ಜಿಲ್ಲೆ 57 ಕೆರೆಗಳಲ್ಲಿ ಮಾತ್ರ ಭರ್ತಿ ನೀರು


Team Udayavani, Feb 4, 2019, 7:23 AM IST

jil-57.jpg

ಮಂಡ್ಯ: ದಿನೇ ದಿನೆ ಬೇಸಿಗೆ ಬಿಸಿಲ ತಾಪ ಹೆಚ್ಚುತ್ತಿದೆ. ಬೇಸಿಗೆ ಎದುರಾಗುವ ಮುನ್ನವೇ ಮಳೆಯಾಶ್ರಿತ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಕೆರೆಗಳಲ್ಲಿ ನೀರಿನ ಪ್ರಮಾಣವೂ ಕುಸಿಯುತ್ತಿದೆ. ಜನ-ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಆತಂಕ ಈಗಲೇ ಎಲ್ಲರನ್ನೂ ಕಾಡುತ್ತಿದೆ.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿದ 209 ಕೆರೆಗಳಲ್ಲಿ ಕೇವಲ 52 ಕೆರೆಗಳಲ್ಲಷ್ಟೇ ನೀರು ಪೂರ್ಣ ಪ್ರಮಾಣದಲ್ಲಿದ್ದು, 116 ಕೆರೆಗಳಲ್ಲಿ ಅರ್ಧದಷ್ಟು ನೀರು ತುಂಬಿದ್ದರೆ, 22 ಕೆರೆಗಳಲ್ಲಿ ಶೇ.25ರಿಂದ 50ರಷ್ಟು ನೀರಿದೆ. 15 ಕೆರೆಗಳಲ್ಲಿ ಕಾಲುಭಾಗಕ್ಕಿಂತಲೂ ಕಡಿಮೆ ನೀರಿದ್ದು 4 ಕೆರೆಗಳು ಮಾತ್ರ ಖಾಲಿ ಉಳಿದಿದೆ.

ಮಂಡ್ಯ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಗೆ 57 ಕೆರೆಗಳು ಬರಲಿದ್ದು, 7 ಕೆರೆಗಳು ಭರ್ತಿಯಾಗಿದ್ದು, 40 ಕೆರೆಗಳಲ್ಲಿ ಅರ್ಧದಷ್ಟು ನೀರಿದೆ. 9 ಕೆರೆಗಳಲ್ಲಿ ಕಾಲುಭಾಗ ಹಾಗೂ ಅದಕ್ಕಿಂತ ಹೆಚ್ಚು ನೀರಿದೆ. ವಿಶ್ವೇಶ್ವರಯ್ಯ ನಾಲೆಯನ್ನು ಹೊಂದಿದ್ದರೂ ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿರುವ ಮದ್ದೂರು ವ್ಯಾಪ್ತಿಯ 68 ಕೆರೆಗಳಲ್ಲಿ 14 ಕೆರೆಗಳು ಭರ್ತಿಯಾಗಿವೆ. 2 ಕೆರೆಗಳಲ್ಲಷ್ಟೇ ಪೂರ್ಣ ಪ್ರಮಾಣದ ನೀರಿದೆ. 39 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿದ್ದು, 10 ಕೆರೆಗಳಲ್ಲಿ ಕಾಲುಭಾಗ ಹಾಗೂ ಅದಕ್ಕಿಂತ ಹೆಚ್ಚು ನೀರಿದ್ದರೆ, 7 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಮಳೆ ಅವಲಂಬನೆ: ಮಳವಳ್ಳಿ ತಾಲೂಕು ಕೂಡ ಮಳೆಯನ್ನೇ ಅವಲಂಬಿಸಿದ್ದು, ವಿಶ್ವೇಶ್ವರಯ್ಯ ನಾಲೆ ಹಾದು ಹೋಗಿದ್ದರೂ ಪ್ರತಿ ವರ್ಷ ನೀರಿನ ಪರದಾಟ ಮಾತ್ರ ತಪ್ಪಿಲ್ಲ. ಈ ಭಾಗದಲ್ಲಿರುವ 35 ಕೆರೆಗಳಲ್ಲಿ 15 ಕೆರೆಗಳು ತುಂಬಿದ್ದರೆ, 13 ಕೆರೆಗಳಲ್ಲಿ ಅರ್ಧದಷ್ಟು ನೀರಿ ದೆ. 1 ಕೆರೆಯಲ್ಲಿ ಮಾತ್ರ ಅರ್ಧಕ್ಕಿಂತ ಹೆಚ್ಚು ನೀರಿದ್ದು, 5 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರಿದೆ. ನಾಗಮಂಗಲ ತಾಲೂಕು ವ್ಯಾಪ್ತಿಯಲ್ಲಿ ವಿಶ್ವೇಶ್ವರಯ್ಯ ವಿಭಾಗಕ್ಕೆ 3 ಕೆರೆಗಳು ಸೇರಲಿದ್ದು, 2 ಕೆರೆಗಳಲ್ಲಿ ಅರ್ಧದಷ್ಟು ನೀರಿದ್ದು 1 ಕೆರೆಯಲ್ಲಿ ಕನಿಷ್ಠ ಪ್ರಮಾಣದ ನೀರಿದೆ.

ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ 9 ಕೆರೆಗಳಿದ್ದು ಎಲ್ಲಾ ಕೆರೆಗಳಲ್ಲೂ ಅರ್ಧದಷ್ಟು ನೀರಿದೆ. ಪಾಂಡವಪುರ ವ್ಯಾಪ್ತಿಯಲ್ಲಿ 2 ಕೆರೆ ಮಾತ್ರವಿದ್ದು ಎರಡೂ ಭರ್ತಿಯಾಗಿವೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ವ್ಯಾಪ್ತಿಯಲ್ಲಿ 35 ಕೆರೆಗಳಿದ್ದು ಅದರಲ್ಲಿ 14 ಮಾತ್ರ ಭರ್ತಿಯಾಗಿದೆ. 13 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿದೆ. 1 ಕೆರೆಯಲ್ಲಿ ಕಾಲುಭಾಗದಷ್ಟು ನೀರಿದ್ದರೆ, 4 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರಿದೆ. 3 ಕೆರೆಗಳು ಖಾಲಿ ಇವೆ ಎಂಬುದಾಗಿ ಕಾವೇರಿ ನೀರಾವರಿ ನಿಗಮದ ಅಂಕಿ-ಅಂಶಗಳು ತಿಳಿಸಿವೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ 48 ಕೆರೆಗಳಿವೆ. ಜಿಲ್ಲಾಧಿಕಾರಿ ಹಾಗೂ ಜಿಪಂ ವ್ಯಾಪ್ತಿಗೆ ಸೇರಿದ ಬಹಳಷ್ಟು ಕೆರೆಗಳಿವೆ. ಅವುಗಳೆಲ್ಲವೂ ನೀರಿಲ್ಲದೆ ಭಣಗುಡುತ್ತಿವೆ. ಬೇಸಿಗೆ ಎದುರಾಗುವ ಮುನ್ನವೇ ನಾಗಮಂಗಲ ತಾಲೂಕಿನ 17 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಸೃಷ್ಟಿಯಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 18 ಟ್ಯಾಂಕರ್‌ಗಳಲ್ಲಿ ನಿತ್ಯ 38 ಬಾರಿ ಗ್ರಾಮಗಳಿಗೆ ನೀರೊದಗಿಸಲಾಗುತ್ತಿದೆ. ಕೆ.ಆರ್‌.ಪೇಟೆ ತಾಲೂಕಿನ 4 ಹಾಗೂ ನಾಗಮಂಗಲ ತಾಲೂಕಿನ 7 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರೊದಗಿಸಲಾಗುತ್ತಿದೆ.

ಹಾಹಾಕಾರ ಎಲ್ಲೆಲ್ಲಿ: ನಾಗಮಂಗಲ ತಾಲೂಕಿನ ಅಣೆ ಚನ್ನಾಪುರ, ಬಲ್ಲಾವಳ್ಳಿ, ಚನ್ನೇಗೌಡನಕೊಪ್ಪಲು, ಗಾಣಿಗರ ಕೊಪ್ಪಲು, ಹೆಚ್.ಕ್ಯಾತನಹಳ್ಳಿ, ಕಂಬದಹಳ್ಳಿ, ಶಿಖರನಹಳ್ಳಿ, ಹೂವಿನಹಳ್ಳಿ, ಬಿದರಕೆರೆ, ಮಾಟನಕೊಪ್ಪಲು, ಮಸಗೋನಹಳ್ಳಿ, ಪಿ.ಚಿಟ್ಟನಹಳ್ಳಿ, ಕೆಂಚಗೋನಹಳ್ಳಿ, ವಡ್ಡರಹಳ್ಳಿ, ಶಿವನಹಳ್ಳಿ, ಮಲ್ಲನಕೊಪ್ಪಲು, ಹೆತ್ತಗೋನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಇದರಲ್ಲಿ ಹಲವು ಗ್ರಾಮಗಳಿಗೆ ಕನಿಷ್ಠ 2 ರಿಂದ 4 ಬಾರಿ ನಿತ್ಯ ನೀರು ಪೂರೈಸಲಾಗುತ್ತಿದೆ.

ಕೆ.ಆರ್‌.ಪೇಟೆ ತಾಲೂಕಿನ ಹಡವನಹಳ್ಳಿ ಕೊಪ್ಪಲು, ಗಂಗನಹಳ್ಳಿ, ಕೂಟಗಹಳ್ಳಿ, ಬಳ್ಳೇಕೆರೆ, ಮದ್ದೂರು ತಾಲೂಕಿನ ಹೊಸಕೆರೆ, ನಾಗಮಂಗಲ ತಾಲೂಕಿನ ತೊರೆ ಮಾವಿನಕೆರೆ, ಜೋಡಿ ಅಲ್ಪಹಳ್ಳಿ, ಮುದಿಗೆರೆ, ಅಳೀಸಂದ್ರ, ಗಾಣಸಂದ್ರ, ಪಿ.ಮಲ್ಲೇನಹಳ್ಳಿ, ಹಾಳಪ್ಪನಕೊಪ್ಪಲು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ.

