ನೋಟಾದಿಂದ ಅಸಮರ್ಥರ ಆಯ್ಕೆ ಅಪಾಯ
Team Udayavani, Mar 25, 2019, 3:44 PM IST
ಮಂಡ್ಯ: “ನೋಟಾ’ಗೆ ಸಾಂವಿಧಾನ ಮಾನ್ಯತೆ ಇಲ್ಲದಿರುವ ಕಾರಣ ನೋಟಾಗೆ ಚಲಾವಣೆಯಾಗುವ ಮತವು ಮತ್ತಷ್ಟು ಅಸಮರ್ಥರ ಆಯ್ಕೆಯ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಡಾ.ಸುಧಾಕರ ಹೊಸಳ್ಳಿ ಆತಂಕ ವ್ಯಕ್ತಪಡಿಸಿದರು.
ಮದ್ದೂರು ತಾಲೂಕು ಕೆ.ಹೊನ್ನಲಗೆರೆಯ ಆರ್.ಕೆ.ಕಾಲೇಜಿನಲ್ಲಿ ಜಿಲ್ಲಾ ಪಂಚಾಯಿತಿ, ಸ್ವೀಪ್ ಸಮಿತಿ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ, ಆರ್.ಕೆ.ಎಜುಕೇಷನ್ ಇನ್ಸ್‌ಟಿಟ್ಯೂಷನ್ ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಆಯೋಜಿಸಿದ್ದ “ನೋಟಾ’ದ ಸಾಂವಿಧಾನಿಕ ಸಾಧ್ಯತೆಗಳು, ಪರಿಣಾಮಗಳ ಅವಲೋಕನ ಮತ್ತು ಒಂದು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮರ ಆಯ್ಕೆಗೆ ಅಡ್ಡಿ: ಕಣದಲ್ಲಿರುವ ಯಾವೊಬ್ಬ ಅಭ್ಯರ್ಥಿಗಳು ನಮಗೆ ಇಷ್ಟವಾಗಿದ್ದರೆ “ನೋಟಾ’ಗೆ ಬೇಕಾದ ಮತ ಹಾಕುವ ಅವಕಾಶವಿದೆ. ಸಾಂವಿಧಾನಿಕ ಮಾನ್ಯತೆ ಇಲ್ಲದ ನೋಟಾದಿಂದ ಉತ್ತಮರ ಆಯ್ಕೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಲಹೆ ನೀಡಿದರು.
ಮತದಾನ ನಿರ್ಲಕ್ಷದಿಂದ ಪ್ರಜೆಗಳು ಗುಲಾಮರಾಗಿ ಪರಿವರ್ತನೆಯಾಗುತ್ತಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ಮತದಾನ ಪ್ರತಿಯೊಬ್ಬರಿಗೂ ದೊರೆತಿರುವ ಸಂವಿಧಾನಬದ್ಧ ಹಕ್ಕು. ಅದನ್ನು ಚಲಾಯಿಸಿದೆ. ನಾವು ಬೇರೆ ಹಕ್ಕುಗಳನ್ನು ಕೇಳಿ ಪಡೆಯುವ ನೈತಿಕ ಹಕ್ಕು ನಮಗಿರುವುದಿಲ್ಲ. ಹೀಗಾಗಿ ನಾನು ಮತ ಚಲಾಯಿಸುವ ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಿ, ಬೇರೆ ಹಕ್ಕುಗಳನ್ನು ಪಡೆಯಬೇಕು ಎಂದು ಹೇಳಿದರು.
ಶಕ್ತಿಯುತ ಕಾಯಿದೆಗಳಿವೆ: ಮಹಿಳೆಯರ ಪರವಾಗಿ ಜಗತ್ತಿನಲ್ಲೇ ಅತ್ಯಂತ ಶಕ್ತಿಯುತವಾದ ಕಾಯಿದೆಗಳು ಭಾರತದಲ್ಲಿವೆ. ಆದರೆ, ಯಾವುದನ್ನೂ ಪ್ರಶ್ನಿಸಿದ ಕಾರಣಕ್ಕೆ ಸ್ವಾತಂತ್ರ ನಂತರದ ಕಾಲಘಟ್ಟದಲ್ಲೂ ಮಹಿಳೆಯರು ಶೋಷಣೆಗೆ ಒಳಗಾಗುವಂತಾಗಿದೆ.
ಪ್ರಸ್ತುತ 17ನೇ ಲೋಕಸಭಾ ಚುನಾವಣೆಯು ಶೇ.50ರಷ್ಟು ಮಹಿಳೆಯರ ಮತದಾನದಿಂದ ಅವಲಂಬಿತವಾಗಿದೆ. ಹೀಗಾಗಿ ಸರ್ಕಾರ ರಚನೆಯ ಸಂಪೂರ್ಣ ಅಧಿಕಾರ ಮಹಿಳೆಯರ ಕೈಯಲ್ಲಿದೆ. ಹೀಗಾಗಿ ಈ ಬಾರಿಯ ಅತ್ಯಂತ ಪ್ರಜ್ಞಾಪೂರ್ವಕವಾಗಿ ಶೋಷಣೆ ಹೊರತುಪಡಿಸಿದ ಸುಶಿಕ್ಷಿತರಿಗೆ ಮತದಾನ ಮಾಡಬೇಕೆಂದು ಕರೆ ನೀಡಿದರು.
ಕಡ್ಡಾಯ ಮತದಾನ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ ಮಾತನಾಡಿ, ಕಡ್ಡಾಯ ಮತ ಚಲಾವಣೆ ಮೂಲಕ ಯೋಗ್ಯರನ್ನು ಆಯ್ಕೆ ಮಾಡಿ ಸಶಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಗಬೇಕು.
ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದು ಎಂದು ಹೇಳಿದರು. ಇದೇ ವೇಳೆ ಮತದಾನದ ಬಗ್ಗೆ ಮುಖ್ಯ ಶಿಕ್ಷಕ ರಮೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಮತ್ತು ನೋಟಾ ಚಲಾವಣೆ ಬಗ್ಗೆ ಗಣ್ಯರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದವೂ ನಡೆಯಿತು.
ಕಾರ್ಯಕ್ರಮದಲ್ಲಿ ಆರ್.ಕೆ.ವಿದ್ಯಾಸಂಸ್ಥೆಯ ಆಡಳಿತಾಕಾರಿ ಡಾ.ಎಂ.ಸಿ.ಸತೀಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಕಲ್ಯಾಣಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮ, ಅಭಿಲಾಷಾ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.