ಲಾಕ್‌ಡೌನ್‌ಗೆ ಸಕ್ಕರೆ ನಾಡು ಬೆಂಬಲ
Team Udayavani, Apr 29, 2021, 2:46 PM IST
ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಸಕ್ಕರೆ ನಾಡು ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ಗೆ ಸ್ತಬ್ಧಗೊಂಡಿದೆ.
ಬುಧವಾರ ಬೆಳಗ್ಗೆಯಿಂದಲೇ ಅಗತ್ಯ ಸೇವೆಹೊರತುಪಡಿಸಿ ಉಳಿದೆಲ್ಲ ವ್ಯಾಪಾರ-ವಹಿವಾಟುಸ್ಥಗಿತಗೊಂಡಿತ್ತು. ಅಂಗಡಿ ಮಾಲಿಕರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ ಕೊರೊನಾನಿಯಂತ್ರಣಕ್ಕೆ ಸಹಕರಿಸಿದರು.
ಮಂಡ್ಯ ನಗರ, ಮದ್ದೂರು, ಶ್ರೀರಂಗಪಟ್ಟಣ,ಮಳವಳ್ಳಿ, ನಾಗಮಂಗಲ, ಪಾಂಡವಪುರ ಹಾಗೂಕೆ.ಆರ್.ಪೇಟೆ ಪಟ್ಟಣಗಳಲ್ಲೂ ಲಾಕ್‌ಡೌನ್‌ಗೆಬೆಂಬಲ ವ್ಯಕ್ತವಾಯಿತು.ಬಂದ್: ನಗರದ ವಾಣಿಜ್ಯ ಕೇಂದ್ರಗಳಾದ ಪೇಟೆಬೀದಿ, ವಿವಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ,ಆರ್.ಪಿ.ರಸ್ತೆ, ಗುತ್ತಲು ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ನಗರದ ಪ್ರಮುಖರಸ್ತೆಗಳ ಅಂಗಡಿಗಳು, ಷೋ ರೂಂ, ವಿವಿಧ ಎಲ್ಲರೀತಿಯ ಅಂಗಡಿಗಳು ಮುಚ್ಚಿದ್ದವು.
ರಸ್ತೆಗಿಳಿಯದ ವಾಹನ: ಸರಕು ಸಾಗಾಣೆ ವಾಹನಹೊರತುಪಡಿಸಿ ಬೇರೆ ಯಾವುದೇ ವಾಹನ ರಸ್ತೆಗಿಳಿಯಲಿಲ್ಲ. ಪ್ರಮುಖ ರಸ್ತೆ ಸೇರಿ ಬೆಂಗಳೂರು-ಮೈಸೂರು ಹೆದ್ದಾರಿ ಬಿಕೋ ಎನ್ನುತ್ತಿತ್ತು.ಸಾರಿಗೆ ಸ್ತಬ್ಧ: ಸಾರಿಗೆ ಸಂಚಾರವೂ ಬಂದ್ ಆಗಿದ್ದುಬಸ್ ನಿಲ್ದಾಣ ಖಾಲಿಯಾಗಿತ್ತು. ರೈಲು ಸಂಚಾರವಿದ್ದರೂ ಪ್ರಯಾಣಿಕರಿರಲಿಲ್ಲ. ಕೆಲವು ಆಟೋ,ಬೈಕ್ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಿಯಮ ಉಲ್ಲಂಘನೆ: ಬೆಳಗ್ಗೆ 6ರಿಂದ 10ರವರೆಗೆಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು.ಈ ವೇಳೆ ಜನ ಸಾಮಾಜಿಕ ಅಂತರ ಕಾಪಾಡಲಿಲ್ಲ.ಮಾರುಕಟ್ಟೆ, ವಿವಿ ರಸ್ತೆ, ಹೊಸಹಳ್ಳಿ ಸರ್ಕಲ್ ಸೇರಿವಿವಿಧೆಡೆ ಅಂಗಡಿಗಳ ಮುಂದೆ ಗ್ರಾಹಕರುತುಂಬಿದ್ದರು. ತರಕಾರಿ, ಹಣ್ಣು, ದಿನಸಿ ಸಾಮಗ್ರಿ,ಮೀನು, ಮಾಂಸದ ಅಂಗಡಿಗಳ ಮುಂದೆಜನಜಂಗುಳಿ ಸೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.