ಅಪಾಯದಲಿದೆ ಮಹದೇವಪುರ ಸಂಪರ್ಕ ಸೇತುವೆ
50ಕ್ಕೂಹೆಚ್ಚು ಸಿನಿಮಾ ಚಿತ್ರೀಕರಣ ನಡೆದ ಹೆಗ್ಗಳಿಕ
Team Udayavani, Nov 25, 2020, 1:59 PM IST
ಶ್ರೀರಂಗಪಟ್ಟಣ: ಹೆಸರಾಂತ ಸಿನಿಮಾ ಶೂಟಿಂಗ್ ಗ್ರಾಮ ಎಂಬ ಹೆಸರು ಪಡೆದಿರುವ ತಾಲೂಕಿನಮಹದೇವಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ವಹಣೆ ಇಲ್ಲದೆ ಅಪಾಯದ ಅಂಚಿನಲ್ಲಿದೆ.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಸೇತುವೆ ರಸ್ತೆಯಲ್ಲಿ ಅಲ್ಲಲ್ಲೇ ಗುಂಡಿಗಳು ನಿರ್ಮಾಣ ವಾಗಿದ್ದು, ಸೇತುವೆ ಯಾವ ಸಂದರ್ಭದಲ್ಲಾದರೂ ಕುಸಿಯುವ ಭೀತಿ ಗ್ರಾಮಸ್ಥರನ್ನುಕಾಡುತ್ತಿದೆ.
ಸೇತುವೆಗೆ ಧಕ್ಕೆ: ಬನ್ನೂರು-ಟಿ.ನರಸೀಪುರ ರಸ್ತೆಯಿಂದ ಮಹದೇವಪುರ ಗ್ರಾಮಕ್ಕೆ ಹಾಗೂ ಮೈಸೂ ರಿಗೂ ಈ ಮಾರ್ಗದಲ್ಲಿ ಹಲವು ಗ್ರಾಮಗಳು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಳವಡಿಸಿರುವ ಸಿಮೆಂಟ್ ಜಲ್ಲಿ ಮಿಕ್ಸರ್‌ಕಿತ್ತು ಬಂದಿದೆ. ರಸ್ತೆಯಲ್ಲಿಕಬ್ಬಿಣದ ಸರಳುಗಳು ಅಸ್ಥಿಪಂಜರದಂತೆಸೆಟೆದು ನಿಂತಿವೆ. ಮಧ್ಯ ಭಾಗದಲ್ಲಿ ಸೇತುವೆ ತಡೆಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಗೆ ಜಲ್ಲಿ ಮತ್ತು ಜಲ್ಲಿಪುಡಿ ಸಾಗಾಣೆ ಮಾಡುವ ಹೆಚ್ಚು,ಭಾರ ಹೊತ್ತ ಟಿಪ್ಪರ್ ಲಾರಿಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಹೀಗಾಗಿ ಸೇತುವೆಗೆ ಧಕ್ಕೆಯಾಗುವುದು ಖಚಿತ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.
