Thieves arrested: ಚಿನ್ನಾಭರಣ, ಹಸು ಕಳ್ಳತನ ಮಾಡುತ್ತಿದ್ದವರ ಸೆರೆ


Team Udayavani, Sep 14, 2023, 1:24 PM IST

Thieves arrested: ಚಿನ್ನಾಭರಣ, ಹಸು ಕಳ್ಳತನ ಮಾಡುತ್ತಿದ್ದವರ ಸೆರೆ

ಮಂಡ್ಯ: ಜುವೆಲ್ಲರಿ ಅಂಗಡಿ ಹಾಗೂ ಜಿಲ್ಲೆಯ ವಿವಿಧೆಡೆ ಹಸುಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಂತೆ ಕೆ.ಆರ್‌.ಪೇಟೆ ಟೌನ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಗಮಂಗಲ ತಾಲೂಕಿನ ಚಾಕೇನಹಳ್ಳಿ ಗ್ರಾಮದ ಹಾಲಿ ವಾಸ ಮಂಡ್ಯ ನಗರದ ಚಾಮುಂಡೇಶ್ವರಿ ನಗರದ ರವಿಕುಮಾರ್‌.ಸಿ, ಮಂಡ್ಯ ತಾಲೂಕಿನ ಸೂನಗಹಳ್ಳಿ ಗ್ರಾಮದವರಾದ ಮಂಜುನಾಥ, ವಿಷ್ಣು.ಸಿ, ಹೇಮಂತ್‌ ಕುಮಾರ್‌.ಎಸ್‌.ವಿ ಬಂತ ಆರೋಪಿಗಳು. ಬಂತರಿಂದ 35.86 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಸೇರಿದಂತೆ ಇತರೆ ವಸ್ತು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಮಾತನಾಡಿ, ಆರೋಪಿ ರವಿಕುಮಾರ್‌ ತಮ್ಮ ಗ್ರಾಮ ಚಾಕೇನಹಳ್ಳಿಯಲ್ಲಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದನು. ಈತನ ವಿರುದ್ಧ 2020ರಿಂದಲೂ ವಿವಿಧ ಪೊಲೀಸ್‌ ಠಾಣೆಗಳಲ್ಲಿ 18ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಎರಡನೇ ಆರೋಪಿ ಮಂಜುನಾಥ್‌ ಸೂನಗಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷನಾಗಿದ್ದಾನೆ. ಈತ ರವಿಕುಮಾರ್‌ಗೆ ಸಹಕರಿಸಿದ್ದಾನೆ ಎಂದು ತಿಳಿಸಿದರು.

ಕೆ.ಆರ್‌.ಪೇಟೆಯ ಲೀಲಾ ಬ್ಯಾಂಕರ್ಸ್‌ ಆಂಡ್‌ ಜುವೆಲ್ಲರಿ ಶಾಪ್‌ನಲ್ಲಿ ಆಭರಣ ದೋಚಿದ್ದ ನಾಲ್ವರು ಆರೋಪಿಗಳ ಬಂಧನದಿಂದ 11 ಪ್ರಕರಣಗಳು ಬೆಳಕಿಗೆ ಬಂದಿದೆ.

ಕೆ.ಆರ್‌.ಪೇಟೆ ಟೌನ್‌ ಪೊಲೀಸ್‌ ಠಾಣೆಯಲ್ಲಿ 4 ಪ್ರಕರಣಗಳು, ಮಂಡ್ಯ ಪಶ್ಚಿಮ ಠಾಣೆ, ಹಲಗೂರು, ಮಂಡ್ಯ ಸೆಂಟ್ರಲ್‌ ಪೊಲೀಸ್‌ ಠಾಣೆ, ಚನ್ನಪಟ್ಟಣ ಹಾಗೂ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆ, ಮೈಸೂರಿನ ಉದಯಗಿರಿ ಹಾಗೂ ಬನ್ನೂರು ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

ಆರೋಪಿಗಳಿಂದ 154 ಗ್ರಾಂ ಚಿನ್ನ, 20 ಕೆಜಿ ಬೆಳ್ಳಿ ಪದಾರ್ಥಗಳು, 1 ಅಶೋಕ ಲೈಲ್ಯಾಂಡ್‌ ವಾಹನ, 1 ಎರಿಟಿಕಾ ಕಾರು, 1 ಯಮಹಾ ಆರ್‌ಎಕ್ಸ್‌ ಬೈಕ್‌, 1 ಲ್ಯಾಪ್‌ಟಾಪ್‌, 8 ಎಚ್‌ಎಫ್‌ ಇಲಾತಿ ಹಸು ಗಳು, 1 ಸಿಲಿಂಡರ್‌, ಆಕ್ಸಿಜನ್‌ ಸಿಲಿಂಡರ್‌, ವಾಟರ್‌ ಟ್ಯಾಂಕ್‌, ಗ್ಯಾಸ್‌ ಕಟರ್‌, 40 ಸಾವಿರ ರೂ. ನಗದು ಸೇರಿದಂತೆ ಒಟ್ಟು 35.86 ಲಕ್ಷ ರೂ. ಮೌಲ್ಯದ್ದಾಗಿದೆ.

