ಶ್ರೀರಂಗಪಟ್ಟಣ: ಹನುಮ ಮಾಲಾಧಾರಿಗಳ ಯಾತ್ರೆ; ಜಾಮಿಯಾ ಮಸೀದಿ ಬಳಿ ಉದ್ವಿಗ್ನ ಪರಿಸ್ಥಿತಿ
ವಿವಾದಿತ ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದ ಪೊಲೀಸರು ...
Team Udayavani, Dec 4, 2022, 5:18 PM IST
ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಭಾನುವಾರ ನಡೆಯುತ್ತಿದ್ದ ವೇಳೆ ಜಾಮಿಯಾ ಮಸೀದಿ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
10.30 ಕ್ಕೆ ನಿಮಿಷಾಂಬ ದೇವಾಲಯದಿಂದ ಹೊರಟ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ವೃತ್ತದ ಮೂಲಕ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಲುಪಬೇಕಾಗಿದ್ದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಹನುಮ ಮಾಲಾಧಾರಿಗಳಿಂದ ಮಸೀದಿ ಬಳಿ ಜೈ ಶ್ರೀರಾಮ್ ಘೋಷವಾಕ್ಯಗಳು ಮೊಳಗಿದ್ದು,ಮಸೀದಿ ಸುತ್ತ ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಒಳಹೋಗಲು ಯತ್ನಿಸಲಾಗಿದೆ.
ಅಲ್ಲಿ ರಾಮ ಮಂದಿರ, ಇಲ್ಲಿ ಹನುಮ ಮಂದಿರ
ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಎದುರು ಬರುತ್ತಿದ್ದಂತೆ ‘ಅಲ್ಲಿ ರಾಮ ಮಂದಿರ, ಇಲ್ಲಿ ಹನುಮ ಮಂದಿರ’ ಎಂಬ ಘೋಷಣೆಗಳು ಮೊಳಗಿದವು. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೆ ಕಟ್ಟುವೇವು ಎಂದು ಹನುಮ ಮಾಲಾಧಾರಿಗಳು ಕೂಗಿದರು.
ಸ್ಥಳದಲ್ಲಿದ್ದ ಭಾರಿ ಸಂಖ್ಯೆಯ ಪೊಲೀಸರು ಹಿಂದೂ ಕಾರ್ಯಕರ್ತರನ್ನ ಒಳ ನುಗ್ಗದಂತೆ ತಡೆದರು. ಹನುಮ ಮಾಲಾಧಾರಿಗಳು ಹಾಗೂ ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಬ್ಯಾರಿಕೇಡ್ ಗಳ ಬಳಿಯೇ ಕುಳಿತ ಮಾಲಾಧಾರಿಗಳು ಮಂದಿರವಿಲ್ಲೇ ಕಟ್ಟುವೆವು ಎಂದು ಘೋಷಣೆಗಳನ್ನು ಮೊಳಗಿಸಿದರು.
ಮಸೀದಿ ಸುತ್ತ ಮುತ್ತ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಭದ್ರತೆಗಾಗಿ ಒಂದು ಸಾವಿರಕ್ಕು ಅಧಿಕ ಪೊಲೀಸರ ನೀಯೋಜನೆ ಮಾಡಲಾಗಿತ್ತು. 25 ಸಿಸಿ ಕ್ಯಾಮರಾಗಳ ಗಳನ್ನ ಅಳವಡಿಕೆ ಮಾಡಿ, ದ್ರೋಣ್ ಕಣ್ಗಾವಲು ಇಡಲಾಗಿತ್ತು. ಸಂಕೀರ್ತನಾ ಯಾತ್ರೆಯಲ್ಲಿ ಸಾವಿರಾರು ಹನುಮಮಾಲಾಧಾರಿಗಳು, ಹಲವು ಕಲಾತಂಡಗಳು ಭಾಗಿಯಾಗಿದ್ದವು.
ವಿವಾದಿತ ಪ್ರದೇಶಕ್ಕೆ ಮಂಡ್ಯ ಎಸ್ ಪಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.