ಇದನ್ನೂ ಓದಿ:ಡಿಸೆಂಬರ್ 5ರಂದು ಕರ್ನಾಟಕ ಬಂದ್ ಶತಃಸಿದ್ಧ: ವಾಟಾಳ್ ನಾಗರಾಜ್
ತಡೆಗೋಡೆಯಲ್ಲಿ ಬಿರುಕು: ಸೇತುವೆ ರಸ್ತೆಯಲ್ಲಿ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿವೆ. ಸೇತುವೆ ತಡೆಗೋಡೆಯಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಇದ್ದು ಕೂಡಲೇ ಇತ್ತ ಗಮನಹರಿಸಬೇಕು. ಸೇತುವೆ ರಸ್ತೆ ದುರಸ್ತಿ ಮಾಡಬೇಕು. ಹೆಚ್ಚು ಭಾರ ಹೊತ್ತು ಸಂಚಾರ ಮಾಡುವ ಟಿಪ್ಪರ್ ಲಾರಿಗಳನ್ನು ಪೊಲೀಸರು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಚಲನಚಿತ್ರಗಳ ತವರು: ಸರ್ಕಾರ ಈ ಭಾಗದ ಜನರ ಅನುಕೂಲಕ್ಕಾಗಿ 35 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಮಾಡಿದೆ. ಸೇತುವೆ ನಿರ್ಮಾಣವಾದ ಮೇಲೆ 50ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಭಾಗದ ಹತ್ತಾರು ಗ್ರಾಮಗಳ ಸಾವಿರಾರು ಮಂದಿ ಸಂಚಾರಕ್ಕೆ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಭಾರ ಹೊತ್ತ ಟಿಪ್ಪರ್ ಲಾರಿಗಳು ಸೇತುವೆ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ರಸ್ತೆ ಹಾಗೂ ಸೇತುವೆಗೆ ಧಕ್ಕೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ರಸ್ತೆ ದುರಸ್ತಿ ಜತೆಗೆ ಹೆಚ್ಚು ಭಾರದ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಪಂ ಸದಸ್ಯ ಎಂ.ವಿ.ಕಷ್ಣ ಆಗ್ರಹಿಸಿದ್ದಾರೆ.
-ಗಂಜಾಂ ಮಂಜು
ಲಕ್ಷಾಂತರ ಮಂದಿಯ ಸುಗಮ ಸಂಚಾರಕ್ಕೆ ನಿರ್ಮಾಣ ಮಾಡಿರುವ ಸೇತುವೆ ರಸ್ತೆಯಲ್ಲಿ ಉದ್ದಕ್ಕೂ ಅಲ್ಲಲ್ಲೇ ಮಂಡಿಯುದ್ದ ಗುಂಡಿಗಳು ನಿರ್ಮಾಣವಾಗಿವೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಸೇತುವೆ ರಸ್ತೆ ಸರಿಪಡಿಸಬೇಕು. ಟಿಪ್ಪರ್ ಲಾರಿಗಳ ಸಂಚಾರ ನಿಷೇಧ ಮಾಡಬೇಕು.
-ವೆಂಕಟೇಶ್, ವಕೀಲ ಮತ್ತು ಕೆಆರ್‌ಎಸ್ ಪಕ್ಷದ ಮುಖಂಡ
ಚೆಕ್‌ಪೋಸ್ಟ್‌ನಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ಮಹದೇವಪುರ ಸೇತುವೆ ಮಾರ್ಗದಲ್ಲಿಮೈಸೂರುಕಡೆಗೆ ಟಿಪ್ಪರ್ ಲಾರಿಗಳು ಸಂಚಾರ ಮಾಡುತ್ತಿವೆ. ಸೇತುವೆ ರಸ್ತೆಯಲ್ಲಿಗುಂಡಿಗಳು ನಿರ್ಮಾಣವಾಗಿವೆ. ಸೇತುವೆಗೆ ಅಪಾಯ ಆಗಿಲ್ಲ. ಸೇತುವೆ ರಸ್ತೆಯಲ್ಲಿಗುಂಡಿಗಳನ್ನು ಮುಚ್ಚಲಾಗುತ್ತಿದೆ.ಕಬ್ಬಿಣದ ಸರಳುಗಳುಕಾಣಿಸುತ್ತಿರುವ ಸ್ಥಳಗಳಲ್ಲಿಯೂ ಕಾಂಕ್ರೀಟ್ ಹಾಕಿ ಸೇತುವೆ ರಸ್ತೆ ಅಭಿವೃದ್ಧಿ ಮಾಡಲಾಗುವುದು.
-ರೇವಣ್ಣ, ಕಿರಿಯ ಎಂಜಿನಿಯರ್, ಲೋಕೋಪಯೋಗಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.