ಆಧಾರ್‌ಗಾಗಿ ಸಾರ್ವಜನಿಕರ ನಿತ್ಯ ಅಲೆದಾಟ
ರಾತ್ರಿಯಿಂದಲೇ ಸರದಿಯಲ್ಲಿ ನಿಲ್ಲುವ ಜನತೆ • ಪ್ರತ್ಯೇಕ ಕೇಂದ್ರ ತೆರೆಯಲು ಮನಸು ಮಾಡದ ಆಡಳಿತ
Team Udayavani, Jul 22, 2019, 12:50 PM IST
ಕೆ.ಆರ್.ಪೇಟೆ ಪಟ್ಟಣದ ಆಧಾರ್ ಕಾರ್ಡ್ ಮಾಡಿಸಲು ಎಸ್.ಬಿ.ಐ ಬ್ಯಾಂಕ್ ಮುಂಭಾಗ ಜನರು ರಾತ್ರಿಯಿಂದ ಮುಂಜಾನೆಯ ವರೆವಿಗೂ ಸರತಿ ಸಾಲಿನಲ್ಲಿ ಇರುವುದು.
ಕೆ.ಆರ್.ಪೇಟೆ: ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಶಾಲೆಗೆ ದಾಖಲಾತಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಹೊಸದಾಗಿ ಕಾರ್ಡ್ ಮಾಡಿಕೊಳ್ಳಲು ಹಾಗೂ ತಿದ್ದುಪಡಿ ಮಾಡಿಸಿ ಕೊಳ್ಳಲು ಪ್ರತಿದಿನ ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ತಾಲೂಕು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೂ ಆಧಾರ್ ಮಾಡಿಕೊಡುವ ವ್ಯವಸ್ಥೆ ಕೂಡಾ ಇಲ್ಲದೆ ನಿರಾಸೆಯಿಂದ ಸ್ವ ಗ್ರಾಮಕ್ಕೆ ಹಿಂತಿರುಗವ ಸ್ಥಿತಿ ಎದುರಾಗಿದೆ.
ದೇಶದ ಪ್ರತಿಯೊಬ್ಬರಿಗೂ ಆಧಾರ್ ಕಡ್ಡಾಯ ಎಂಬ ಸರ್ಕಾರದ ನೀತಿ ಮಗುವನ್ನು ಶಾಲೆಗೆ ಸೇರಿಸುವುದರಿಂದ ಆರಂಭವಾಗಿ, ಬ್ಯಾಂಕ್ ಖಾತೆ ತೆರೆಯಲು, ಪಾನ್‌ಕಾರ್ಡ್ ಸೀಡ್, ಚಾಲನಾ ಪರವಾನಿಗೆ ಪಡೆಯಲು, ಪಡಿತರ ಚೀಟಿ ಮಾಡಿಸಲು, ಸಾಲ ಪಡೆಯಲು, ತೆರಿಗೆ ಪಾವತಿಸಲು ಹಾಗೂ ಮರಣದ ನಂತರವೂ ಮೃತನ ಆಧಾರ್ ಕಾರ್ಡ್ ನೀಡಿ ಕುಟುಂಬ ಸದಸ್ಯರು ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವ ಹಂತದ ವರೆಗೂ ಅನಿರ್ವಾಯವಾಗಿದೆ.
ಆದರೆ, ಶಾಲಾ ದಾಖಲಾತಿ, ಬ್ಯಾಂಕ್ ಖಾತೆ ಸೇರಿದಂತೆ ಇತರ ಕಡೆಗಳಲ್ಲಿ ಇರುವ ಹೆಸರು, ಜನ್ಮ ದಿನಾಂಕ ಅಷ್ಟೆ ಅಲ್ಲದೆ ಒಂದು ಸಣ್ಣ ಅಕ್ಷರ ತಪ್ಪಾಗಿದ್ದರೂ ಕಂಪ್ಯೂಟರ್‌ಗಳು ಆಧಾರ್ ಕಾರ್ಡ್ ಸ್ವೀಕಾರ ಮಾಡುವುದಿಲ್ಲ. ಆದ್ದರಿಂದ ಪ್ರತಿದಿನ ನೂರಾರು ಜನರು ತಿದ್ದುಪಡಿ ಮಾಡಿಸಿಕೊಳ್ಳಲು ದಿನಗಟ್ಟಲೆ ಕಾಯುವಂತಾ ಗಿದೆ. ಜೊತೆಗೆ ಹೊಸದಾಗಿ ಮಾಡಿಸುವವರಿಗೂ ಇದೇ ನಿಯಮ ಅನ್ವಯವಾಗಲಿದೆ.
