ಉಕ್ರೇನ್‌ನಲ್ಲಿ ಸಿಲುಕಿದ ಜಿಲ್ಲೆಯ ವಿದ್ಯಾರ್ಥಿಗಳ ಪರದಾಟ
Team Udayavani, Mar 2, 2022, 1:50 PM IST
ಮಂಡ್ಯ: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಂಡ್ಯ ಮೂಲದಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಭಾರತಕ್ಕೆ ಬರಲು ಪರದಾಟ ನಡೆಸುತ್ತಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದಜಯರಾಮ್ ಪುತ್ರ ಮನೋಜ್ ಹಾಗೂ ರಾಜೇಶ್‌ಖನ್ನಾ ಪುತ್ರಿ ಗಾಯಿತ್ರಿ ಖನ್ನಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿ ರುವ ಯುದ್ಧಕ್ಕೆ ಭಯ ಬಿದ್ದಿರುವ ವಿದ್ಯಾರ್ಥಿಗಳು, ಭಾರತಕ್ಕೆ ಮರಳಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇಲ್ಲಿನ ಪೋಷಕರಿಗೂ ಆತಂಕ ಕಾಡುತ್ತಿದೆ.
ಬಂಕರ್‌ನಲ್ಲಿ ವಿದ್ಯಾರ್ಥಿಗಳು: ಮನೋಜ್ ಹಾಗೂ ಗಾಯಿತ್ರಿ ಇಬ್ಬರೂ ಉಕ್ರೇನ್‌ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವಾರದಿಂದ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧನಡೆಯುತ್ತಿದ್ದು, ವಿದ್ಯಾರ್ಥಿಗಳನ್ನು ಬಂಕರ್‌ನಲ್ಲಿಇಡಲಾಗಿದೆ. ಅಲ್ಲದೆ, ಕೆಲವರನ್ನು ಕಾಲೇಜಿನ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ ಎಂದು ಮನೋಜ್ ತಂದೆ ಜಯರಾಮು ತಿಳಿಸಿದರು.
ಕಾರ್ಕಿವ್ ನಗರದ ಮೇಲೆ ದಾಳಿ: ಕಾರ್ಕಿವ್ ನಗರದ ಮೇಲೆ ರಷ್ಯಾದ ಪಡೆಗಳು ದಾಳಿ ನಡೆಸುತ್ತಿರುವುದರಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ಬಾಂಬ್ ದಾಳಿ, ಬಂದೂಕು ಗುಂಡಿನ ದಾಳಿನಡೆಯುತ್ತಿವೆ. ಇದರಿಂದ ಅಲ್ಲಿನ ನಾಗರಿಕರು ಜೀವಭಯದಲ್ಲಿದ್ದಾರೆ. ಎಲ್ಲಿ ಯಾವಾಗ ಏನಾಗುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಪೋಲೆಂಡ್‌ಗೆ ಹೋಗಲು ಯತ್ನ: ಮನೋಜ್ ಮಂಗಳವಾರ ಉಕ್ರೇನ್‌ನಿಂದ ಪೋಲೆಂಡ್‌ಗೆತೆರಳುವ ಬಗ್ಗೆ ಮಧ್ಯಾಹ್ನ 2.30ರ ಸಮಯದಲ್ಲಿನಮಗೆ ಕರೆ ಮಾಡಿ ತಿಳಿಸಿದ್ದ. ಕಾರ್ಕಿವ್ ನಗರದಿಂದ 12 ಕಿ.ಮೀ ದೂರದಲ್ಲಿ ರೈಲ್ವೆ ನಿಲ್ದಾಣವಿದ್ದು, ರೈಲು ಮೂಲಕ ಪೋಲೆಂಡ್‌ಗೆ ತೆರಳಿ ನಂತರ ಅಲ್ಲಿಂದಭಾರತಕ್ಕೆ ಬರಲು ಮುಂದಾಗಿದ್ದ. ಆದರೆ, ಹೊರಗೆಬಂದಾಗ ಬಾಂಬ್ ದಾಳಿ ನಡೆಯಿತು. ತಕ್ಷಣ ಮತ್ತೆನಮ್ಮನ್ನು ಬಂಕರ್‌ನಲ್ಲಿ ಇರಿಸಿದ್ದಾರೆ ಎಂದು ವಿಡಿಯೋಮೂಲಕ ತಿಳಿಸಿದ್ದಾನೆ ಎಂದು ಜಯರಾಂ ಮಾಹಿತಿ ನೀಡಿದರು.
