ಜಿಲ್ಲೆ ಸಚಿವರು, ಶಾಸಕರು, ಸಂಸದರು ನಿರಾಳ

ಚುನಾವಣೆ ಮುಗಿಸಿ ವಿಶ್ರಾಂತಿಗೆ ಮೊರೆ, ವ್ಯವಹಾರಗಳತ್ತ ಗಮನ • ರಾಜಕೀಯ ಚಟುವಟಿಕೆ ಸ್ತಬ್ಧ: ಪ್ರವಾಸಗಳಿಗೆ ತೆರಳಿದ ನಾಯಕರು

Team Udayavani, Apr 23, 2019, 3:52 PM IST

mandya01

ಮಂಡ್ಯ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಳೆದೊಂದು ತಿಂಗಳಿನಿಂದ ನಿರತರಾಗಿದ್ದ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಇದೀಗ ಚುನಾವಣೆ ಮುಗಿಸಿ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಕೆಲವರು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದರೆ, ಮತ್ತೆ ಕೆಲವರು ಖಾಸಗಿ ವ್ಯವಹಾರಗಳತ್ತ ಗಮನಹರಿಸು ತ್ತಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಕ್ಷೇತ್ರದಿಂದ ಹೊರಗುಳಿದು ಚುನಾವಣಾ ಮೂಡ್‌ನಿಂದ ಹೊರಬರುವ ಪ್ರಯತ್ನ ನಡೆಸಿದ್ದಾರೆ.

ಮಾರ್ಚ್‌ ಮೂರನೇ ವಾರದಿಂದ ಶುರುವಾದ ಲೋಕಸಭಾ ಚುನಾವಣಾ ಸಮರ ಏಪ್ರಿಲ್ ಮೂರನೇ ವಾರ ಅಂತ್ಯಗೊಂಡಿದೆ. ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ಸಚಿವರು, ಶಾಸಕರು, ಸಂಸದರೆಲ್ಲರೂ ಬಿಡುವಿಲ್ಲದ ಪ್ರಚಾರದಲ್ಲಿ ತಮ್ಮನ್ನು ತೊಡಗಿದ್ದರು. ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಹಠ ತೊಟ್ಟು ಏಳು ಕ್ಷೇತ್ರಗಳಲ್ಲೂ ಅಭ್ಯರ್ಥಿಯೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದರು.

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಭೆ, ಸಮಾರಂಭ, ಸಮಾವೇಶಗಳನ್ನು ನಡೆಸುವ ಮೂಲಕ ವಿವಿಧ ವರ್ಗದ ಜನರನ್ನು ಸಂಘಟಿಸುವ, ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಅವರ ಮನವೊಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಹಗಲಿರುಳೆನ್ನದೆ ರಾಜಕೀಯ ವಿದ್ಯಮಾನಗಳು, ಬೆಳವಣಿಗೆಗಳತ್ತಲೇ ಗಮನಹರಿಸುತ್ತಾ ಚುನಾವಣಾ ತಂತ್ರಗಾರಿಕೆ ರೂಪಿಸುವುದಕ್ಕೆ ಹೆಚ್ಚು ಗಮನ ನೀಡಿದ್ದರು.

ಪ್ರಚಾರಕ್ಕೆ ಹೆಗಲು ಕೊಟ್ಟಿದ್ದ ನಾಯಕರು: ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಉಕ್ಕಿನಕೋಟೆಯಾಗಿ ಉಳಿಸಿಕೊಂಡು ಪ್ರತಿಷ್ಠೆಯನ್ನು ಮೆರೆಯುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಮುಖ್ಯಮಂತ್ರಿ ಪುತ್ರ ನಿಖೀಲ್ಕುಮಾರಸ್ವಾಮಿ ಸ್ಪರ್ಧೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಚುನಾವಣೆಯಲ್ಲಿ ಜೆಡಿಎಸ್‌ ಬಲವನ್ನು ಹೆಚ್ಚಿಸುವುದಕ್ಕೆ ಎಲ್ಲಾ ಶಾಸಕರು, ಸಂಸದರು ಶಕ್ತಿ ಮೀರಿ ಶ್ರಮ ವಹಿಸಿ ಅಭ್ಯರ್ಥಿಗೆ ಹೆಗಲು ಕೊಟ್ಟು ನಿಂತರು.