ಜಾಗರಣೆ ಯೋಗ: ಪಟ್ಟಣಕ್ಕೆ ಪ್ರತಿದಿನ ಪಟ್ಟಣಕ್ಕೆ ಆಧಾರ್ ಕಾರ್ಡ್‌ಗಾಗಿ ಬರುತ್ತಾರೆ. ಜನರು ತಾಲೂಕು ಕೇಂದ್ರದಲ್ಲಿ ದಿನಕ್ಕೆ 100 ಜನರಿಗೂ ಕೆಲಸ ಆಗುವುದಿಲ್ಲ. ಮೊದಲು ಕಂಪ್ಯೂಟರ್ ಸೆಂಟರ್‌ಗಳಿಗೂ ಆಧಾರ್ ಮಾಡುವ ಅನುಮತಿಯನ್ನು ಸರ್ಕಾರ ನೀಡಿದ್ದರೂ ಆಗ ಜನರು ಸುಗಮವಾಗಿ ಕೆಲಸ ಮಾಡಿಸಿಕೊಳ್ಳುತ್ತಿ ದ್ದರು. ಈಗ ಕೇವಲ ಸರ್ಕಾರ ಕಚೇರಿಗಳು, ಬ್ಯಾಂಕ್‌ಗಳಿಗೆ ಮಾತ್ರ ಅನುಮತಿ ನೀಡಿದ್ದಾರೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ದಿನಕ್ಕೆ 30, ಕೆನರಾ ಬ್ಯಾಂಕ್‌ನಲ್ಲಿ 20 ತಾಲೂಕು ಕಚೇರಿಯಲ್ಲಿರುವ ಕೇಂದ್ರದಲ್ಲಿ 25 ಒಟ್ಟಾರೆ ಪ್ರತಿದಿನ 75 ರಿಂದ 100 ಜನರಿಗೆ ಮಾತ್ರ ಸೇವೆ ಸಿಗುತ್ತದೆ. ಆದುದರಿಂದ ಹೆಚ್ಚುವರಿಯಾಗಿ ಬರುವ ಜನ ರಿಗೆ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಟೋಕನ್ ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತರೂ ತಾಲೂಕು ಕಚೇರಿಯಲ್ಲಿ ದಿನಕ್ಕೆ 25 ಜನರಿಗೆ ಮಾತ್ರ ಟೋಕನ್ ನೀಡುತ್ತಾರೆ. ಆದುದರಿಂದ ಜನರು ಕೋಟನ್ ಪಡೆಯಲು ರಾತ್ರಿಯಿಂದಲೇ ಸರತಿಯಲ್ಲಿ ಮಲಗಿರುವ ನಿದರ್ಶನ ಗಳಿವೆ. ತಾಲೂಕು ಕಚೇರಿಯಲ್ಲಿರುವ ಕೇಂದ್ರದಲಿ ಒಂದುವಾರ ಅಥವಾ ಅದಕ್ಕೂ ಹೆಚ್ಚು ಮುಂದಿನ ದಿನಾಂಕವನ್ನು ನಮೂದಿಸಿ ಟೋಕನ್ ನೀಲಾಗುತ್ತಿದೆ.
ಕಡತದಲ್ಲಿಯೇ ಉಳಿದ ಆದೇಶ ಜನರು ಸರಳ ರೀತಿಯಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅನುಕೂಲವಾಗಲೆಂದು ಪ್ರತಿಯೊಂದು ಗ್ರಾಪಂನ ಲ್ಲಿಯೂ ಹಾಗೂ ನಾಡಕಚೇರಿಯಲ್ಲಿಯೂ ಆಧಾರ್ ಸೇವಾ ಕೇಂದ್ರವನ್ನು ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ತಾಲೂಕಿನಲ್ಲಿರುವ 5 ನಾಡ ಕಚೇರಿ ಹಾಗೂ 34 ಗ್ರಾಪಂಗಳ ಪೈಕಿ ಒಂದು ಕಚೇರಿ ಯಲ್ಲಿಯೂ ಆಧಾರ್ ಕೇಂದ್ರ ಆರಂಭವಾಗಿಲ್ಲ. ಸರ್ಕಾರದ ಆದೇಶ ಕಡತದಲ್ಲಿಯೇ ಉಳಿದಿದೆ. ಪ್ರತಿ ನಾಡಕಚೇರಿ ಹಾಗೂ ಗ್ರಾ.ಪಂ ದಿನಕ್ಕೆ ಕನಿಷ್ಠ 10 ಜನರಿಗೆ ಆಧಾರ್ ಮಾಡಿಕೊಟ್ಟರೆ ಸಾಕು ಕೇವಲ ಐದು ತಿಂಗಳ ಅವಧಿಯಲ್ಲಿ ತಾಲೂಕಿನ ಬಾಕಿ ಇರುವ ಎಲ್ಲರೂ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಆದರೆ ಅಧಿಕಾರಿ ಗಳು ಆಸಕ್ತಿಯಿಂದ ಕೆಲಸ ಮಾಡಬೇಕು ಎಂಬುದು ಜನರ ಆರೋಪವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.