ಮೈದುಂಬಿ ಹರಿಯುತ್ತಿರುವ ಹೇಮೆ ನದಿ
Team Udayavani, Jul 16, 2018, 3:34 PM IST
ಕೆ.ಆರ್.ಪೇಟೆ: ಚಿಕ್ಕಮಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನಿರೀಕ್ಷೆಗೂ ಮುನ್ನವೇ ಗೋರೂರಿ ನಲ್ಲಿರುವ ಹೇಮಾವತಿ ಅಣೆಕಟ್ಟೆ ಭರ್ತಿಯಾಗಿದ್ದು, ಇದೀಗ ಹೆಚ್ಚಳವಾಗಿರುವ ನೀರನ್ನು ಹೇಮಾವತಿ ನದಿಯಿಂದ ಕೆಎಸ್‌ಎಸ್ ಅಣೆಕಟ್ಟೆಗೆ ಬಿಡುತ್ತಿರುವುದರಿಂದ ತಾಲೂಕಿನಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ಹೇಮಗಿರಿಗೆ ಧಾವಿಸುತ್ತಿದ್ದಾರೆ.
ಸುಮಾರು ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದಾರೆ. ಇದರಿಂದ ಹರ್ಷಗೊಂಡಿರುವ ಕೆಲವು ರೈತರು ನದಿಗೆ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ವಾರದ ಕೊನೆಯ ಹಾಗೂ ರಜಾದಿನ ಭಾನುವಾರ ವಾದ್ದರಿಂದ ಪಟ್ಟಣದ ಜನತೆ ಕುಟುಂಬ
ದೊಂದಿಗೆ ಅಪುರೂಪಕ್ಕೆ ತುಂಬಿ ಹರಿಯುತ್ತಿರುವ ಹೇಮಾವತಿ ನದಿಯನ್ನು ನೋಡಲು ತೆರಳುತ್ತಿದ್ದಾರೆ. ಜಿಲ್ಲಾಡಳಿತ ನೀರನ್ನು ಬಿಡುವ 2 ದಿನಗಳ ಮುನ್ನವೇ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಂಡಿದ್ದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ.
ಕಳೆದ ಬಾರಿ ಹೆಚ್ಚು ನೀರು ನದಿಯಲ್ಲಿ ಬಂದಾಗ ಮಂದಗೆರೆಯ ಸಮೀಪ ನೂರಾರು ಕುರಿಗಳು ಹಾಗೂ ಕುರಿ ಗಾಹಿಗಳು ನದಿಯಲ್ಲಿ ಸಿಲುಕಿ ಕೊಂಡಿದ್ದು, ಅವರನ್ನು ಅಲ್ಲಿಂದ ಹೊರ ತರಲು ಅಧಿಕಾರಿಗಳು 2 ದಿನಗಳ ಕಾಲ ಶ್ರಮಿಸಿದ್ದರು. ಇದರ ಜೊತೆಗೆ ಅಕ್ಕಿ ಹೆಬ್ಟಾಳು ಗ್ರಾಮದ ಸಮೀಪ ಮಹಿಳೆ
ಯೊಬ್ಬರು ನೀರಿನಲ್ಲಿ ಕೊಚ್ಚಿ ಹೊಗುತ್ತಿದ್ದಾಗ ಸಾಹಸ ಮೆರೆದು ಯುವಕ ನೊಬ್ಬ ಜೀವನ ಅಂಗು ತೊರೆದು ಆಕೆಯ ಜೀವನನ್ನು ಉಳಿಸಿದ್ದನ್ನು, ಆತನಿಗೆ ತಾಲೂಕು ಆಡಳಿತ ಸನ್ಮಾಸನಿ ಗೌರವಿಸಿದನ್ನು ನಾವುಗಳು ಸ್ಮರಿಸಬಹುದಾಗಿದೆ.
ಆದರೇ ಈಗ ಪೊಲೀಸ್ ಅಧಿಕಾರಿಗಳು ನದಿಯ ಪಕ್ಕದಲ್ಲಿ ಸೂಕ್ತ ಭದ್ರತೆಯನ್ನು ಮಾಡಿದ್ದು, ಯಾರೂ ಸಹ ನೀರಿಗೆ ಇಳಿಯಂದೆ ಎಚ್ಚರಿಕೆ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Power Scarcity: ಕೊರತೆ ನೀಗಿಸಲು ದೀರ್ಘಾವಧಿ ವಿದ್ಯುತ್ ಖರೀದಿಗೆ ನಿರ್ಧಾರ: ಜಾರ್ಜ್
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.