ಆಹಾರ ಕೊರತೆ: ಇದುವರೆಗೂ ಇದ್ದ ದಿನಸಿ ಸಾಮಗ್ರಿ ಖಾಲಿಯಾಗುತ್ತಿದ್ದು, ಊಟ, ತಿಂಡಿಗೆ ಕೊರತೆಯಾಗುತ್ತಿದೆ. ಊಟ, ನೀರು ಇಲ್ಲದೆ, ಹಸಿವಿನಿಂದ ನರಳುವಂತಾಗಿದೆ. ಊಟ, ತಿಂಡಿ ತರಲು ಬಂಕರ್ ಬಿಟ್ಟು ಹೊರಗೆ ಬರಬೇಕಾದ ಸ್ಥಿತಿ ಎದುರಾಗಿದೆ. ಹೊರಗೆ ಬಂದರೆ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿ ನಡೆಯುತ್ತಿವೆ. ಇದರಿಂದ ಊಟ, ತಿಂಡಿಗೆ ಕೊರತೆಯಾಗಿದೆ. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.
ನೆಟ್‌ವರ್ಕ್ ಕಡಿತ: ವಿದ್ಯುತ್, ನೆಟ್‌ವರ್ಕ್ ಆಗಾಗ್ಗೆ ಕೈಕೊಡುತ್ತಿದೆ. ಸರಿಯಾಗಿ ಮಾತನಾಡಲು ಆಗುತ್ತಿಲ್ಲ.ವಿದ್ಯುತ್ ಸಂಪರ್ಕ, ನೆಟ್‌ವರ್ಕ್ ಕೊರತೆಯಿಂದಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆತನೇ ವಿಡಿಯೋಮಾಡಿ ಕಳುಹಿಸುತ್ತಿದ್ದಾನೆ. ನಾವು ಸಂಪರ್ಕಮಾಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದೊಂದಿಗೆ ಸಂಪರ್ಕ: ಪ್ರತಿದಿನ ಜಿಲ್ಲಾಡಳಿತದೊಂದಿಗೆ ಸಂಪರ್ಕ ಮಾಡಲಾಗುತ್ತಿದ್ದು,ವಿದ್ಯಾರ್ಥಿ ಮನೋಜ್ ನೀಡುವ ಕಾಖೀìವ್ ನಗರದ ಪರಿಸ್ಥಿತಿ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನವೀನ್ ಸಾವು: ಪೋಷಕರಲ್ಲಿ ಹೆಚ್ಚಿದ ಆತಂಕ :
ಹಾವೇರಿ ಮೂಲಕ ನವೀನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ಹಿನ್ನೆಲೆ ಮನೋಜ್ ಹಾಗೂ ಗಾಯಿತ್ರಿ ಖನ್ನಾ ಅವರ ಪೋಷಕರಿಗೆ ಆತಂಕ ಹೆಚ್ಚಾಗಿದೆ. ತಿಂಡಿ ತರಲು ಬಂಕರ್‌ನಿಂದ ಹೊರಗೆ ಬಂದ ನವೀನ್‌ಸಾವನ್ನಪ್ಪಿರುವುದು ಟಿವಿಯಲ್ಲಿ ನೋಡಿ ನಮಗೆ ಆತಂಕ ಹೆಚ್ಚಾಗುತ್ತಿದೆ. ಮನೋಜ್ ಸಂಪರ್ಕಕ್ಕೆ ಸಿಗದೆಇರುವುದರಿಂದ ಭಯವೂ ಹೆಚ್ಚಾಗಿದೆ. ಕೂಡಲೇ ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಕರೆ ತರಲು ಮುಂದಾಗಬೇಕು ಎಂದು ವಿದ್ಯಾರ್ಥಿ ಮನೋಜ್ ತಂದೆ ಜಯರಾಮು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.