ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ…!
Team Udayavani, Feb 18, 2021, 9:15 PM IST
ಮಂಡ್ಯ : ತಾವು ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಕೃಷ್ಣ ಎಂಬ ಯುವಕನ ಅಂತ್ಯಕ್ರಿಯೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಗವಹಿಸಿದ್ದಾರೆ.
ಇಂದು ( ಫೆ.18) ರಾಮಕೃಷ್ಣ ಆತ್ಮಹತ್ಯೆ ಶರಣಾಗುವ ಮುನ್ನ ನೋಟ್ ಬರೆದಿಟ್ಟು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು ಎಂದು ತನ್ನ ಕೊನೆಯ ಆಸೆ ಹೇಳಿಕೊಂಡಿದ್ದ. ಅದರಂತೆ ಸಿದ್ದರಾಮಯ್ಯನವರು ಇಂದು ಮೃತನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಆತನ ಕೊನೆ ಆಸೆ ಈಡೇರಿಸಿದ್ದಾರೆ.
ಇನ್ನು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ‘ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಸಮಸ್ಯೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದರೆ ತಮ್ಮ ಸಮಸ್ಯೆಯನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸಿದಂತೆ. ಸಾವಿನ ನಂತರವೂ ಸಮಸ್ಯೆ ಹಾಗೆಯೇ ಉಳಿಯುತ್ತೆ, ಆದರೆ ಅಮೂಲ್ಯ ಬದುಕೊಂದು ನಷ್ಟವಾಗುತ್ತೆ. ಕಷ್ಟಗಳು ಬಂದಾಗ ಎದುರಿಸುವ ಗಟ್ಟಿತನ ಪ್ರತಿಯೊಬ್ಬರಲ್ಲೂ ಬರಬೇಕು. ನೆನಪಿರಲಿ, ಸಮಸ್ಯೆಗಳು ತಾತ್ಕಾಲಿಕ, ಆದರೆ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು ಶಾಶ್ವತ’ ಎಂದಿದ್ದಾರೆ.
ಸಮಸ್ಯೆಯನ್ನು ಮೆಟ್ಟಿನಿಂತು ಬದುಕು ಕಟ್ಟಿಕೊಂಡಾಗ ಇವನು ನನ್ನ ಅಭಿಮಾನಿ ಎಂದು ಹೇಳಲು ನಮಗೂ ಹೆಮ್ಮೆಯಾಗುತ್ತೆ. ಅಭಿಮಾನಿಯೊಬ್ಬನ ಸಾವು ಎಷ್ಟು ನೋವು ಕೊಡುತ್ತದೋ, ಆತ್ಮಹತ್ಯೆ ಅದರ ಎರಡು ಪಟ್ಟು ಕಾಡುತ್ತದೆ ಎಂದು ನೋವು ಹೊರಹಾಕಿದ್ದಾರೆ.
ಯಾರ ಅಭಿಮಾನಿಯೇ ಆಗಲಿ, ಯಾವ ಧರ್ಮ – ಸಿದ್ಧಾಂತವೇ ಇರಲಿ, ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಬೇಡ. ಪ್ರತೀ ಜೀವವೂ ಅಮೂಲ್ಯ. ಕತ್ತಲು ಕಳೆದ ನಂತರ ಬೆಳಕು ಬಂದಂತೆ, ಕಷ್ಟಗಳು ದೂರಾಗಲೇಬೇಕು. ಭರವಸೆಯೇ ಬದುಕು ಎನ್ನುವುದನ್ನು ಮರೆಯದಿರೋಣ ಎಂದು ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.