ಕೆಆರ್‌ಎಸ್ ಹಿನ್ನೀರಿನಲ್ಲಿ ದೇಗುಲಗಳು ಗೋಚರ
ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮುಳುಗಿದ್ದ ದೇಗುಲಗಳು ಪ್ರತ್ಯಕ್ಷ | ನಿತ್ಯ ಪ್ರವಾಸಿಗರು ಭೇಟಿ
Team Udayavani, May 2, 2019, 11:12 AM IST
ಶ್ರೀರಂಗಪಟ್ಟಣದ ಕೆಆರ್‌ಎಸ್ ಹಿನ್ನೀರಿನಲ್ಲಿ ಕಂಡು ಬಂದ ದೇವಾಲಯದ ಒಂದು ನೋಟ.
ಶ್ರೀರಂಗಪಟ್ಟಣ: ನೂರಾರು ವರ್ಷಗಳ ಹಿಂದೆ ಜಲಾಶಯ ನಿರ್ಮಾಣ ಹಂತದ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯಗಳು ಈಗ ನೀರು ಕಡಿಮೆಯಾದಂತೆ ಒಂದೊಂದಾಗಿ ಗೋಚರಿಸುತ್ತಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲ ಬೇಗೆ ಹೆಚ್ಚಾಗಿ ನೀರು ಆವಿಯಾಗುತ್ತಿದ್ದು, ದಿನೇ ದಿನೆ ಕೆಆರ್‌ಎಸ್ ಜಲಾಶಯದ ಲ್ಲಿ ನೀರು ಕುಸಿಯುತ್ತಿದಂತೆ ಹಿನ್ನೀರಿನಲ್ಲಿ ಮುಳುಗಿದ್ದ ದೇವಾಲಯ ಸೇರಿದಂತೆ ಇತರ ದ್ವೀಪಗಳು ಗೋಚರಿಸುವುದು ಸಾಮಾನ್ಯವಾಗಿದ್ದರೂ, ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿ ಗರಿಗೆ ಈ ಪಾಳು ಬಿದ್ದ ದೇವಾಲಯಗಳ ಮಂಟಪ, ಮುರಿದ ವಿಗ್ರಹ, ಕಲ್ಲಿನ ಚಿತ್ರಕಲೆ, ಕೆತ್ತನೆಗಳ ಬಳಿ ಕುಳಿತುಕೊಳ್ಳಲು ಹಾಗೂ ವೀಕ್ಷಣೆ ಖುಷಿ ನೀಡಿದೆ.
ಮರುಕಳಿಸಿದ ಇತಿಹಾಸ: ಜಲಾಶಯದ ಒಟ್ಟು ನೀರಿನ ಮಟ್ಟ 124.80 ಅಡಿಗಳು ತುಂಬಿದ ಸಂದರ್ಭದಲ್ಲಿ ಈ ಭಾಗದ ಹಿನ್ನೀರಿನಲ್ಲಿ ಯಾವುದೇ ದ್ವೀಪಗಳು, ದೇವಾಲಯಗಳಿದ್ದರೂ ಯಾವುದೂ ಗೋಚರವಾಗುವುದಿಲ್ಲ. ಹಿನ್ನೀರಿನ ಭಾಗ ಒಂದು ಸಮತಟ್ಟಾಗಿ ಸಮುದ್ರದಂತೆ ಕಾಣುತ್ತದೆ. 100 ಅಡಿಗಿಂತ ಕಡಿಮೆಯಾದಂತೆ ಈ ಹಿಂದೆ ಕೆಆರ್‌ಎಸ್ ಜಲಾಶಯದ ನಿರ್ಮಾಣ ಮಾಡುವಾಗ ಕೆಲವು ಗ್ರಾಮಗಳು, ಪ್ರಸಿದ್ಧ ದೇವಾಲಯಗಳು ಮುಳುಗಿರುವ ಹಿಂದಿನ ಇತಿಹಾಸ ಕಂಡು ಬಂದಿವೆ.
ಪ್ರವಾಸಿಗರಿಗೆ ಖುಷಿ; ಕೆಆರ್ ಎಸ್ ಜಲಾಶಯ ವೀಕ್ಷಣೆಗೆ ಬಂದ ಪ್ರವಾಸಿಗರೂ ಹಿನ್ನೀರಿನ ಪ್ರದೇಶಕ್ಕೆ ಪ್ರತಿ ದಿನ ಆಗಮಿಸುತ್ತಿದ್ದಾರೆ. ಹಿನ್ನೀರಿನಲ್ಲಿ ಆಟವಾಡುವುದು, ಜಲಾಶಯದಿಂದ ಹೊರ ಕಾಣಿಸುವ ದೇವಾಲಯದ ಮಂಟಪದ ಬಳಿ ಕುಳಿತುಕೊಳ್ಳುತ್ತಿದ್ದಾರೆ. ಅಲ್ಲದೇ, ಊಟ ಮಾಡಿ ಸೊಬಗನ್ನು ಸವಿಯುತ್ತಾ ಮೊಬೈಲ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಸ್ಥಳಾಂತರ: ಜಲಾಶಯದಲ್ಲಿ 70 ಅಡಿಗಿಂತ ಕಡಿಮೆ ನೀರು ಇದ್ದ ಸಂದರ್ಭದಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಕಂಡು ಬಂದಿತ್ತು. ಆ ದೇವಾಲಯ ದೊಡ್ಡದಾಗಿ ವಿಶೇಷವಾಗಿತ್ತು.
ಅದನ್ನು ಕಳೆದ 8 ವರ್ಷಗಳ ಹಿಂದೆ ಕಡಿಮೆ ನೀರಿದ್ದ ವೇಳೆ ಭಕ್ತರೊಬ್ಬರು ದೇವಾಲಯದ ಅವ ಶೇಷಗಳನ್ನು ಹಿನ್ನೀರಿನಿಂದ ಹೊರ ತಂದು ಕಟ್ಟೇರಿ ಗ್ರಾಮದ ಬಳಿ ಪ್ರಸ್ತುತ ಸ್ಥಾಪಿಸಿದ್ದಾರೆ. ಈಗಲೂ ಈ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆಗಾಲ ಪ್ರಾರಂಭ ವಾಗದೆ ಇದೇ ಬಿಸಿಲ ಝಳಕ್ಕೆ ನೀರು ಇನ್ನು ಕಡಿಮೆಯಾದರೆ ಇನ್ನು ಹಲವು ದೇವಾಲಯಗಳು ಗೋಚರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕೆಆರ್‌ಎಸ್‌ನಲ್ಲಿ 87.22 ಅಡಿ ನೀರು:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.