರಿಕೆ ಮಾಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆ ಇಲ್ಲ:

ರಾಜ್ಯ ಬಜೆಟ್ ವಿಚಾರದಲ್ಲಿ ಯಾವುದೇ ನಿರೀಕ್ಷೆ ಇಲ್ಲ. ಖಜಾನೆಯಲ್ಲಿ ಹಣವೇ ಇಲ್ಲ. 35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರ ಬಡ್ಡಿ ಮನ್ನಾ ಮಾಡುವುದೇ ಆಗುತ್ತದೆ. ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ. ತೈಲ ಬೆಲೆ ಹೆಚ್ಚಲು ಅಬಕಾರಿ ಸುಂಕ ಹೆಚ್ಚು ಮಾಡಿರುವುದು ಕಾರಣ ಎಂದು ಹೇಳಿದರು.

ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ:

ದೇಶದಲ್ಲಿ ಹಿಂದಿ ಹೇರಿಕೆ ಮಾಡಿದ್ರೆ ರಕ್ತಪಾತವಾಗುತ್ತದೆ. ಕನ್ನಡವನ್ನು ಪಕ್ಕಕ್ಕೆ ತಳ್ಳಿ ಹಿಂದಿ ಭಾಷೆ ಬರಲು ಸಾಧ್ಯವೇ ಇಲ್ಲ. ಹಿಂದಿ ಭಾಷೆ ಉತ್ತರ ಭಾರತದ ಒಂದೈದು ರಾಜ್ಯಗಳಲ್ಲಿ ಮಾತ್ರ ಇದೆ. ಇನ್ನುಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿವೆ. ಅದು ಹೇಗೆ ಹಿಂದಿ ರಾಷ್ಟçಭಾಷೆಯಾಗುತ್ತೆ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದರು.

ಇದನ್ನೂ ಓದಿ : ಶಿಕ್ಷಣದಲ್ಲಿ ಭಾರತೀಯತೆ ಬರಬೇಕು, ವ್ಯಾಪಾರೀಕರಣ, ಪಾಶ್ಚಾತ್ಯೀಕರಣ ತಡೆಯಬೇಕು : ಕಾಗೇರಿ

ಟಾಪ್ ನ್ಯೂಸ್

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Sureje-CM-DCM

ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

Election-Com-State-Chief

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ

KPCC-Ministers-Report

Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು

Police-Stomach

Chamarajnagar: ತೂಕ ಇಳಿಸಿಕೊಳ್ಳಲು ಪೊಲೀಸರಿಗೆ ಬೆಟ್ಟ ಹತ್ತುವ ವ್ಯಾಯಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

KPCC-Ministers-Report

Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು

State-Contracters-Associ

Contractors Association: ಬಾಕಿ ಪಾವತಿಗೆ ಸರಕಾರಕ್ಕೆ ಗುತ್ತಿಗೆದಾರರಿಂದ ಪತ್ರ

MC-Sudhakar

Congress Government: ಮುಖ್ಯಮಂತ್ರಿ ಬದಲು ಪ್ರಶ್ನೆ ಉದ್ಭವಿಸಿಲ್ಲ: ಡಾ.ಎಂ.ಸಿ.ಸುಧಾಕರ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Sureje-CM-DCM

ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

Election-Com-State-Chief

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.