24ರಂದು ಪ್ರಸಿದ್ಧ ವೈರಮುಡಿ ಉತ್ಸವ


Team Udayavani, Mar 22, 2021, 1:57 PM IST

24ರಂದು ಪ್ರಸಿದ್ಧ ವೈರಮುಡಿ ಉತ್ಸವ

ಮೇಲುಕೋಟೆ: ವಿಶ್ವ ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ ಮಾ.24ರಂದು ನಡೆಯುವ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಲ್ಲೇ ಕಾಣದ ರೀತಿ ವೈರಮುಡಿ ಜಾತ್ರಾ ಮಹೋತ್ಸವ ರಂಗು ಪಡೆದಿದೆ. ದೀಪಾಲಂಕಾರ: ವಿಶೇಷ ದೀಪಾಲಂಕಾರದಿಂದ ಮೇಲುಕೋಟೆ ಸಂಪೂರ್ಣವಾಗಿ ಜಗಮಗಿಸುತ್ತಿದ್ದು, ಮೇಲುಕೋಟೆಯ ರಾಜಬೀದಿ, ಉತ್ಸವಬೀದಿ, ಕಲ್ಯಾಣಿ, ಚೆಲುವನಾರಾಯಣಸ್ವಾಮಿ ದೇವಾಲಯಅಕ್ಕತಂಗಿಕೊಳ, ರಾಯಗೋಪುರ ಕಲ್ಯಾಣಿ ಬೀದಿ ಮತ್ತಿತರ ಕಡೆಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ.

ಪಾರ್ಕರ್‌ ಲೈಟ್‌: ಚೆಲುವನಾರಾಯಣಸ್ವಾಮಿ ದೇವಾ ಲಯದ ಗಂಡಬೇರುಂಡ ರಾಜ ಗೋಪುರ 15 ಸೆಕೆಂಡಿಗೊಮ್ಮೆ ಬದಲಾ ಗುವ ಆಕರ್ಷಕ ಪಾರ್ಕರ್‌ ಲೈಟ್‌ ಬೆಳಕಿನಿಂದ ಕಂಗೊಳಿಸುತ್ತಿದೆ.ಪ್ರಮುಖ ಬೀದಿಗಳಲ್ಲಿ ಅಳವಡಿ ಸಿರುವ ಎಲ್‌ಇಡಿ ದೀಪಾಲಂಕಾ ರದ ಸೊಬಗು ಭಕ್ತರ ಮನ ಸೂÃ ಗೊಂಡಿದೆ.

ಕಲ್ಯಾಣೋತ್ಸವ: ಮೇಲು ಕೋಟೆಯ ಪ್ರಮುಖ ಆಕ ರ್ಷಣೆ ಯೋಗನರಸಿಂಹ ಸ್ವಾಮಿ ಬೆಟ್ಟಕ್ಕೂ ಅತ್ಯಾಕರ್ಷಕದೀಪಾಲಂಕಾರ ಮಾಡುವ ಕಾರ್ಯ ಭರದಿಂದ ಸಾಗಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡಪ್ರಮುಖ ಬೀದಿಗಳು ಮತ್ತು ಕಲ್ಯಾಣಿಯಲ್ಲಿ ದೀಪಾಲಂಕಾರ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಯೋಗನರಸಿಂಹಸ್ವಾಮಿ ಬೆಟ್ಟ ಹಾಗೂ ಚೆಲುವನಾರಾಯಣ ಸ್ವಾಮಿ ದೇವಾಲಯ ಮತ್ತು ಉತ್ಸವ ಬೀದಿಗಳಲ್ಲಿ ಮತ್ತಷ್ಟು ವಿಶೇಷ ದೀಪಾಲಂಕಾರ ಮಾಡುವಂತೆ ಚೆಸ್ಕಾಂ ಅ ಧಿಕಾರಿಗಳಿಗೆಸೂಚನೆ ನೀಡಿದರು. ಇದೇ ವೇಳೆ ದೀಪಾಲಂಕಾರದ ಯಶಸ್ಸಿಗೆ ಶ್ರಮಿಸುತ್ತಿರುವ ಚೆಸ್ಕಾಂ ಮಂಡ್ಯ ವೃತ್ತದ ಅ ಧೀಕ್ಷಕ ಇಂಜಿನಿಯರ್‌ ಸ್ವಾಮಿ ಅವರನ್ನು ಸಚಿವ ನಾರಾಯಣಗೌಡ ಅಭಿನಂದಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಗಳೇ ಮೈಸೂರಿನ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ ಕಾರಣ ದಸರಾ ಮಾದರಿಯಲ್ಲಿ ಎಲ್‌ಇಡಿ ಬಲ್ಬ್ ಬಳಸಿ ದೀಪಾಲಂಕಾರ ಮಾಡಲಾಗಿದೆ. ಭಕ್ತರ ಕಣ್ಮನ ಸೆಳೆಯುತ್ತಿದೆ. ಪಾಂಡವಪುರ ಉಪವಿಭಾಗಾಧಿಕಾರಿಶಿವಾನಂದಮೂರ್ತಿ, ಚೆಸ್ಕಾಂ ಸಹಾ ಯಕ ಕಾರ್ಯ ಪಾಲಕ ಇಂಜಿನಿಯರ್‌ ಪುಟ್ಟಸ್ವಾಮಿ, ಮೇಲುಕೋಟೆ ಸಹಾಯಕ ಇಂಜಿನಿಯರ್‌ ಸತೀಶ್‌ ಇದ್ದರು.

