ಬಯೋಮೆಟ್ರಿಕ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಸಮಸ್ಯೆ ನಿವಾರಿಸಲು ಸರಳ ಕಾನೂನು ರೂಪಿಸಲು ಪಡಿತರದಾರರ ಮನವಿ
Team Udayavani, Feb 6, 2020, 3:18 PM IST
ಶ್ರೀರಂಗಪಟ್ಟಣ: ವಯಸ್ಸಾದವರು ಪ್ರತಿ ತಿಂಗಳೂ ಪಡಿತರ ಪಡೆಯಲು ತಿಂಡಿ, ಊಟ ಬಿಟ್ಟು ಬಯೋಮೆಟ್ರಿಕ್ ನೀಡಲು ನ್ಯಾಯಬೆಲೆ ಅಂಗಡಿ ಮುಂದೆ ಕಾಯುತ್ತಿದ್ದು, ಸರಳ ಕಾನೂನು ರೂಪಿಸಿ ಸಮಸ್ಯೆ ನಿವಾರಿಸಬೇಕು ಎಂದು ಪಡಿತರದಾರರು ಒತ್ತಾಯಿಸಿದರು.
ಸರ್ಕಾರ ಬೇರೆ ಏನಾದರೂ ಬಯೋಮೆಟ್ರಿಕ್ ನಂತೆ ಹೊಸ ತಂತ್ರಜ್ಞಾನ ಅಳವಡಿಸಿ ಮತ್ತೂಂದು ಸರ್ವರ್‌ಗಾಗಿ ಕಾಯುವುದನ್ನು ತಪ್ಪಿಸಬೇಕು. ಪಡಿತರ ಪಡೆಯಲು ಸರದಿಯಲ್ಲಿ ದಿನಗಟ್ಟಲೆ ಕಾದು ನಿಂತು ಸಮಯ ಪೋಲಾಗುವುದನ್ನು ತಪ್ಪಿಸಬೇಕು. ನ್ಯಾಯಬೆಲೆ ಅಂಗಡಿಯಿಂದ ಪಡಿತರ ಪಡೆಯಲು ಎರಡು, ಮೂರು ದಿನ ಸರದಿಯಲ್ಲಿ ನಿಂತರೂ ಪಡಿತರ ಸಿಕ್ಕೆ ಸಿಗುತ್ತದೆ ಎಂಬ ನಂಬಿಕೆಯಿಲ್ಲ ಎಂದು ಪಡಿತರದಾರರು ತಮ್ಮ ಅಳಲು ತೋಡಿಕೊಂಡರು.
ತಾಲೂಕಾದ್ಯಂತ ಒಟ್ಟು 49,438 ಪಡಿತರ ಚೀಟಿಗಳಿದ್ದು, ಅದರಲ್ಲಿ 46,624 ಬಿಪಿಎಲ್, 2,621 ಅಂತ್ಯೋದಯ ಕಾರ್ಡ್ ಹಾಗೂ 193 ಎಪಿಎಲ್ ಕಾರ್ಡ್‌ದಾರರಿದ್ದು, ಅಂತ್ಯೋದಯ, ಬಿಪಿಎಲ್ ಹಾಗೂ ಕೆಲ ಎಪಿಎಲ್ ಪಡಿತರದಾರರು ಪಡಿತರ ಪಡೆಯಲು ಪ್ರತಿ ತಿಂಗಳು ಬಯೋಮೆಟ್ರಿಕ್ ಕೊಟ್ಟು ಪಡಿತರ ಪಡೆದುಕೊಳ್ಳುತ್ತಿದ್ದರು. ಕಳೆದೆರಡು ತಿಂಗಳಿಂದ ಬಯೋಮೆಟ್ರಿಕ್ ಸರ್ವರ್ ಸಮಸ್ಯೆಯಿಂದ ತುಂಬಾ ತೊಂದರೆಯಾಗಿದೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ವಯಸ್ಸಾದವರು, ಕಾಂಕ್ರೀಟ್ ಕೆಲಸ, ಮನೆಗೆಲಸ ಮಾಡುವವರ ಕೈ ಬೆರಳು ಅಚ್ಚು ಅಳಿಸಿ ಹೋಗಿ ಅವರ ಸಮಸ್ಯೆ ಹೇಳ ತೀರದಾಗಿದೆ. ಇವರು ಪ್ರತಿ ತಿಂಗಳು ಬಯೋಮೆಟ್ರಿಕ್ ನಿಂದ ಪಡಿತರ ಪಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಇವರ ಬೆರಳಿನ ರೇಖೆಗಳು ಅಳಸಿದ್ದು, ತಮ್ಮ ಎರಡು ಕೈಯಲ್ಲಿನ 10 ಬೆರಳಿನ ರೇಖೆಗಳು ಬಾರದೆ ತೊಂದರೆ ಅನುಭಸುವ
ಬದಲು ಮತ್ತೂಂದು ತಂತ್ರಗಾರಿಕೆ ಸರ್ಕಾರದ ಮಟ್ಟದಲ್ಲಿ ಬಳಸಬೇಕಾಗಿದೆ.
ಕಾರ್ಡ್ ರದ್ದಾಗುವ ಆತಂಕ: 2-3 ತಿಂಗಳು ಸತತವಾಗಿ ಪಡಿತರ ತೆಗೆದುಕೊಳ್ಳದಿದ್ದರೆ ಕಾರ್ಡ್ ಗಳು ರದ್ದಾಗಲಿದ್ದು, ಇದಕ್ಕಾಗಿ ಎಷ್ಟೋ ಮಂದಿ ಪಡಿತರ ಕಾರ್ಡ್ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಒಂದೆರಡು ದಿನ ಕೆಲವೊಮ್ಮೆ ವಾರಗಟ್ಟಲೆ ಸರದಿ ಯಲ್ಲಿ ನಿಂತು ಪಡಿತರ ಪಡೆದುಕೊಳ್ಳುವುದುಂಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.