ಐವರ ಬರ್ಬರ ಹತ್ಯೆ: ಅಕ್ರಮ ಸಂಬಂಧವೇ ಘೋರ ಕೃತ್ಯಕ್ಕೆ ಕಾರಣ?
ಐದು ಹೆಣಗಳ ಜತೆ ಇಡೀ ರಾತ್ರಿ ಕಳೆದ ಆರೋಪಿ ಲಕ್ಷ್ಮೀ
Team Udayavani, Feb 9, 2022, 1:40 PM IST
ಆರೋಪಿ ಲಕ್ಷ್ಮೀ
ಶ್ರೀರಂಗಪಟ್ಟಣ: ಕೆಆರ್ ಎಸ್ ಐವರ ಭೀಕರ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ ಬಳಿಕ ಘಟನೆಯ ಕುರಿತು ಇನ್ನಷ್ಟು ಮಾಹಿತಿಗಳು ಹೊರ ಬೀಳುತ್ತಿವೆ.
ಘಟನೆಯ ಕುರಿತು ಮಾತಾನಾಡಿರುವ ಪಕ್ಕದ ಮನೆಯ ಮಹಿಳೆ ಲಕ್ಷ್ಮೀ, ಕೊಲೆಯಾದ ದಿನ ರಾತ್ರಿ 9.30ರ ಸುಮಾರಿಗೆ ನಾನು ಮನೆಗೆ ಹೋಗಿದ್ದೆ. ಆಟವಾಡುತ್ತಿದ್ದ ಮಕ್ಕಳನ್ನು ಗದರಿ ಮಲಗುವಂತೆ ಹೇಳಿ ವಾಪಸ್ ಬಂದೆ. ಕೊಲೆಗಾತಿ ಲಕ್ಷ್ಮಿ ಎಷ್ಟು ಹೊತ್ತಿಗೆ ಮನೆಗೆ ಬಂದಳೋ ಗೊತ್ತಿಲ್ಲ. ಇಡೀ ರಾತ್ರಿ ಮಕ್ಕಳ ಚೀರಾಟ, ಸಣ್ಣ ಸದ್ದೂ ಕೇಳಿಸಿಲ್ಲ. ರಾತ್ರಿ ಬೆಡ್‌ಶೀಟ್ ಹೊದ್ದು ಮಲಗಿದ್ದ ಪುಟಾಣಿಗಳು ಅದೇ ಸ್ಥಿತಿಯಲ್ಲಿ ಹೆಣವಾಗಿದ್ದವು.ಅವಳೊಬ್ಬಳೇ ಕೊಲೆ ಮಾಡಿದ್ದಾಳೋ ಬೇರೆ ಯಾರಿದ್ದರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆರೋಪಿ ಲಕ್ಷ್ಮೀ ಕೊಲೆ ಮಾಡಿ, ಐದು ಹೆಣಗಳ ಜತೆ ಇಡೀ ರಾತ್ರಿ ಕಳೆದಿದ್ದು, ಮುಂಜಾನೆ 4.20ರ ಸುಮಾರಿಗೆ ಕೆ.ಆರ್.ಎಸ್.ನಿಂದ ಆಕ್ವಿವಾದಲ್ಲಿ ನಿರ್ಗಮಿಸಿರುವ ವಿಡಿಯೋ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಅಕ್ರಮ ಸಂಬಂಧವನ್ನು ಒಪ್ಪಿದ ಮೃತಳ ಗಂಡ:
ಘಟನೆಗೆ ಹತ್ಯೆಗೀಡಾದ ಮಹಿಳೆಯ ಗಂಡ ಗಂಗಾರಾಮ್ ಅವರ ಅಕ್ರಮ ಸಂಬಂಧವೇ ಮೂಲ ಕಾರಣ ಎಂದು ಹೇಳಲಾಗುತ್ತಿದ್ದು, ಆರೋಪಿ ಲಕ್ಷ್ಮೀಯೊಂದಿಗಿನ ಸಂಬಂಧವನ್ನು ಗಂಗಾರಾಮ್ ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಗಂಗಾರಾಮ್, ಕೊಲೆ ಮಾಡಿದ ಲಕ್ಷ್ಮೀ ನನ್ನ ಸಂಬಂಧಿ. ಆಕೆ ಬಾಲ್ಯದಲ್ಲೇ ಶಿಕ್ಷಕನ ಜತೆ ಓಡಿ ಹೋಗಿದ್ದಳು. ನನ್ನ ಮದುವೆಯಾದ ಬಳಿಕ ಅವಳಿಗೂ ಮದುವೆ ಆಗಿತ್ತು. ನನ್ನನ್ನು ಲಕ್ಷ್ಮಿ ಇಷ್ಟ ಪಡುತ್ತಿದ್ದಳು. ನಮ್ಮಿಬ್ಬರ ನಡುವೆ ಆಫೇರ್ ಇತ್ತು. ಹಿರಿಯರೆಲ್ಲ ನ್ಯಾಯ ಪಂಚಾಯ್ತಿ ಮಾಡಿ ಸೀರೆ ಹಾಕಿಸಿದ್ದರು. ನಮ್ಮ ಸಂಪ್ರದಾಯದ ಪ್ರಕಾರ ಸೀರೆ ಹಾಕಿದರೆ ಅಣ್ಣ- ತಂಗಿ ಆಗುತ್ತೇವೆ. ಆ ನಂತರ ನಾನು ಸಂಬಂಧ ಬಿಟ್ಟಿದ್ದೆ. ಬಳಿಕವೂ ಅನ್‌ನೌನ್ ನಂಬರ್‌ನಿಂದ ನನಗೆ, ನನ್ನ ಪತ್ನಿಗೆ ಟಾರ್ಚರ್ ಕಾಲ್ ಬರುತ್ತಿತ್ತು. ಅದು ಲಕ್ಷ್ಮಿಯೇ ಅನ್ನೋದು ನನಗೆ ಗೊತ್ತಿರಲಿಲ್ಲ. ನಾನು ನನ್ನ ಹೆಂಡತಿ- ಮಕ್ಕಳೊಂದಿಗೆ ಚನ್ನಾಗಿದ್ದೆ. ಐವರನ್ನೂ ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ. ಪೋನ್ ಬಂದಾಗ ನಾನು ಮನೆಯವರಿಗೆಲ್ಲ ಹೇಳುತ್ತಿದ್ದೆ. ಓಪನ್ ಸ್ಪೀಕರ್ ಹಾಕಿ ಎಲ್ಲರಿಗೂ ಗೊತ್ತಾಗುವಂತೆಯೇ ಮಾತನಾಡುತ್ತಿದ್ದೆ. ಅವಳು ಯಾಕೆ ಕೊಲೆ ಮಾಡಿದಳೋ ಗೊತ್ತಿಲ್ಲ. ಇದರಲ್ಲಿ ನನಗೆ ಯಾವುದೇ ಇನ್‌ವಾಲ್‌ಮೆಂಟ್ ಇಲ್ಲ. ತನಿಖೆ ಆಗಲಿ, ನನ್ನದು ತಪ್ಪಿದ್ದರೆ ನನಗೂ ಶಿಕ್ಷೆ ಆಗಲಿ ಎಂದು ಗಂಗಾರಾಮ್ ಹೇಳಿದ್ದಾನೆ.
ಸದ್ಯ ಪೊಲೀಸರು ಅಳವಾದ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.