ಆರೋಪಿ ರವಿಕುಮಾರ್‌ ಈ ಹಿಂದೆ ಶಾಲೆಗಳಲ್ಲಿ ಕಂಪ್ಯೂಟರ್‌ ಕಳವು ಮಾಡಿದ 18 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳೆದ ಆಗಸ್ಟ್‌ನಲ್ಲಿ ಕೆ.ಆರ್‌.ಪೇಟೆ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಹೊಳಲು- ಆಕ್ಕಿಹೆಬ್ಟಾಳು ಮುಖ್ಯ ರಸ್ತೆಯ ಲೀಲಾ ಬ್ಯಾಂಕರ್ಸ್‌ ಅಂಡ್‌ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರು ಅಂಗಡಿಯ ಹಿಂಭಾಗದಲ್ಲಿದ್ದ ವೆಂಟಿಲೇಟರ್‌ ಸರಳನ್ನು ಗ್ಯಾಸ್‌ ಕಟರ್‌ನಿಂದ ಕಟ್‌ ಮಾಡಿ ಗೋಡೆ ಕೊರೆದು ನುಗ್ಗಿ ಶೋಕೇಸ್‌ನಲ್ಲಿ ವ್ಯಾಪಾರಕ್ಕೆಂದು ಇಟ್ಟಿದ್ದ ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ಮಾಡಿದ್ದರು. ಕೆ.ಆರ್‌.ಪೇಟೆ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಮತ್ತು ಮಾಲು ಪತ್ತೆ ಬಗ್ಗೆ ಪೊಲೀಸರ ತಂಡವನ್ನು ರಚನೆ ಮಾಡಲಾಗಿತ್ತು. ಪೊಲೀಸರ ತಂಡ ನಾಗಮಂಗಲ ತಾಲೂಕು ಬೆಳ್ಳೂರು ಕ್ಲಾಸ್‌ನ ಉಮರ್‌ ನಗರದ ಬಳಿ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಹೆಚ್ಚಿನ ತನಿಖೆ ಸಂಬಂಧ ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದಾಗ ಆರೋಪಿಗಳು 11 ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.

ನಾಗಮಂಗಲ ಆರಕ್ಷಕ ಉಪ ಅಧೀಕ್ಷಕ ಲಕ್ಷ್ಮೀನಾರಾಯಣ ಪ್ರಸಾದ್‌ ಮಾರ್ಗದರ್ಶನದಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ದೀಪಕ್‌, ಜಗದೀಶ್‌ ಪಿಎಸ್‌ಐ ಸುನಿಲ್‌, ಸಿದ್ದಲಿಂಗ ಬಾಣಸೆ, ಮತ್ತು ಸಿಬ್ಬಂದಿಗಳಾದ ಚಂದ್ರಶೇಖರ್‌ ಎ.ಎಸ್‌.ಐ. ಬಸವರಾಜು, ರಘು, ಜಯವರ್ಧನ್‌, ಜೀಸನ್‌, ಉಮೇಶ್‌, ಅರುಣ್‌ ಕುಮಾರ್‌, ಅವಿನಾಶ್‌, ಮಂಜು, ಪ್ರದೀಪ, ಪ್ರದೀಪ ಎನ್‌.ಎಲ್‌, ರವಿಕಿರಣ್‌, ಲೋಕೇಶ್‌, ಉಮೇಶ್‌, ಷರೀಫ್‌ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಟಾಧಿಕಾರಿ ಸಿ.ಈ.ತಿಮ್ಮಯ್ಯ ಇದ್ದರು.

ಕದ್ದ ಜಾನುವಾರುಗಳಿಂದಲೇ ಫಾರಂ ಮಾಡಿದ್ದ ಆರೋಪಿ: ಚಾಕೇನಹಳ್ಳಿಯ ರವಿಕುಮಾರ್‌ ಕದ್ದ ಜಾನುವಾರುಗಳಿಂದಲೇ ಬೆಳ್ಳೂರು ಬಳಿ ಫಾರಂ ಮಾಡಿದ್ದನು. ಕದ್ದ ಹಸು, ಎಮ್ಮೆಗಳನ್ನು ಇಲ್ಲಿಯೇ ಬಿಟ್ಟಿದ್ದು, ಹಂತ ಹಂತವಾಗಿ ಮಾರಾಟ ಮಾಡುತ್ತಿದ್ದ. ಅಲ್ಲದೆ, ಕದ್ದ ಹಸುಗಳಿಗೆ ಮೇವಿಗಾಗಿ ಫಿಡ್ಸ್‌ಗಳನ್ನು ಕದಿಯುತ್ತಿದ್ದರು. ಹಗಲು ವೇಳೆ ಕಳ್ಳತನಕ್ಕೆ ಪ್ಲ್ಯಾನ್‌ ಮಾಡುತ್ತಿದ್ದ ಖತರ್ನಾಕ್‌ ತಂಡ, ರಾತ್ರಿ ವೇಳೆ ಹಸು, ಎಮ್ಮೆಗಳನ್ನು ಕದಿಯುತ್ತಿದ್ದರು. ತಿಂಗಳ ಹಿಂದೆ ಹಲಗೂರು, ಚನ್ನಪಟ್ಟಣ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿನ ರೈತರ ಹಸುಗಳನ್ನು ಕದ್ದು ತಂದು ಫಾರಂನಲ್ಲಿಟ್ಟಿದ್ದರು. ನಂತರ ಹಂತ ಹಂತವಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಕಳ್ಳತನವಾಗಿದ್ದ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡು ಹಸುಗಳ ಮಾಲೀಕರಿಗೆ ನೀಡಿದ್ದಾರೆ.

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.