ಬಿರುಗಾಳಿ ಮಳೆ: ಲಕ್ಷಾಂತರ ರೂ.ಆಸ್ತಿ ಹಾನಿ
ಕೆಂಚೇಗೌಡನಕೊಪ್ಪಲಿನಲ್ಲಿ ನೆಲಕಚ್ಚಿದ ಕೋಳಿ ಫಾರಂ | ಮನೆ ಗೋಡೆ ಕುಸಿತ, ಹಾರಿಹೋದ ಹೆಂಚುಗಳು
Team Udayavani, May 2, 2019, 11:20 AM IST
ನಾಗಮಂಗಲ ತಾಲೂಕಿನ ನಾರಗೋನಹಳ್ಳಿಯಲ್ಲಿ ಸುರಿದ ಗುಡುಗು ಸಹಿತ ಬಿರುಗಾಳಿ ಮಳೆಯಿಂದಾಗಿ ಗ್ರಾಮದ ಹನುಮಂತಶೆಟ್ಟಿ ಎಂಬುವವರ ಮನೆ ಗೋಡೆ ಕುಸಿದು ಬಿದ್ದಿರುವುದು.
ಮಂಡ್ಯ: ನಾಗಮಂಗಲ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಲಕ್ಷಾಂತರ ಮೌಲ್ಯದ ಆಸ್ತಿಗೆ ಹಾನಿ ಉಂಟಾಗಿದೆ.
ಪಟ್ಟಣದ ಹೊರವಲಯದ ಕೆಂಚೇಗೌಡನಕೊಪ್ಪಲು ಗ್ರಾಮದ ಲೋಕೇಶ್ ಅವರಿಗೆ ಸೇರಿದ ನಾಟಿಕೋಳಿ ಫಾರಂನ ಕಟ್ಟಡ ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣ ನೆಲಕಚ್ಚಿದೆ. ಈ ವೇಳೆ ಫಾರಂನಲ್ಲಿದ್ದ ಸಾವಿರಕ್ಕೂ ಹೆಚ್ಚು ನಾಟಿ ಕೋಳಿ ಮರಿಗಳು ಮೃತಪಟ್ಟಿವೆ. ಇದರಿಂದಾಗಿ 3 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಗಾರಿಗೆ ತೂರಿ ಹೋದ ಹೆಂಚುಗಳು: ಅದೇ ಗ್ರಾಮದ ಎನ್.ಜೆ.ರಂಗಸ್ವಾಮಿ ವಾಸದ ಮನೆ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್‌ಗಳು ಗಾಳಿಗೆ ತೂರಿಹೋಗಿವೆ. ನಲ್ಕುಂದಿ ಗ್ರಾಮದ ಕೃಷ್ಣ ಪ್ರಸಾದ್ ಅವರ ಮನೆಯ ಛಾವಣಿಯೂ ಗಾಳಿಯ ರಭಸಕ್ಕೆ ಅರ್ಧ ಕಿ.ಮೀ.ದೂರಕ್ಕೆ ಹೋಗಿಬಿದ್ದಿವೆ. ಅಲ್ಲದೆ ಕೋಳಿ ಫಾರಂನ ಹೆಂಚುಗಳು ಗಾಳಿಗೆ ತೂರಿ ಹೋಗಿದ್ದು ಹೆಚ್ಚಿನ ಹಾನಿ ಸಂಭವಿಸಿದೆ.
ತಾಲೂಕಿನ ನಾರಗೋನಹಳ್ಳಿ ಗ್ರಾಮದ ಹನುಮಂತಶೆಟ್ಟಿ ಅವರ ಮನೆ ಗೋಡೆ ಕುಸಿದು ಬಿದ್ದು ಇಡೀ ರಾತ್ರಿ ಕತ್ತಲಿನ ಜೊತೆಗೆ ಮನೆಯವರು ಆತಂಕದಲ್ಲಿ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು.
ಪರಿಹಾರಕ್ಕೆ ಆಗ್ರಹ: ತಾಲೂಕಿನ ಕಂಚಹಳ್ಳಿ ಗ್ರಾಮ ದಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ನಂಜುಂಡೇಗೌಡರ ಮನೆ ಮೇಲೆ ತಡರಾತ್ರಿ ತೆಂಗಿನ ಮರವೊಂದು ಬಿದ್ದ ಪರಿಣಾಮ ಮನೆ ಸೇರಿ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಪದಾರ್ಥಗಳು ಹಾನಿ ಯಾಗಿವೆ. ಮನೆ ಕಳೆದುಕೊಂಡಿರುವ ನಂಜುಂಡೇಗೌಡ ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಪ್ಪಿದ ಭಾರೀ ಅನಾಹುತ: ಹಾಗೆಯೇ ಬಿಂಡಿಗನವಿಲೆ-ಕದಬಹಳ್ಳಿ ಮುಖ್ಯ ರಸ್ತೆಯ ಮಾಯಣ್ಣಗೌಡನಕೊಪ್ಪಲು ಗೇಟ್ ಬಳಿ ಬೃಹತ್ ಆಲದ ಮರವೊಂದು ಬುಧವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬದ ಮೇಲೆ ಬೀಳುವ ಸಮಯದಲ್ಲಿ ಅದೇ ಮಾರ್ಗದಲ್ಲಿ ಬಂದ ಬಸ್ ಕ್ಷಣಾರ್ಧದಲ್ಲಿ ಮುಂದೆ ಸಾಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮರಗಳ ತೆರವು: ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರ ತೆಂಗಿನ ಮರಗಳು ಧರೆಗುರುಳಿ ಬಿದ್ದರೆ, ರಸ್ತೆ ಬದಿಯಲ್ಲಿ ಒಣಗಿ ನಿಂತಿದ್ದ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚಿವೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ಕೆಲ ಹೊತ್ತು ಅಡ್ಡಿಯಾದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.
ಕಗ್ಗತ್ತಲಲ್ಲಿ ಮುಳುಗಿದ ಗ್ರಾಮಗಳು:ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು, ಈ ಪ್ರದೇಶದಲ್ಲಿ ಮಂಗಳವಾರ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.