ಹೂಳು-ಜೊಂಡಿನದ್ದೇ ಕಾರು-ಬಾರು: ಜಿಲ್ಲೆಯ ಬಹ ಳಷ್ಟು ಕೆರೆಗಳು ಹೂಳಿನಿಂದ ತುಂಬಿಹೋಗಿದ್ದರೆ, ಮತ್ತಷ್ಟು ಕೆರೆಗಳು ಜೊಂಡಿನಿಂದ ಆವೃತವಾಗಿ ಕೆರೆಯೇ ಕಾಣದಂತಾಗಿದೆ. ಇಂತಹ ಕೆರೆಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕೆರೆಗಳ ಹೂಳೆತ್ತಿ ಸುವ ಕೆಲಸವೂ ನಡೆದಿಲ್ಲ, ಜೊಂಡುಗಳನ್ನು ತೆರವು ಮಾಡುವ ಕಾರ್ಯಕ್ಕೂ ಯಾರೊಬ್ಬರೂ ಮುಂದಾಗಿಲ್ಲ.

ಬೆಂಗಳೂರು-ಮೈಸೂರು ಹತ್ತು ಪಥಗಳ ರಸ್ತೆ ನಿರ್ಮಾಣಕ್ಕೆ ಕೆರೆಗಳ ಮಣ್ಣನ್ನು ಬಳಸುವುದಕ್ಕೆ ಜಿಪಂ ಯೋಜನೆ ರೂಪಿಸಿದ್ದು, ಅದು ನಿಗದಿಯಂತೆ ಕಾರ್ಯರೂಪಕ್ಕೆ ಬಂದರೆ ಒಂದಷ್ಟು ಕೆರೆಗಳ ಹೂಳು ತೆರವಾಗಬಹುದೆಂಬ ನಿರೀಕ್ಷೆ ಇದೆ.

ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ: ಕುಡಿಯುವ ನೀರಿನ ಸಮಸ್ಯೆ ಅರಿಯುವ ಸಲುವಾಗಿಯೇ ತಾ.ಪಂ. ಇಇ ಮತ್ತು ಎಇಇ ನೇತೃತ್ವದಲ್ಲಿ ಜಿಲ್ಲೆಯಲ್ಲಿ 3 ತಂಡಗಳನ್ನು ರಚಿಸಲಾಗಿದೆ. ಹಿಂದೆ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತೋ ಅಲ್ಲಿ ಮತ್ತೆ ಸಮಸ್ಯೆ ಮುಂದುವರಿದಿದೆಯೇ, ಸಮಸ್ಯೆ ಸೃಷ್ಟಿಯಾಗಬಹುದಾದ ಹೊಸ ಗ್ರಾಮಗಳು ಯಾವುವು,

ಎಲ್ಲಿ ಸಮಸ್ಯ ತೀವ್ರ ಸ್ವರೂಪದಲ್ಲಿರಲಿದೆ ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ. ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸುವ ಬಗ್ಗೆಯೂ ಕ್ರಮ ವಹಿಸಲು ಸೂಚಿಸಲಾಗಿದೆ. ಹಣಕಾಸಿನ ಕೊರತೆಯಾಗದಂತೆ ಪ್ರತಿ ತಾಲೂಕಿಗೆ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ತಿಳಿಸಿದರು.

ನಾಲಾ ಸಂಪರ್ಕ ಜಾಲವಿಲ್ಲ – ಅಧಿಕ ನೀರು ಪೋಲು: ಜಿಲ್ಲೆಯಲ್ಲಿ ಸುಮಾರು 340ಕ್ಕೂ ಹೆಚ್ಚು ಕೆರೆಗಳಿವೆ. ಇದರಲ್ಲಿ ಶೇ.75ಕ್ಕೂ ಹೆಚ್ಚು ಕೆರೆಗಳಿಗೆ ನಾಲಾ ನೀರಿನ ಸಂಪರ್ಕ ಜಾಲದಿಂದ ವಂಚಿತವಾಗಿವೆ. ಇದರಿಂದ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿ ಕೆಆರ್‌ಎಸ್‌ ಭರ್ತಿಯಾದರೂ ಜಲಾಶಯದಿಂದ ಹೊರಬಿಡುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲದಿರುವುದು ದುರಂತ.

ಈ ಬಾರಿ ಜುಲೈ ತಿಂಗಳಲ್ಲೇ ಕೆಆರ್‌ಎಸ್‌ ಭರ್ತಿಯಾಗಿ 1.30 ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಯಿತು. ಅದರಲ್ಲಿ ಹನಿ ನೀರು ಕೆರೆಗೆ ಸೇರದೆ ತಮಿಳುನಾಡು ಪಾಲಾಯಿತು. ಜಿಲ್ಲಾ ವ್ಯಾಪ್ತಿಯ ಕೆರೆಗಳೆಲ್ಲವೂ ಖಾಲಿ ಉಳಿದವು.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.