ಈ-ಸಮೀಕ್ಷೆ ನಡೆಸಲು ಅಗತ್ಯ ಸೌಲಭ್ಯ ನೀಡಲು ಆಗ್ರಹ
Team Udayavani, Apr 17, 2021, 2:35 PM IST
ಮಂಡ್ಯ: ಈ-ಸಮೀಕ್ಷೆ ನಡೆಸಲು ಆಶಾಕಾರ್ಯಕರ್ತೆಯರಿಗೆ ಅಗತ್ಯ ಸೌಲಭ್ಯ, ಸಂಭಾವನೆನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ಧಿಕಾರಿ ಕಚೇರಿ ಬಳಿ ಜಮಾಯಿಸಿದಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ಮೊದಲುಜಿಲ್ಲಾಧಿ ಕಾರಿ ಹಾಗೂ ನಂತರ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಇದೇವೇಳೆಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧಘೋಷಣೆ ಕೂಗಿ ತಮ್ಮ ಬೇಡಿಕೆ ಈಡೇರಿಸಬೇಕುಎಂದು ಒತ್ತಾಯಿಸಿದರು.
ಈ ಸಮೀಕ್ಷೆ ತಿರಸ್ಕಾರ: ಕಳೆದ ದಿನಗಳಿಂದ ಮೊಬೈಲ್‌ನಲ್ಲಿ ಈ-ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತರುಗಳಿಗೆತರಬೇತಿ ನೀಡಲಾಗುತ್ತಿದೆ. ಇದನ್ನು ಮೊಬೈಲ್ ಆ್ಯಪ್‌ಮೂಲಕ ಕಡಿಮೆ ಅವಧಿ ಯಲ್ಲಿ ಟಾರ್ಗೆಟ್ ನೀಡಿಸಮೀಕ್ಷೆ ಮಾಡಬೇಕೆಂದು ತಿಳಿಸಲಾಗಿದೆ. ಈಗಾಗಲೇಹಲವಾರು ಜಿಲ್ಲೆಗಳಲ್ಲಿ ಅಂಗನವಾಡಿಕಾರ್ಯಕರ್ತೆಯರ ಈ ಸಮೀಕ್ಷೆ ಮಾಡಲು ಸದ್ಯಕ್ಕೆಆಗುವುದಿಲ್ಲ ಎಂದು ತಿರಸ್ಕರಿಸಿದ್ದರು ಎಂದುಹೇಳಿದರು.
ಸಮೀಕ್ಷೆ ಮಾಡಿ, ಇಲ್ಲ ಕೆಲಸ ಬಿಡಿ: ಈಗ ಆಶಾಕಾರ್ಯಕರ್ತೆಯರು ಈ ಸಮೀಕ್ಷೆ ಮಾಡಬೇಕುಎಂದು ಅಧಿ ಕಾರಿಗಳು ಒತ್ತಡ ಹಾಕುತ್ತಿದ್ದಾರೆ.ಸಮೀಕ್ಷೆಗೆ ಮೊಬೈಲ್ ಹಾಗೂ ಡೇಟಾ ಸೌಲಭ್ಯ ನೀಡದೆಸಮೀಕ್ಷೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಸಮೀಕ್ಷೆಮಾಡದಿದ್ದರೆ ಕೆಲಸ ಬಿಟ್ಟು ಹೋಗಿ, ಇಲ್ಲವಾದರೆನೀವೇ ಮೊಬೈಲ್ ಖರೀದಿಸಿ ಸಮೀಕ್ಷೆ ಮಾಡಿ ಎಂದುಅ ಧಿಕಾರಿಗಳು ಹೇಳುತ್ತಿದ್ದಾರೆ ಎಂದುಆರೋಪಿಸಿದರು.
ಮೊಬೈಲ್ ಖರೀದಿಗೆ ಹಣ ಇಲ್ಲ: ಮೊಬೈಲ್ ಖರೀದಿಮಾಡಬೇಕಾದರೆ ಸಾವಿರಾರು ರೂ. ಬೇಕಾಗುತ್ತದೆ.ಕೊರೊನಾ ಸಂದರ್ಭದಲ್ಲಿ ಜೀವನ ನಡೆಸುವುದೇಕಷ್ಟವಾಗಿರುವ ಸಂದರ್ಭದಲ್ಲಿ ಮೊಬೈಲ್ ಖರೀದಿಗೆ ನಮ್ಮ ಬಳಿ ಹಣವಿಲ್ಲ. ಈಗಾಗಲೇ ಮೊಬೈಲ್‌ಇರುವವರು ಸಹ ತಮ್ಮ ವೈಯಕ್ತಿಕ ಬಳಕೆಗೆಇಟ್ಟುಕೊಂಡಿದ್ದಾರೆ. ಅದರಿಂದ ಸಮೀಕ್ಷೆ ಮಾಡಲುಸಾಧ್ಯವಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಮ್ಮಅಳಲು ತೋಡಿಕೊಂಡರು.
ನೀವೇ ಮೊಬೈಲ್ ಕೊಡಿಸಿ: ಕೂಡಲೇ ಸಂಬಂಧಇಲಾಖೆಯೇ ಆಶಾ ಕಾರ್ಯಕರ್ತೆಯರಿಗೆಈ-ಸಮೀಕ್ಷೆ ನಡೆಸಲು ಮೊಬೈಲ್ ಅಥವಾ ಟ್ಯಾಬ್‌ನೀಡುವುದರ ಜೊತೆಗೆ ಇಂಟರ್‌ನೆಟ್ ಡೇಟಾಒದಗಿಸಬೇಕು. ಆಶಾ ಕಾರ್ಯಕರ್ತೆಯರಿಗೆಮೊಬೈಲ್/ಟ್ಯಾಬ್ ಬಳಕೆ ಮಾಡಲು ಬರಲುಸಾಧ್ಯವಿಲ್ಲದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕುಎಂದು ಆಗ್ರಹಿಸಿದರು.ಈ-ಸಮೀಕ್ಷೆಗೆ ನಡೆಸಲು ಸೂಕ್ತ ಸಂಭಾವನೆನೀಡಬೇಕು. ಒತ್ತಡ ಹೇರದೆ ಅಗತ್ಯವಿರುವಷ್ಟುಸಮಯ ನೀಡಬೇಕು. ಆರ್ಥಿಕ ಮಾಹಿತಿಯನ್ನುಈ-ಸಮೀಕ್ಷೆಯಿಂದ ಕೈಬಿಡಬೇಕು ಎಂದುಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷೆಪುಷ್ಪಾವತಿ ಮತ್ತು ಕಾರ್ಯದರ್ಶಿ ಜ್ಯೋತಿ ವಹಿಸಿದ್ದರು.ನೂರಾರು ಆಶಾ ಕಾರ್ಯಕರ್ತೆಯರು ಇದೇವೇಳೆಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.