ಇಂದಿನಿಂದ ಪೋಲಿಯೋ ಅಭಿಯಾನ
Team Udayavani, Jan 19, 2020, 3:29 PM IST
ಕೆ.ಆರ್.ಪೇಟೆ: ನಮಗೆ ರೋಗಗಳು ಬರುವ ಮುನ್ನವೇ ಎಚ್ಚರಿಕೆ ವಹಿಸಿದರೆ, ಜೀವನ ಪೂರ್ತಿ ರೋಗಮುಕ್ತರಾಗಿ ನೆಮ್ಮದಿ ಜೀವನ ನಡೆಸಬಹುದಾಗಿದೆ. ಎಲ್ಲರೂ ಮುಂಜಾಗ್ರತೆ ಕ್ರಮವಹಿಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ. ಹರೀಶ್ ಮನವಿ ಮಾಡಿದರು.
ಪಟ್ಟಣದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದರು.
ವಿಶ್ವಸಂಸ್ಥೆಯ ವರದಿಯಂತೆ ನಮ್ಮ ದೇಶ ಈಗ ಪೋಲಿಯೋ ಮುಕ್ತ ದೇಶವಾಗಿದೆ. ಆದರೂ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಹಾಕಿಸಿಕೊಳ್ಳಬೇಕು. ಏಕೆಂದರೆ ಸಮಸ್ಯೆ ಎದುರಾದಮೇಲೆ ಜೀವನಪೂರ್ತಿ ನೋವು ಅನುಭವಿಸುವ ಬದಲಿಗೆ ಸಮಸ್ಯೆ ಬಾರದಂತೆ ಎರಡು ಹನಿ ಲಸಿಕೆ ಹಾಕಿಸುವುದು ಒಳ್ಳೆಯದು.ಈ ಹಿಂದೆ ಎಷ್ಟು ಸಾರಿ ಪೋಲಿಯೋ ಹನಿ ಹಾಕಿಸಿದ್ದರೂ, ಮತ್ತೂಮ್ಮೆ ಕಡ್ಡಾಯವಾಗಿ ಈಗಹುಟ್ಟಿದ ಮಗು ಸೇರಿದಂತೆ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಹಾಕಿಸಬೇಕು. ಕಳೆದ ಅವಧಿಯಲ್ಲಿ ನಾವುಗಳು ನಿರೀಕ್ಷೆಗೂ ಮೀರಿ ಶೇ.104ರಷ್ಟು ಮಕ್ಕಳಿಗೆ ಲಸಿಕೆ ಹಾಕಿದ್ದೆವು. ಈಗಲೂ ನಾವು ತಾಲೂಕಿನಲ್ಲಿರುವ ಪ್ರತಿಯೊಂದು ಮಗುವಿಗೂ ಲಸಿಕೆಯನ್ನು ಹಾಕುತ್ತೇವೆ ಎಂದು ಹೇಳಿದರು.
ತಾಲೂಕಿನಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ ಐದು ವರ್ಷದ ಒಳಗಿನ 17,075 ಮಕ್ಕಳಿದ್ದಾರೆ. ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ತಾಲೂಕಿನಲ್ಲಿ 110 ಬೂತ್‌ಗಳನ್ನು ಆರಂಭಿಸಿಸದ್ದೇವೆ. 21 ವಾಹನಗಳವ್ಯವಸ್ಥೆ ಮಾಡಿಕೊಂಡಿದ್ದ 448 ಸಲಿಕೆ ಹಾಕುವ ಸಿಬ್ಬಂದಿ ಸಿದ್ಧಮಾಡಿಕೊಂಡಿದೆ. ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೂ ಲಸಿಕೆ ಹಾಕುತ್ತೇವೆ. ಆದರೆ ಅಲೆಮಾರಿ ಕುಟುಂಬದ ಮಕ್ಕಳು, ನಿರ್ಜನ ಅಥವಾ ಕಬ್ಬಿನಗದ್ದೆ ಮತ್ತಿತರುಸ್ಥಳಗಳಲ್ಲಿ ವಾಸಿಸುತ್ತಿರುವ ಮಕ್ಕಳು ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವುದರಿಂದ ವಂಚಿತರಾಗುವ ಸಾಧ್ಯತೆಗಳು ಇರುವುದರಿಂದ ಅಲ್ಲಿನ ಸ್ಥಳೀಯ ನಿವಾಸಿಗಳು, ಪ್ರಜ್ಞಾವಂತರು, ಶಿಕ್ಷಕರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಲೆಮಾರಿಗಳು, ಕೂಲಿಕಾರ್ಮಿಕರಿಗೆ ಪೋಲಿಯೋ ಲಸಿಕೆ ಮಹತ್ವ ತಿಳಿಸಿಕೊಟ್ಟು, ಕಡ್ಡಾಯವಾಗಿ ಬೂತ್‌ಗೆ ಬಂದು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡಬೇಕು ಎಂದು ಡಾ. ಹರೀಶ್ ಮನವಿಮಾಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್, ವಿನೋದ್,ಮತ್ತಿತರು ಹಾಜರಿದ್ದರು. ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆ ಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಪೋಲಿಯೋ ಹನಿ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ
Maddur; ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹ*ತ್ಯೆ
Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.