![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 29, 2019, 10:38 AM IST
ಮಂಡ್ಯ: ಚುನಾವಣೋತ್ತರ ಸಮೀಕ್ಷೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರವಾಗಿವೆ. ಅದ ಕ್ಕಾಗಿ ಮೇ 23ರ ಫಲಿತಾಂಶವೇ ನನಗೆ ಮುಖ್ಯವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿ ದರು. ನಗರದ ಕನಕ ಭವನದಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಹಾಗಾಗಿ ಅವುಗಳ ಬಗ್ಗೆ ಯೋಚನೆಯನ್ನೂ ಮಾvುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಏನೇ ಇದ್ದರೂ ಮೇ 23ರವರೆಗೆ ಕಾದುನೋಡುವೆ. ನನಗೆ ಗೆಲ್ಲುವ ವಿಶ್ವಾಸವಿದೆ. ನಾನು ಯಾವುದೇ ಸರ್ವೆ ಮಾಡಿಸಿಲ್ಲ ಎಂದು ಹೇಳಿದರು.
ವಿಶೇಷ ಅರ್ಥ ಕಲ್ಪಿಸಬೇಕಿಲ್ಲ: ನನ್ನ ಹಾಗೂ ಮಾಜಿ ಸಚಿವರಾದ ಚಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇಬ್ಬರೂ ಲೋಕಾಭಿರಾಮವಾಗಿ ಕೆಲಕಾಲ ಚರ್ಚೆ ನಡೆಸಿದೆವು. ರಾಜಕೀಯವಾಗಿ ಏನನ್ನೂ ಮಾತನಾಡಿಲ್ಲ. ಚುನಾವಣೆ ಮುಗಿದಿರುವುದರಿಂದ ಸ್ವಲ್ಪ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ್ದಾರೆಂದು ತಿಳಿಸಿದರು. ರೈತರ ಸಾಲ ಮನ್ನಾ ಮಾಡುವುದು ಬೇಡ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡಿ ಎಂದಿರುವ ನಟ ದರ್ಶನ್ ಮಾತಿಗೆ ಬೆಂಬಲ ಸೂಚಿಸಿದ ಸುಮಲತಾ, ದರ್ಶನ್ ಬಹಳ ಒಳ್ಳೆಯ ಹೇಳಿಕೆ ನೀಡಿದ್ದಾರೆ. ನನ್ನ ಮನಸ್ಸಿನಲ್ಲಿರುವುದೂ ಅದೇ ವಿಚಾರ. ಅವರ ಹೇಳಿಕೆಯನ್ನು ಪ್ರಶಂಸಿಸಬೇಕು. ಯಾವುದೇ ಸರ್ಕಾರವಿರಲಿ ಅದನ್ನು ಫಾಲೋ ಮಾಡುವುದು ಒಳ್ಳೆಯದು ಎಂದರು. ಇದು ನನಗೆ ವಿಶ್ರಾಂತಿ ಸಮಯ. ರಾಜಕೀಯ ಬಿಟ್ಟು ಬೇರೆ ವಿಚಾರ ಮಾತನಾಡೋಣ. ನಾನು ಎಲ್ಲರಿಗೂ ಇದೇ ಮಾತನ್ನು ಹೇಳಿದ್ದೇನೆ ಎಂದು ನುಡಿದರು.
ಅಭಿಮಾನಿ ಆರೋಗ್ಯ ವಿಚಾರಿಸಿದ ಸುಮಾ
ಮಂಡ್ಯ: ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಹಿಂತಿರುಗುವ ವೇಳೆ ಕ್ಯಾಂಟರ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಅಭಿಮಾನಿಯೊಬ್ಬನ ನಿವಾಸಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತೆರಳಿ ಆತನ ಆರೋಗ್ಯ ವಿಚಾರಿಸಿದರು.
ಭಾನುವಾರ ಮಂಡ್ಯ ತಾಲೂಕಿನ ಊರಮಾರಕಸಲಗೆರೆ ಗ್ರಾಮದ ಕಿರಣ್ ಅವರ ನಿವಾಸಕ್ಕೆ ತೆರಳಿದ ಸುಮಲತಾ ಅಂಬರೀಶ್, ಆತನ ಯೋಗಕ್ಷೇಮ ವಿಚಾರಿಸಿ ಕುಟುಂಬದವರಿಗೆ ಧೈರ್ಯ ಹೇಳಿದರು. ಮಾ.20ರಂದು ನಡೆದ ಸುಮಲತಾ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಿರಣ್ ಸ್ನೇಹಿತರೊಬ್ಬರ ಬೈಕ್‌ನಲ್ಲಿ ಊರಿಗೆ ಹಿಂತಿರುಗುವಾಗ ಕ್ಯಾಂಟರ್ ಡಿಕ್ಕಿ ಹೊಡೆದು ಕಿರಣ್ ಗಾಯಗೊಂಡಿದ್ದನು.
ತೀವ್ರ ಗಾಯಗೊಂಡಿದ್ದ ಕಿರಣ್‌ನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಬಂದಿವ ಕಿರಣ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಸುಮಲತಾ ಅವರು ಅವರ ಯೋಗಕ್ಷೇಮ ವಿಚಾರಿಸಿ ಅರ್ಧ ತಾಸು ಮನೆಯಲ್ಲೇ ಇದ್ದು ಕುಟುಂಬದ ಪರಿಸ್ಥಿತಿಯನ್ನು ಅರಿತುಕೊಂಡರು.
ಸ್ವಾಗತ: ಊರಮಾರಕಸಲಗೆರೆ ಗ್ರಾಮಕ್ಕೆ ಆಗಮಿಸಿದ ಸುಮಲತಾ ಅಂಬರೀಶ್ ಅವರನ್ನು ಮಹಿಳೆಯರು ಹೂ ಮಾಲೆ ಹಾಕಿ ಅಭಿನಂದಿಸಿದರು. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಗಿಬಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.