ಪತ್ನಿಯೇ ಸಾವಿಗೆ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಮಗನೊಂದಿಗೆ ನದಿಗೆ ಹಾರಿದ ತಂದೆ
ಮಗನನ್ನು ತಬ್ಬಿಕೊಂಡು ನದಿಗೆ ಹಾರಿದ
Team Udayavani, Jan 15, 2022, 1:17 PM IST
ನಾಗಮಂಗಲ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ತಂದೆ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ತಾಲೂಕಿನ ಬಿಂಡಿಗ ನವಿಲೆ ಹೋಬಳಿಯ ಪಿಟ್ಟೆಕೊಪ್ಪಲು ಗ್ರಾಮ ಸಮೀಪದ ವೀರವೈಷ್ಣವಿ ನದಿಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಪಿಟ್ಟೆಕೊಪ್ಪಲು ಗ್ರಾಮದ ಲೇಟ್ ಬೋರೇಗೌಡರ ಮಗ ಗಂಗಾಧರಗೌಡ ಅಲಿಯಾಸ್ ಪಿ.ಬಿ.ಗಿರೀಶ (36) ಎಂಬಾತನೇ ತನ್ನ 6 ವರ್ಷದ ಪುತ್ರ ಜಸ್ವಿತ್‌ನೊಂದಿಗೆ ಊರಿನಸಮೀಪದ ವೀರವೈಷ್ಣವಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟರು.
ಡೆತ್‌ನೋಟ್: ನನ್ನ ಹಾಗೂ ಮಗನ ಸಾವಿಗೆ ಪತ್ನಿ ಸಿಂಧು ಹಾಗೂ ಎಲ್‌ಐಸಿ ಏಜೆಂಟ್ ಜಿ.ಸಿ.ನಂಜುಂಡೇ ಗೌಡ ಕಾರಣರಾಗಿದ್ದಾರೆ. ಇವರಿಬ್ಬರು ಕೊಟ್ಟಿರುವ ತೊಂದರೆಯನ್ನು ಹೇಳಲು ಕಷ್ಟವಾಗುತ್ತದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕೆಂದು ಗಂಗಾ ಧರಗೌಡ ಬರೆದಿರುವ ಡತ್‌ನೋಟ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ.
ಅನೈತಿಕ ಸಂಬಂಧ: ಮೃತ ಗಂಗಾಧರಗೌಡ ಉ.ಗಿರೀಶ್ ಇದೇ ಹೋಬಳಿಯ ಗರಡಾಪುರ ಗ್ರಾಮದ ಲೇಟ್ ತಮ್ಮಯ್ಯ ಎಂಬುವರ ಮಗಳು ಸಿಂಧುವನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಆರು ವರ್ಷದ ಮಗು (ಜಸ್ವಿತ್) ಇದೆ. ಸಿಂಧು ಹಾಗೂ ಗರುಡಾಪುರ ಗ್ರಾಮದ ಎಲ್‌ಐಸಿ ಏಜೆಂಟ್ ಜಿ.ಸಿ.ನಂಜುಂಡೇ ಗೌಡನ ನಡುವೆ ಕೆಲ ವರ್ಷಗಳಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ.
ಮರ್ಯಾದೆಗೆ ಅಂಜಿ ಆತ್ಮಹತ್ಯೆ: ಈ ವಿಚಾರವಾಗಿ ಗ್ರಾಮದ ಹಿರಿಯರು ಹಲವು ಬಾರಿ ರಾಜಿ ಸಂಧಾನದ ಮೂಲಕ ತಿಳುವಳಿಕೆ ನೀಡಿ ಎಚ್ಚರಿಸಿದ್ದರಾದರೂ ಇವ ರಿಬ್ಬರು ತಮ್ಮ ಚಾಳಿ ಬಿಟ್ಟಿರಲಿಲ್ಲ. ಮರ್ಯಾದೆಗೆ ಅಂಜಿ ಮಗನೊಂದಿಗೆ ತಂದೆಯೂ ನೀರಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆಂದು ಆರೋಪಿಸಿ ಗಂಗಾ ಧರಗೌಡನ ಸಹೋದರ ಬಿ.ಪಿ.ಮಂಜುನಾಥ ಪೊಲೀಸರಿಗೆ ನೀಡಿರುವ ದೂರಿ ನಲ್ಲಿ ತಿಳಿಸಿದ್ದಾರೆ.
ಮೊಬೈಲ್‌ನಲ್ಲಿ ರೆಕಾರ್ಡ್: ತನ್ನ ಪತ್ನಿಯಿಂದ ಕಿರು ಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ ಗಂಗಾ ಧರಗೌಡ, ಪುತ್ರ ಜಸ್ವಿತ್‌ನೊಂದಿಗೆ ಗುರುವಾರ ರಾತ್ರಿ ಮೊಬೈಲ್‌ನಲ್ಲಿ ತಮ್ಮ ಸಂಬಂಧಿಕರೆಲ್ಲರಿಗೂ ಸಂದೇಶ ಕಳಿಸುವ ಉದೇಶ ದಿಂದಲೋ ಏನೋ ನಾನು ಚನ್ನಾಗಿದ್ದೇನೆ. ನೀವೂ ಚನ್ನಾಗಿರಿ ಎಂದು ಹೇಳಿಕೊಟ್ಟು ರೆಕಾರ್ಡ್ ಮಾಡಿಸಿದ್ದಾನೆ. ಮಗುವಿನೊಂದಿಗೆ ತಂದೆ ರೆಕಾರ್ಡ್ ಮಾಡಿಸುವಾಗ ಅಪ್ಪಾ ಏಕಪ್ಪಾ? ಏಕಪ್ಪಾ ಎಂದು ದುಗುಡದ ಧ್ವನಿಯ ಪ್ರಶ್ನೆ ಎಂತಹವರ ಹೃದಯವನ್ನು ಹಿಂಡುವಂತಿದೆ.
ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪಟ್ಟಣದ ಅಗ್ನಿ ಶಾಮಕದಳದ ಸಿಬ್ಬಂದಿಗಳು ಹಾಗೂ ಬಿಂಡಿಗನವಿಲೆ ಪೊಲೀಸರು ಮೃತದೇಹಗಳ ಹುಡುಕಾಟನಡೆಸಿದ ವೇಳೆ ಮೊದಲು ಗಂಗಾಧರಗೌಡನ ಮೃತದೇಹ ಪತ್ತೆಯಾದರೆ, ಮುಂದುವರಿದ ಕಾರ್ಯಾಚರಣೆಯಲ್ಲಿ ಮಧ್ಯಾಹ್ನದ ವೇಳೆಗೆ ಮಗ ಜಸ್ವಿತ್‌ನ ಮೃತದೇಹ ಪತ್ತೆಯಾಯಿತು.
ಆಕ್ರಂದನ: ನದಿಯಲ್ಲಿ ತಂದೆ ಮಗನ ಮೃತದೇಹಗಳು ಪತ್ತೆಯಾಗುತ್ತಿ ದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಹಿರಿಯ ಪೊಲೀಸ್ ಅಧಿಕಾರಿ ಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪ ತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ತಂದೆ ಮಗನ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ನಂಜುಂಡೇಗೌಡನನ್ನು ಬಂಧಿಸಲು ಒತ್ತಾಯ: ತಂದೆ ಮಗನ ಸಾವಿಗೆ ಕಾರಣನಾಗಿರುವ ನಂಜುಂಡೇಗೌಡ ನನ್ನು ಬಂಧಿಸಬೇಕು, ಅಲ್ಲಿಯವರೆಗೂ ಮೃತ ದೇಹ ಗಳ ಅಂತಿಮಕ್ರಿಯೆ ನಡೆಸುವುದಿಲ್ಲಎಂದು ಸಂಬಂ ಧಿಕರು ಪಟ್ಟು ಹಿಡಿದರು. ನಂಜುಂಡೇಗೌಡ ತಲೆ ಮರೆಸಿ ಕೊಂಡಿದ್ದಾನೆ. ಪಿಟ್ಟೆಕೊಪ್ಪಲಿನಲ್ಲಿ ತಂದೆ-ಮಗನ ಅಂತ್ಯಸಂಸ್ಕಾರ ನಡೆಯಿತು.
ಮಗನನ್ನು ತಬ್ಬಿಕೊಂಡು ನದಿಗೆ ಹಾರಿದ :
ರೆಕಾರ್ಡ್ ಆದ ಸಂದೇಶವನ್ನು ಸಂಬಂಧಿಕರ ದೂರವಾಣಿಗೆ ಕಳಿಸಿ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೊರಟಿದ್ದಾನೆ ಎನ್ನಲಾಗಿದೆ. ತಡ ರಾತ್ರಿಯಾದರೂ ಮನೆಗೆ ಗಂಗಾಧರಗೌಡ ಮಗುವಿನೊಂದಿಗೆ ವಾಪಸ್ ಬಾರದಿದ್ದರಿಂದ ಗಾಬರಿಗೊಂಡ ನೆಂಟರಿಷ್ಟರು ಮತ್ತು ಗ್ರಾಮಸ್ಥರು ಹುಡುಕುವ ಪ್ರಯತ್ನ ಮಾಡಿದರೂ ಸಿಗಲಿಲ್ಲ. ಬೆಳಗಾದ ನಂತರ ಮತ್ತೆ ಹುಡುಕಾಟ ಪ್ರಾರಂಭಿಸಿದಾಗ ಪಿಟ್ಟೆಕೊಪ್ಪಲು ಗ್ರಾಮದ ಧರಣೇಶ್ ಎಂಬುವರ ತೋಟದಲ್ಲಿ ಬೈಕ್ ನಿಲ್ಲಿಸಿ, ಮಗುವನ್ನು ತಬ್ಬಿಕೊಂಡು ಪಕ್ಕದಲ್ಲೇ ಇರುವ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರುವುದು ತಿಳಿದು ಬಂದಿದೆ.
ಮೃತನ ಪತ್ನಿ ಸಿಂಧು ನದಿಗೆ ಹಾರಿ ಹೈಡ್ರಾಮ :
ಗಂಡ ಮಗ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಶುಕ್ರವಾರ ಬೆಳಗ್ಗೆ ನದಿಯ ಹತ್ತಿರ ಬಿಂಡಿಗನವಿಲೆ ಠಾಣೆಯ ಪೊಲೀಸರು ಬರುತ್ತಿದ್ದಂತೆ ಹೈಡ್ರಾಮ ನಡೆಸಿದ ಪತ್ನಿ ಸಿಂಧು,ನೋಡನೋಡುತ್ತಿದ್ದಂತೆ ತಾನೂ ನದಿಗೆ ಹಾರಿದ್ದಾಳೆ. ಈ ವೇಳೆಅಲ್ಲೇ ಇದ್ದ ಸ್ಥಳೀಯರು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಿಂಧುಳನ್ನು ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.