ಕೆಳಸೇತುವೆ ಕಾಮಗಾರಿ: ರೈಲು ಸಂಚಾರ ವ್ಯತ್ಯಯ
Team Udayavani, Jul 16, 2023, 3:47 PM IST
ಮಂಡ್ಯ: ನಗರದ ಮಹಾವೀರ ವೃತ್ತದಿಂದ ಪೇಟೆ ಬೀದಿ ಯವರೆಗೂ ರೈಲ್ವೆಯ ಲೆವಲ್ ಕ್ರಾಸ್ ಗೇಟ್ -73ರ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಜು.17ರಿಂದ 31ರವ ರೆಗೆ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ಕಾಮಗಾರಿಯು ಹಲವು ದಿನಗಳಿಂದ ನಡೆ ಯು ತ್ತಿದ್ದು, ಈಗಾಗಲೇ ಕೆಳ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಕಾಮಗಾರಿ ಸಂದರ್ಭದಲ್ಲಿ ರೈಲು ಗಳ ಸಂಚಾರ ಸಾಧ್ಯವಿಲ್ಲದ ಕಾರಣ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು, ಮಾರ್ಗ ಬದಲಾ ವಣೆ, ಸಮಯದ ಬದಲಾವಣೆ ಹಾಗೂ ಮಾರ್ಗ ಮಧ್ಯೆ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ.
ರೈಲು ರದ್ದು: ಜು.22ರಂದು ಮೈಸೂರಿನಿಂದ ರಾತ್ರಿ ವೇಳೆ ಪ್ರಾರಂಭಿಸುವ 06269 ಸಂಖ್ಯೆಯ ಮೈಸೂರು- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗ ಳೂರು ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿ ಸಲಾಗಿದೆ.
ಭಾಗಶಃ ರದ್ದು: 06255 ಸಂಖ್ಯೆಯ ಕೆಎಸ್‌ಆರ್ ಬೆಂಗಳೂರು -ಮೈಸೂರು ಮೆಮು ರೈಲನ್ನು ಜು.17 ಮತ್ತು 22ರಂದು ಮದ್ದೂರು- ಮೈಸೂರು ನಿಲ್ದಾಣ ಗಳ ನಡುವೆ ಭಾಗಶಃ ರದ್ದುಗೊಳಿಸಲಾ ಗುತ್ತಿದೆ. ಈ ರೈಲು ಮದ್ದೂರಿ ನಲ್ಲಿ ತನ್ನ ಪ್ರಯಾಣ ಕೊನೆಗೊಳಿ ಸಲಿದೆ. 06560 ಸಂಖ್ಯೆಯ ಮೈಸೂರು – ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು ಜು.17 ಮತ್ತು 22ರಂದು ಮೈಸೂರು-ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸ ಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ. 06267 ಸಂಖ್ಯೆಯ ಅರಸೀಕೆರೆ- ಮೈಸೂರು ಎಕ್ಸ್ ಪ್ರಸ್ ವಿಶೇಷ ರೈಲನ್ನು ಜು.22ರಂದು ಹಾಸನ- ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊ ಳಿಸಲಾಗುತ್ತಿದೆ. ಈ ರೈಲು ಹಾಸನದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. 06559 ಸಂಖ್ಯೆಯ ಕೆಎಸ್ ಆರ್ ಬೆಂಗಳೂರು – ಮೈಸೂರು ಮೆಮು ರೈಲನ್ನು ಜು.26 ಮತ್ತು 31ರಂದು ಮದ್ದೂರು – ಮೈಸೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. 06256 ಸಂಖ್ಯೆಯ ಮೈಸೂರು – ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು ಜು.26 ಮತ್ತು 31ರಂದು ಮೈಸೂರು – ಮದ್ದೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾ ಗುತ್ತಿದೆ. ಈ ರೈಲು ಮದ್ದೂರು ನಿಲ್ದಾಣದಿಂದ ಹೊರಡಲಿದೆ.
ತಡವಾಗಿ ಪ್ರಾರಂಭ, ನಿಯಂತ್ರಣ: ಜು.23 ರಂದು ಮೈಸೂರಿನಿಂದ ಪ್ರಾರಂಭಿಸುವ 12610 ಸಂಖ್ಯೆಯ ಮೈಸೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷಗಳ ತಡವಾಗಿ ಮತ್ತು 30 ನಿಮಿಷ ಕಾಲ ಹಾಗೂ ಬೆಂಗ ಳೂರಿ ನಿಂದ ಪ್ರಾರಂಭಿಸುವ 06559 ಸಂಖ್ಯೆಯ ಕೆಎಸ್‌ಆರ್ ಬೆಂಗಳೂರು- ಮೈಸೂರು ಮೆಮು ರೈಲನ್ನು ಮೂಲ ನಿಲ್ದಾಣದಿಂದ 45 ನಿಮಿಷಗಳ ತಡವಾಗಿ ಮತ್ತು 30 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿ ಸಲಾಗುತ್ತಿದೆ. ಮೈಸೂರಿನಿಂದ ಪ್ರಾರಂಭವಾಗುವ 06256 ಸಂಖ್ಯೆಯ ರೈಲು ಮೈಸೂರು – ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು 60 ನಿಮಿಷಗಳ ಕಾಲ ಮಾರ್ಗಮಧ್ಯೆ ನಿಯಂತ್ರಿಸ ಲಾಗುವುದು. ಜು.25ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿ ನಲ್ ಬೆಂಗಳೂರಿನಿಂದ ಪ್ರಾರಂಭವಾಗುವ 06270 ಸಂಖ್ಯೆಯ ಸರ್ ಎಂ. ವಿಶ್ವೇಶ್ವ ರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮೂಲ ನಿಲ್ದಾಣದಿಂದ 70 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ಮಾರ್ಗ ಮಧ್ಯೆ ನಿಯಂತ್ರಣ: ಜು.16ರಂದು ಅಜ್ಮಿàರ್‌ನಿಂದ ಪ್ರಾರಂಭವಾಗುವ 16209 ಸಂಖ್ಯೆಯ ಅಜ್ಮಿರ್ ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗ ದಲ್ಲಿ ತಲಾ 30 ನಿಮಿಷಗಳ ಕಾಲ ನಿಯಂತ್ರಿಸಲಾ ಗುತ್ತಿದೆ. ಜು.17 ರಂದು ಮಂಗಳೂರು ಸೆಂಟ್ರಲ್‌ನಿಂದ ಪ್ರಾರಂಭ ವಾಗುವ 16586 ಸಂಖ್ಯೆಯ ಮಂಗಳೂರು ಸೆಂಟ್ರಲ್- ಸರ್‌ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾ ಗುತ್ತಿದೆ. ಅದೇ ದಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿ ನಿಂದ ಪ್ರಾರಂಭವಾಗುವ 06270 ಸಂಖ್ಯೆಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 10 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ. ಜು.21ರಂದು ಅಜ್ಮೀರ್‌ನಿಂದ ಪ್ರಾರಂಭವಾಗುವ 16209 ಸಂಖ್ಯೆಯ ಅಜ್ಮೀರ್ -ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯೆ 30 ನಿಮಿಗಳ ಕಾಲ ನಿಯಂತ್ರಿಸಲಾಗುತ್ತಿದೆ. ಜು.22ರಂದು ರೆಣಿಗುಂಟಾದಿಂದ ಪ್ರಾರಂಭ ವಾ ಗುವ 22136 ಸಂಖ್ಯೆಯ ರೆಣಿಗುಂಟಾ – ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 75 ನಿಮಿಷಗಳ ಕಾಲ, ಜು.23ರಂದು ಮೈಸೂರಿನಿಂದ ಪ್ರಾರಂಭ ವಾಗುವ 06256 ಸಂಖ್ಯೆಯ ಮೈಸೂರು – ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು ಮಾರ್ಗಮಧ್ಯೆ 10 ನಿಮಿಷಗಳ ಕಾಲ ಹಾಗೂ ಅದೇ ದಿನ ಮೈಸೂರಿನಿಂದ ಪ್ರಾರಂಭವಾಗುವ 17326 ಸಂಖ್ಯೆಯ ಮೈಸೂರು – ಬೆಳಗಾವಿ ರೈಲನ್ನು ಮಾರ್ಗ ಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಜು.30ರಂದು ಎಂಜಿಆರ್ ಚೆನ್ನೈ ಸೆಂಟ್ರಲ್ ನಿಂದ ಪ್ರಾರಂಭವಾಗುವ 16021 ಸಂಖ್ಯೆಯ ಎಂಜಿಆರ್ ಚೆನ್ನೈ ಸೆಂಟ್ರಲ್ -ಮೈಸೂರು ಎಕ್ Õಪ್ರಸ್ ರೈಲನ್ನು ಮಾರ್ಗಮಧ್ಯೆ 90 ನಿಮಿಷಗಳ ಕಾಲ ಹಾಗೂ ಅದೇ ದಿನ ತಿರುಪತಿಯಿಂದ ಪ್ರಾರಂಭವಾಗುವ 16220 ತಿರುಪತಿ- ಚಾಮರಾಜನಗರ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿ ಸಲಾಗು ವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಗ ಬದಲಾವಣೆ : ಜು.22 ಮತ್ತು 30ರಂದು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿ ನಿಂದ ಪ್ರಾರಂಭವಾಗುವ 16585 ಸಂಖ್ಯೆಯ ರೈಲು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಮಂಗಳೂರು ಸೆಂಟ್ರಲ್ ಎಕ್ಸ್ ಪ್ರಸ್ ರೈಲು ಸರ್‌ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಬಾನಸವಾಡಿ, ಹೆಬ್ಟಾಳ, ಯಶವಂತಪುರ ಎ ಕ್ಯಾಬಿನ್, ಚಿಕ್ಕಬಾಣಾವರ, ನೆಲಮಂಗಲ, ಹಾಸನ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೆಂಗಳೂರು ಕಂಟೋನ್‌ಮೆಂಟ್, ಕೆಎಸ್ ಆರ್ ಬೆಂಗಳೂರು, ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು, ಕೃಷ್ಣರಾಜನಗರ ಮತ್ತು ಹೊಳೆನರಸೀಪುರ ನಿಲ್ದಾಣ ಗಳಲ್ಲಿ ನಿಲುಗಡೆ ಇರುವುದಿಲ್ಲ.
ಮಹಾವೀರ ವೃತ್ತದಿಂದ ಪೇಟೆಬೀದಿಯವರೆಗೆ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವ ಯಾವ ದಿನಾಂಕ ಎಂಬುದರ ನಮ್ಮ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಸಂಚಾರದಲ್ಲಿ ಸಮಯ, ಮಾರ್ಗ ಬದಲಾವಣೆ, ಮಾರ್ಗಮಧ್ಯೆ ನಿಲುಗಡೆ, ತಡವಾಗಿ ಆರಂಭ, ನಿಯಂತ್ರಣ ಮಾಡುವ ಬಗ್ಗೆ ತಿಳಿಸಲಾಗಿದೆ. ●ಮಣಿಯಯ್ಯ, ಸ್ಟೇಷನ್ ಮಾಸ್ಟರ್, ಮಂಡ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.