ಕಾರ್ಯಕ್ರಮಗಳ ವಿವರ :

ಮಾ. 22: ಬೆಳಗ್ಗೆ ಆಚಾರ್ಯ ರಾಮಾನುಜರಿಗೆ ಅಭಿಷೇಕ, ರಾತ್ರಿ

ಸ್ವಾಮಿಗೆ ಶೇಷವಾಹನೋತ್ಸವ

ಮಾ. 23: ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲಿ ಮಹೋತ್ಸವ, ರಾತ್ರಿ

ಚಂದ್ರಮಂಡಲ ವಾಹನೋತ್ಸವ

ಮಾ. 25: ಸಂಜೆ ವೇದಾಂತ ದೇಶಿಕರ ಸನ್ನಿ ಧಿಯಲ್ಲಿ ಪ್ರಹ್ಲಾದ

ಪರಿಪಾಲನ, ರಾತ್ರಿ ಗರುಡ ವಾಹನೋತ್ಸವ

ಮಾ. 26: ಸಂಜೆ ಗಜೇಂದ್ರಮೋಕ್ಷ, ರಾತ್ರಿ ಆನೆ, ಕುದುರೆ ವಾಹನೋತ್ಸವ

ಮಾ. 27: ರಂದು ಬೆಳಗ್ಗೆ 10ಕ್ಕೆ ಮಹಾರಥೋತ್ಸವ, ರಾತ್ರಿ ಹರಿಜನ

ಸೇವೆಯಾದ ಪುಷ್ಪ ಪಲ್ಲಕ್ಕಿ ಉತ್ಸವ

ಮಾ. 28: ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ರಾತ್ರಿ ಕಳ್ಳರ ಸುಲಿಗೆ

ಮಾ. 29: ಬೆಳಗ್ಗೆ ಸಂಧಾನ ಸೇವೆ, ನಂತರ ಕಲ್ಯಾಣಿಯಲ್ಲಿ ತೀರ್ಥ

ಸ್ನಾನ, ಸಂಜೆ ಪರಕಾಲ ಮಠದಲ್ಲಿ ಪಟ್ಟಾಭಿಷೇಕ. ರಾತ್ರಿ ಸಮರ

ಭೂಪಾಲ ವಾಹನೋತ್ಸವ

ಮಾ. 30: ಬೆಳಗ್ಗೆ ಮಹಾಭಿಷೇಕ, ಸಂಜೆ ಹನುಮಂತ ವಾಹನೋತ್ಸವ.

ಟಾಪ್ ನ್ಯೂಸ್

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.