ಕೊನೆಗೂ ನೆಲಸಮವಾದ ಜಿಲ್ಲಾಸ್ಪತ್ರೆ ಕ್ಯಾಂಟೀನ್
ಹಲವು ವರ್ಷಗಳಿಂದ ವಿವಾದ ಎಬ್ಬಿಸಿದ್ದ ಜಾಗ ; ಉತ್ತಮ ತಂಗುದಾಣ ನಿರ್ಮಾಣಕ್ಕೆ ಆಗ್ರಹ
Team Udayavani, Sep 1, 2021, 5:02 PM IST
ಮಂಡ್ಯ: ಕಳೆದ ಹಲವು ವರ್ಷಗಳಿಂದ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಮುಂಭಾಗದಲ್ಲಿದ್ದ ಕ್ಯಾಂಟೀನ್‌ನ್ನು ನ್ಯಾಯಾಲಯದ ಆದೇಶದಂತೆ ಕೊನೆಗೂ ತೆರವುಗೊಳಿಸಲಾಗಿದೆ. ಕ್ಯಾಂಟಿನ್ ತೆರವು ಮಾಡಿ ರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು
ಉತ್ತಮ ತಂಗುದಾಣ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು.ಅದರಂತೆಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ತಂಗುದಾಣ ಇದ್ದ ಜಾಗ: ಹೆರಿಗೆ ವಾರ್ಡ್‌ನ ಮುಂಭಾಗದಲ್ಲಿಯೇ ಮೊದಲು ತಂಗುದಾಣ ಇತ್ತು. ಹೆರಿಗೆಗೆ ಬರುವ ಗರ್ಭಿಣಿಯರು, ರೋಗಿಗಳ ಸಂಬಂಧಿ ಕರಿಗೆ ಆಶ್ರಯತಾಣವಾಗಿತ್ತು. ಆದರೆ ನಂತರ ಅದನ್ನು ಕ್ಯಾಂಟೀನ್ ಆಗಿ ಬದಲಾವಣೆ ಮಾಡಲಾಗಿತ್ತು.
ಟೆಂಡರ್ ಮುಗಿದ್ದಿದ್ದರೂ ಖಾಲಿ ಮಾಡದ ಕ್ಯಾಂಟೀನ್: ಮೂರು ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿತ್ತು. ಅದರಂತೆ ಕಳೆದ 2020ರ ಮಾರ್ಚ್‌ಗೆ ಟೆಂಡರ್ ಅವಧಿ ಮುಗಿದಿತ್ತು. ಆದರೂ ಟೆಂಡರ್ ಪಡೆದಿದ್ದ ವ್ಯಕ್ತಿ ಖಾಲಿ ಮಾಡಿರಲಿಲ್ಲ. ಖಾಲಿ ಮಾಡುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಟೆಂಡರ್ ಪಡೆದಿದ್ದ ವ್ಯಕ್ತಿಯೇ ಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಒಂದೂವರೆ ವರ್ಷಗಳ ಕಾಲ ವಿಚಾರಣೆನಡೆದಿದೆ. ಮಂಗಳವಾರ ಪೊಲೀಸ್ ಬಿಗಿ ಭದ್ರತೆ ಹಾಗೂವಿರೋಧದ ನಡುವೆಯೂ ತೆರವುಗೊಳಿಸಲಾಗಿದೆ.
ಇದನ್ನೂ ಓದಿ:ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ
ಅಕ್ರಮವಾಗಿ ಕ್ಯಾಂಟೀನ್ ಆಗಿ ಬದಲಾವಣೆ: ಕ್ಯಾಂಟೀನ್ ಸ್ಥಾಪನೆಗೆ ಆಸ್ಪತ್ರೆಯ ಆವರಣದಲ್ಲಿಯೇ ಇರುವ ರಕ್ತನಿಧಿ ಕೇಂದ್ರದ ಬಳಿ ಸ್ಥಳಾವಕಾಶ ನೀಡಲಾಗಿತ್ತು. ಆದರೆ ರಾಜಕೀಯ ಪ್ರಭಾವ ಬಳಸಿ ತಂಗುದಾಣವನ್ನೇ ಕ್ಯಾಂಟೀನ್ ಆಗಿ ಪರಿವರ್ತನೆ ಮಾಡಿಕೊಳ್ಳಲಾಗಿತ್ತು.