ಜೆಡಿಎಸ್‌ ಪಾಲಿಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೋಲಿ ಆಡಿಕೊಂಡು ಗೆಲ್ಲಬಹುದಾಗಿತ್ತು. ಮಾಜಿ ಸಚಿವ ದಿವಂಗತ ಅಂಬರೀಶ್‌ ಪತ್ನಿ ಸುಮಲತಾ ಅಂಬರೀಶ್‌ ಅನಿರೀಕ್ಷಿತ ರಾಜಕೀಯ ಪ್ರವೇಶ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು, ಸಂಸದರಿಗೆ ಬೆವರಿಳಿಸುವಂತೆ ಮಾಡಿತು. ಚುನಾವಣೆ ಘೋಷಣೆಗೂ ಮುನ್ನ ಜೆಡಿಎಸ್‌ನೊಳಗೆ ಗೆಲುವಿನ ಸಂಭ್ರಮ ಮನೆ ಮಾಡಿತ್ತು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಖಚಿತವಾಗುವುದರಿಂದ ಜೆಡಿಎಸ್‌ ನಿರಾಯಾಸವಾಗಿ ಗೆಲ್ಲಬಹುದೆಂಬುದು ಸಚಿವರು, ಶಾಸಕರೆಲ್ಲರ ಲೆಕ್ಕಾಚಾರವಾಗಿತ್ತು.

ಆದರೆ, ಸುಮಲತಾ ಅಂಬರೀಶ್‌ ಆಗಮನದಿಂದ ಇಡೀ ಕ್ಷೇತ್ರದೊಳಗೆ ಜೆಡಿಎಸ್‌ ಅಸ್ತಿತ್ವಕ್ಕೆ ಹೊಡೆತ ನೀಡುವಂತಹ ಬದಲಾವಣೆ ಗಾಳಿ ಎದ್ದಿತು. ಇದಕ್ಕೆ ಜೆಡಿಎಸ್‌ನವರು ಅಕ್ಷರಶಃ ಬೆಚ್ಚಿಬಿದ್ದರು. ಪಕ್ಷಕ್ಕೆ ಕ್ಷೇತ್ರದಲ್ಲಿ ನಿರಾಯಾಸ ಗೆಲುವು ದೊರೆಯುತ್ತದೆಂಬ ನಿರೀಕ್ಷೆ ಹುಸಿಯಾಗಲು ಆರಂಭಿಸಿತು. ಆಗ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಶಾಸಕರು ಅಭ್ಯರ್ಥಿ ಪರವಾಗಿ ಟೊಂಕಕಟ್ಟಿ ನಿಂತರು. ಸುಮಲತಾ ಎಬ್ಬಿಸಿದ ಸುನಾಮಿಯನ್ನು ತಡೆಯು ವುದಕ್ಕೆ ತಂತ್ರಗಾರಿಕೆ ನಡೆಸಿದರು. ಅಭ್ಯರ್ಥಿಗಳ ಪರವಾಗಿ ಎಲ್ಲೆಡೆ ಚುನಾವಣಾ ಪ್ರಚಾರವನ್ನೂ ಬಿರುಸುಗೊಳಿಸಿದರು.

ಖಾಸಗಿ ವ್ಯವಹಾರಗಳತ್ತ ಚಿತ್ತ: ಮಂಡ್ಯ ಲೋಕಸಭಾ ಕ್ಷೇತ್ರದ ಮೂವರು ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರೆಲ್ಲರೂ ಒಂದು ತಿಂಗಳ ಕಾಲ ಕ್ಷೇತ್ರ ಬಿಟ್ಟು ಕದಲಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸಹ ಎರಡು-ಮೂರು ದಿನಕ್ಕೊಮ್ಮೆ ಮಂಡ್ಯಕ್ಕೆ ಆಗಮಿಸಿ ಚುನಾವಣಾ ಸಮಯದಲ್ಲಿ ಜಿಲ್ಲೆಯೊಳಗೆ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಇದರಿಂದ ಸಚಿವರು, ಶಾಸಕರೆಲ್ಲರೂ ವಿಶ್ರಾಂತಿ ಇಲ್ಲದೆ, ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗುವುದು ಅನಿವಾರ್ಯವಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಸುಡುಬಿಸಿಲಿನಲ್ಲಿ ಪ್ರಚಾರದಲ್ಲಿ ತೊಡಗಿದರೆ ರಾತ್ರಿ ಚುನಾವಣಾ ಕಾರ್ಯತಂತ್ರ ರೂಪಿಸುವುದಕ್ಕೆ ತಮ್ಮ ಸಮಯವನ್ನೆಲ್ಲಾ ಮೀಸಲಿಟ್ಟಿದ್ದರು. ಈ ವೇಳೆ ಕುಟುಂಬದವರೊಂದಿಗೆ ಕಾಲ ಕಳೆಯುವುದು, ತಮ್ಮ ಖಾಸಗಿ ವ್ಯವಹಾರಗಳತ್ತ ಗಮನಹರಿಸುವುದಕ್ಕೆ ಹಾಗೂ ವಿಶ್ರಾಂತಿ ಮಾಡಲಿಕ್ಕೂ ಅವರಿಗೆ ಅವಕಾಶವೇ ಸಿಗದಷ್ಟು ಬ್ಯುಸಿಯಾಗಿದ್ದರು.

