ಸಕ್ಕರೆ ನಾಡಿನೊಂದಿಗೆ ಸಿದ್ಧಗಂಗಾಶ್ರೀ ಬಾಂಧವ್ಯ
Team Udayavani, Jan 22, 2019, 7:13 AM IST
ಮಂಡ್ಯ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿ ಸಕ್ಕರೆ ನಾಡಿನೊಂದಿಗೆ ವಿಶೇಷ ನಂಟು ಹೊಂದಿದ್ದರಲ್ಲದೆ, ಜಿಲ್ಲೆಯ ಅನ್ನದಾತರ ಬಗ್ಗೆಯೂ ಅವರಿಗೆ ಅಪಾರ ಪ್ರೀತಿ ಹಾಗೂ ಒಲವಿತ್ತು.
ಜಿಲ್ಲೆಯ ಸಾವಿರಾರು ಮಂದಿ ಮಕ್ಕಳು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅಧ್ಯಯನ ಮಾಡಿ ಬದುಕು ಕಂಡುಕೊಂಡಿದ್ದಾರೆ. ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೊ›.ತಿಮ್ಮೇಗೌಡ ಸೇರಿದಂತೆ ಅನೇಕ ಗಣ್ಯರು ಶ್ರೀಮಠದ ವಿದ್ಯಾರ್ಥಿಗಳಾಗಿದ್ದಾರೆ.
ಜಿಲ್ಲೆಯ ಬಗ್ಗೆ ಅಕ್ಕರೆ ಹೊಂದಿದ್ದ ಪರಮಪೂಜ್ಯರು ಮಠದ ವತಿಯಿಂದ ನಡೆಯುವ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಕೆ.ಆರ್.ಪೇಟೆ, ಮಳವಳ್ಳಿ, ಪಾಂಡವಪುರ ಹಾಗೂ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರದರ್ಶಿಸಿ ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯ, ದಾಸೋಹದ ಅರಿವು ಮೂಡಿಸಿ ಬಸವಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
ಕಳೆದ ಅರವತ್ತು ವರ್ಷಗಳಿಂದಲೂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸಂಚರಿಸಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಶ್ರೀಗಳ ಸೇವೆ ಅವಿಸ್ಮರಣೀಯ. ಈ ಜಿಲ್ಲೆಯ ಶಿಕ್ಷಣದ ಅವಕಾಶ ವಂಚಿತರಿಗೆ ತಾವೇ ಶ್ರೀಮಠದಲ್ಲಿ ಆಸರೆ ನೀಡಿ ಸನ್ಮಾರ್ಗದ ಬದುಕು ರೂಪಿಸಿದ್ದಾರೆ.
1952ರಿಂದ ನಂಟು: 3.2.1952ರ ಭಾನುವಾರ ಮಂಡ್ಯದಲ್ಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ಬೃಹತ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಪರಮಪೂಜ್ಯರು ಅಪಾರ ಭಕ್ತಸಮೂಹವನ್ನು ಅಂದೇ ಸಂಪಾದಿಸಿದ್ದರು.
13.2.1954ರ ಶನಿವಾರ ಮಂಡ್ಯ ಜಿಲ್ಲಾ ಹೇಮಗಿರಿ ಜಾತ್ರೆಯಲ್ಲಿ ನಡೆದ ಹಿಂದೂ ಸಂಸ್ಕೃತಿಯ ಉತ್ಸವದಲ್ಲಿ ಸರ್ವರೂ ಸಮಾನರು ದೇವನೊಬ್ಬ ನಾಮ ಹಲವು ಎಂಬ ಸಮಾನತೆಯ ತತ್ವವನ್ನು ಬೋಧಿಸುವ ಮೂಲಕ ಎಲ್ಲರನ್ನೂ ಪ್ರೀತಿಸಿ-ಬೆಳೆಸಿ-ಬೆಳೆಯುವ ಭಾವವನ್ನು ಮೂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.