ರೋಗಿಗಳಿಗೆ ತೊಂದರೆ: ತಂಗುದಾಣ ಕ್ಯಾಂಟೀನ್ ಆಗಿ ಬದಲಾಗಿದ್ದರಿಂದ ರೋಗಿಗಳು ಹಾಗೂ ಸಂಬಂಧಿಕರು ಮಳೆ, ಬಿಸಿಲು, ಚಳಿಯಿಂದ ನರಳಾಡುವಂತಾಗಿತ್ತು. ರಾತ್ರಿ ವೇಳೆ ರೋಗಿಗಳ ಸಂಬಂಧಿಕರು ಮಲಗಲು ಸ್ಥಳವೇ ಇರಲಿಲ್ಲ. ಮಳೆ ಬಂದರೆ ರೋಗಿಗಳು ಹಾಗೂ ಅವರ ಕಡೆ ಯವರ ಪರಿಸ್ಥಿತಿ ಹೇಳತೀರದಾಗಿತ್ತು. ಆಸ್ಪತ್ರೆಯ ಪಡಸಾಲೆಗಳಲ್ಲಿಯೇ ಮಲಗುವ ಪರಿಸ್ಥಿತಿ ಎದುರಾಗಿತ್ತು. ಕ್ಯಾಂಟೀನ್ ತೆರವುಗೊಳಿಸಿ ರೋಗಿ ಗಳು ಹಾಗೂ ಸಂಬಂಧಿಕರಿಗೆ ತಂಗುದಾಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.
ದಿಶಾ ಸಭೆಯಲ್ಲೂ ಚರ್ಚೆ
ಸಚಿವ ಕೆ.ಸಿ.ನಾರಾಯಣಗೌಡ ಅವರ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ದಿಶಾ
ಸಭೆಗಳಲ್ಲೂ ಕ್ಯಾಂಟೀನ್ ತೆರವುಗೊಳಿಸುವಂತೆ ಒತ್ತಾಯಕೇಳಿ ಬಂದಿದ್ದವು. ಪ್ರತಿ ದಿಶಾ ಸಭೆಯಲ್ಲೂ ಸಮಿತಿ ಸದಸ್ಯೆ ಅರುಣಕುಮಾರಿ ಧ್ವನಿ
ಎತ್ತಿದ್ದರು. ಅದರಂತೆಕಳೆದ ಬಾರಿ ನಡೆದ ದಿಶಾ ಸಭೆಯಲ್ಲಿ ಮಿಮ್ಸ್ ನಿರ್ದೇಶಕ ಡಾ.ಎಂ.ಆರ್. ಹರೀಶ್ ತೆರವುಗೊಳಿಸುವ ಭರವಸೆ ನೀಡಿದ್ದರು.
ಆಸ್ಪತ್ರೆ ಆವರಣದಲ್ಲಿ ತಂಗುದಾಣ ಇಲ್ಲದೇ ರೋಗಿಗಳು, ಸಂಬಂಧಿಕರು ಪರಿತಪಿಸುವಂತಾಗಿತ್ತು. ಮಳೆಗಾಲ, ಚಳಿಗಾಲ, ಬೇಸಿಗೆಯಲ್ಲೂ ರೋಗಿಗಳು ಹಾಗೂ ಸಂಬಂಧಿಕರು ಸೂಕ್ತ ಸೌಲಭ್ಯವಿಲ್ಲದೆ, ನರಳುತ್ತಿದ್ದರು. ಮಳೆಗಾಲದಲ್ಲಿ ಮಳೆಯಲ್ಲಿಯೇ ನೆನೆಯುತ್ತಾ ಹೊರಗೆ ಕೂರ ಬೇಕಿತ್ತು. ಈ ಬಗ್ಗೆ ದಿಶಾ ಸಭೆಗಳಲ್ಲೂ ಒತ್ತಾಯ ಮಾಡಿದ್ದರಿಂದ ಇಂದು(ಮಂಗಳವಾರ) ತೆರವುಗೊಳಿಸಲಾಗಿದೆ.
-ಅರುಣಕುಮಾರಿ, ದಿಶಾ ಸಮಿತಿ ಸದಸ್ಯೆ, ಮಂಗಲ
ಕ್ಯಾಂಟೀನ್ ತೆರವುಗೊಳಿಸಲಾಗಿದೆ. ಹಿಂದೆ ಇದ್ದ ಹಾಗೆ ಉತ್ತಮ ತಂಗುದಾಣ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. 24
ಗಂಟೆಗಳಕಾಲ ಶುದ್ಧಕುಡಿಯುವ ನೀರು ಹಾಗೂ ಬಿಸಿ ನೀರು ಸೌಲಭ್ಯ ಕಲ್ಪಿಸಲಾಗುವುದು.
-ಡಾ.ಎಂ.ಆರ್.ಹರೀಶ್, ನಿರ್ದೇಶಕರು,
ಮಿಮ್ಸ್, ಮಂಡ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.