ಮೇಲುಕೋಟೆಯಲ್ಲಿ ಶ್ರೀಕೃಷ್ಣರಾಜಮುಡಿ ಉತ್ಸವ
Team Udayavani, Jul 13, 2020, 11:13 AM IST
ಮೇಲುಕೋಟೆ: ರಾಜ್ಯದಲ್ಲಿ ಕೋವಿಡ್- 19 ಪರಿಣಾಮ ಲಾಕ್‌ಡೌನ್‌ನಿಂದ ಭಾನುವಾರ ಸ್ತಬ್ಧವಾಗಿದ್ದರೆ, ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣ ರಾಜ ಮುಡಿ ಉತ್ಸವ ಶಾಸ್ತ್ರೋಕ್ತವಾಗಿ ನೆರವೇರಿತು.
ದೇವಾಲಯದ ಒಳಪ್ರಾಕಾರದಲ್ಲಿ ನಡೆದ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮಾತ್ರ ಭಾಗವಹಿಸಿದ್ದರು. ಶೀಘ್ರ ಕೋವಿಡ್ ಮುಕ್ತವಾಗಿ ನಾಡು ಸುಭೀಕ್ಷವಾಗಲಿ ಎಂದು ಪ್ರಾರ್ಥಿಸಿ, ಸ್ವಾಮೀಯ ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಾನುವಾರ ಸಂಜೆ 6.30 ಗಂಟೆಗೆ ಆರಂಭವಾದ ಉತ್ಸವ ಮಂಗಳವಾದ್ಯ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ಒಳಪ್ರಕಾರದಲ್ಲಿ ನೆರವೇರಿತು. ಶನಿವಾರವೇ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪರಿಶೀಲಿಸಿದ್ದ ವಜ್ರಖಚಿತ ಶ್ರೀಕೃಷ್ಣರಾಜ ಮುಡಿ ಕಿರೀಟವನ್ನು ಕೈ ಬೊಕ್ಕಸದಿಂದ ತೆಗೆದು ಶ್ರೀದೇವಿ ಭೂ ದೇವಿಯರೊಂದಿಗೆ ಗರುಡಾ ರೂಢನಾಗಿ ಅಲಂಕಾರಗೊಂಡ ಚೆಲುವ ನಾರಾಯಣ ಸ್ವಾಮಿಗೆ ತೊಡಿಸಲಾಯಿತು. ಗರುಡದೇವನ ಉತ್ಸವವನ್ನು ನಡೆಸಿದ ನಂತರ ಉಪವಿಭಾಗಧಿಕಾರಿ ಶಿವಾನಂದ ಮೂರ್ತಿ ಸಮಕ್ಷಮ ಸ್ವಾಮಿಗೆ ಮಂಗಳಾರತಿ ನೆರವೇರಿಸಿ, ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲು ಅನುಮತಿಯಿಲ್ಲದ ಕಾರಣ ವೈರಮುಡಿ ಕಿರೀಟಧಾರಣೆಯಾಗುವ ಆಚಾರ್ಯ ರಾಮಾನುಜರ ಸನ್ನಿಧಿಯ ಆವರಣದಲ್ಲೇ ಸ್ವಾಮಿಗೆ ಅಲಂಕಾರ ಮಾಡಿ, ಉತ್ಸವ ಮಾಡಲಾಯಿತು.
ಹತ್ತುದಿನಗಳ ಕಾಲ ಉತ್ಸವ: ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಭಕ್ತಿಪೂರ್ವಕವಾಗಿ ವಜ್ರಖಚಿತ ಕೃಷ್ಣರಾಜಮುಡಿ ಹಾಗೂ ಮೈಸೂರು ಲಾಂಛನ ಗಂಡುಬೇರುಂಡ ಪದಕವನ್ನು ಸಮರ್ಪಿಸಿ, ಆಷಾಡದಲ್ಲಿ ತಮ್ಮದೇ ಹೆಸರಲ್ಲಿ ಬ್ರಹ್ಮೋತ್ಸವ ಆರಂಭಿಸಿದ್ದರು. ಪ್ರತಿವರ್ಷ ಆಷಾಡ ಬಹುಳ ದ್ವಿತೀಯದಂದು ಮಹಾಭಿಷೇಕದೊಂದಿಗೆ ಆರಂಭವಾಗುವ ಉತ್ಸವ ಹತ್ತುದಿನಗಳ ಕಾಲ ನಡೆಯಲಿದೆ. ಒಡೆಯರ್ ಆಶಯ ಅಂದಿ ನಿಂದ ಅನೂಚಾನವಾಗಿ ನಡೆದ ಬರುತ್ತಿರುವ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಕೋವಿಡ್ ನಡುವೆಯೂ ನಡೆದದ್ದು ವಿಶೇಷವಾಗಿದೆ. ಈ ವರ್ಷ ವೈರಮುಡಿ ಜಾತ್ರಾಮಹೋತ್ಸವ ಮುಂದೂಡಿಕೆಯಾಗಿದ್ದರೂ, ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸರಳವಾಗಿಯಾದರೂ ನಡೆದದ್ದು, ಭಕ್ತರಾದ ಮಹಾರಾಜರ ಮನಸ್ಸಿನ ಪರಿಶುದ್ಧ ಮತ್ತು ನಿಷ್ಕಲ್ಮಶ ಭಕ್ತಿಗೆ ಸಾಕ್ಷಿಯಾಗುತ್ತದೆ.
ಚೆಲುವನಾರಾಯಣ ಸ್ವಾಮಿ ಖಂಡಿತ ನಾಡಿಗೆ ಅಂಟಿದ ಕೋವಿಡ್‌ದಿಂದ ಭಕ್ತರನ್ನು ಪಾರುಮಾಡುತ್ತಾನೆ ಎಂದು ದೇವಾಲಯದ ಸ್ಥಾನೀಕರು ಭಕ್ತಿಭಾವ ಪ್ರದರ್ಶಿಸಿದರು. ಬ್ರಹ್ಮೋತ್ಸವ 17ರವರೆಗೆ ನಡೆಯಲಿದ್ದು, ಕೃಷ್ಣರಾಜಮುಡಿ ಕಿರೀಟವನ್ನು ಒಂದುವಾರ ಕಾಲ ಪ್ರತಿ ಸಂಜೆ ಸ್ವಾಮಿಯನ್ನು ಅಲಂಕರಿಸಲಿದೆ. ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ನಂಜೇಗೌಡ ಮತ್ತು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.