ವಿರೋಧಿಗಳಿಗೆ ತಿರುಗೇಟು: ಚುನಾವಣೆ ಮುಗಿದ ನಂತರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಭಾನುವಾರವಷ್ಟೇ ನಗರಕ್ಕೆ ಆಗಮಿಸಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಚುನಾವಣೆ ಮುಗಿದ ಮರುದಿನ ಅಭಿಷೇಕ್‌ ಅಂಬರೀಶ್‌ ನಾಗಮಂಗಲ ಹಾಗೂ ಮಂಡ್ಯಕ್ಕೆ ಆಗಮಿಸಿ ಬೆಂಬಲಿಗರೊಂದಿಗೆ ಚಹಾ ಸೇವನೆ ಮಾಡಿ ಹೋಗಿದ್ದಾರೆ. ಆ ಮೂಲಕ ಚುನಾವಣೆ ಮುಗಿಸಿ ಸಿಂಗಾಪೂರ್‌ಗೆ ಹಾರಲಿದ್ದಾರೆ ಎಂಬ ವಿರೋಧಿಗಳ ಮಾತಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಹೇಳಿಕೆಗಳಿಗೆ ಪ್ರತಿಕ್ರಿಯೆ: ಇನ್ನು ಚುನಾವಣೆ ನಂತರದಲ್ಲೂ ಜೆಡಿಎಸ್‌ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಆರೋಪಗಳನ್ನು ಮುಂದುವರಿಸಿದ್ದಾರೆ. ಚಿತ್ರನಟರನ್ನು ಗುರಿಯಾಗಿಸಿಕೊಂಡು ಪಶ್ಚಾತ್ತಾಪ ಹಾಗೂ ಪ್ರಾಯಶ್ಚಿತ್ತದ ಹೇಳಿಕೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವುದು ಬೆದರಿಕೆ ತಂತ್ರವೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಜೆಡಿಎಸ್‌ ಅಭ್ಯರ್ಥಿ ನಿಖೀಲ್ ಚುನಾವಣೆಯಲ್ಲಿ ಸೋತರೆ ತಾವು ರಾಜಕೀಯ ಸನ್ಯಾಸತ್ವ ಸ್ವೀಕರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸವಾಲು ಹಾಕಿದ್ದಾರೆ.

ಗೆಲುವಿನ ಉತ್ಸಾಹ: ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಫ‌ಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಚುನಾವಣಾ ಫ‌ಲಿತಾಂಶ ಹೊರಬೀಳುವುದಕ್ಕೆ ಇನ್ನೂ 30 ದಿನಗಳ ಕಾಲಾವಕಾಶವಿದೆ. ಜೆಡಿಎಸ್‌ ಸಚಿವರು, ಶಾಸಕರು, ಸಂಸದರು ಚುನಾವಣೆ ಮುಗಿಸಿ ನಿರಾಳರಾಗಿದ್ದಾರೆ. ಫ‌ಲಿತಾಂಶದ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಬೆಂಬಲಿಗರಲ್ಲಿ ಗೆಲುವಿನ ಉತ್ಸಾಹವಿದ್ದು, ಅಂತಿಮವಾಗಿ ವಿಜಯಲಕ್ಷ್ಮೀ ಯಾರ ಕೊರಳಿಗೆಗೆ ಒಲಿಯುವಳ್ಳೋ ಕಾದು ನೋಡಬೇಕಿದೆ

ಟಾಪ್ ನ್ಯೂಸ್

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

2047ಕ್ಕೆ ವಿಕಸಿತ ಭಾರತ ನಿರ್ಮಾಣ: ಉಪರಾಷ್ಟ್ರಪತಿ

Vice President: 2047ಕ್ಕೆ ವಿಕಸಿತ ಭಾರತ ನಿರ್ಮಾಣ: ಜಗದೀಪ್‌ ಧನಕರ್‌

20-mandya

Mahadevapura: ಲಿಫ್ಟ್ ಗುಂಡಿಗೆ ಬಿದ್ದ ಬಾಲಕ ಸಾವು

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.